AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್ ಸ್ಪರ್ಧಿಗಳಿಗೆ​ ಚಿತ್ರ-ವಿಚಿತ್ರ ಅವಾರ್ಡ್​; ಚಕ್ರವರ್ತಿಗೆ ಬ್ಲೇಡ್​ ರಾಜ ಪ್ರಶಸ್ತಿ

Bigg Boss Kannada: ಬಿಗ್​ ಬಾಸ್​ ಮನೆಯಲ್ಲಿ ಸದಾ ಕಾಲ ಮಿಂಚುತ್ತಲೇ ಇರುವವರು ಯಾರು ಎಂಬ ಪ್ರಶ್ನೆಗೆ ಹೆಚ್ಚು ಜನರು ದಿವ್ಯಾ ಸುರೇಶ್​ ಹೆಸರನ್ನು ಸೂಚಿಸಿದರು. ಹಾಗಾಗಿ ಅವರಿಗೆ ಮಿಂಚಿಂಗ್​ ಸ್ಟಾರ್​ ಪ್ರಶಸ್ತಿ ನೀಡಲಾಯಿತು.

ಬಿಗ್​ ಬಾಸ್ ಸ್ಪರ್ಧಿಗಳಿಗೆ​ ಚಿತ್ರ-ವಿಚಿತ್ರ ಅವಾರ್ಡ್​; ಚಕ್ರವರ್ತಿಗೆ ಬ್ಲೇಡ್​ ರಾಜ ಪ್ರಶಸ್ತಿ
ರಘು ಗೌಡ-ಚಕ್ರವರ್ತಿ ಚಂದ್ರಚೂಡ್
ಮದನ್​ ಕುಮಾರ್​
|

Updated on: May 10, 2021 | 7:11 AM

Share

ಸತತ 70 ದಿನಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ್ದ ‘ಬಿಗ್​ ಬಾಸ್​ ಕನ್ನಡ ಸೀಸನ್​ 8’ಕ್ಕೆ ತೆರೆಬೀಳುತ್ತಿದೆ. ಫಿನಾಲೆಗಾಗಿ ಕಾಯುತ್ತಿದ್ದ ಪ್ರೇಕ್ಷಕರಿಗೆ ನಿಜಕ್ಕೂ ಬೇಸರ ಆಗಿದೆ. 11 ಜನರು ಒಂದೇ ಬಾರಿಗೆ ದೊಡ್ಮನೆಯಿಂದ ಹೊರಬರಬೇಕಾದ ಪರಿಸ್ಥಿತಿ ಬಂದಿದೆ. ಕೊರೊನಾ ವೈರಸ್​ ಮಿತಿಮೀರಿ ಹರಡುತ್ತಿರುವುದರಿಂದ ಸರ್ಕಾರ ಕಠಿಣ ಲಾಕ್​ಡೌನ್​ ಜಾರಿ ಮಾಡಿದ್ದು ಅನಿವಾರ್ಯವಾಗಿ ಶೋ ಅರ್ಧಕ್ಕೆ ನಿಲ್ಲಿಸಲಾಗುತ್ತಿದೆ. ಅದರ ನಡುವೆಯೂ ಬಿಗ್​ ಬಾಸ್ ಕಡೆಯಿಂದ ಕೆಲವು ಫನ್ನಿ ಅವಾರ್ಡ್​ಗಳನ್ನು ನೀಡಲಾಗಿದೆ.​

ಬ್ಲೇಡ್​ ರಾಜ ಅವಾರ್ಡ್​

ಪದೇಪದೇ ಅತಿಯಾಗಿ ಮಾತನಾಡುತ್ತಾರೆ ಎಂಬ ಕಾರಣಕ್ಕೆ ಚಕ್ರವರ್ತಿ ಚಂದ್ರಚೂಡ್​ ಅವರ ಹೆಸರನ್ನು​ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್​ ಸೇರಿದಂತೆ 9 ಜನರು ಚಕ್ರವರ್ತಿ ಹೆಸರನ್ನು ಶಿಫಾರನ್ನು ಮಾಡಿದ್ದರಿಂದ ಬ್ಲೇಡ್​ ರಾಜ ಪ್ರಶಸ್ತಿಯು ಚಕ್ರವರ್ತಿ ಚಂದ್ರಚೂಡ್​ ಪಾಲಾಯಿತು. ಅತಿ ಕಡಿಮೆ ಮಾತನಾಡುವ ಪ್ರಿಯಾಂಕಾ ತಿಮ್ಮೇಶ್​ ಅವರಿಂದ ಈ ಪ್ರಶಸ್ತಿಯನ್ನು ಕೊಡಿಸಲಾಯಿತು.

ಸ್ಲೋ ಮೋಷನ್​ ಸುಂದ್ರ​ ಯಾರು?

ಶಮಂತ್​, ನಿಧಿ ಮತ್ತು ರಘು ಗೌಡ ಹೆಸರು ಈ ಪ್ರಶಸ್ತಿಗೆ ನಾಮಿನೇಟ್​ ಆದವು. ಆದರೆ ರಘು ಗೌಡಗೆ ಹೆಚ್ಚು ಸ್ಪರ್ಧಿಗಳು ವೋಟ್​ ಮಾಡಿದ್ದರಿಂದ ಅವರಿಗೆ ಸ್ಲೋ ಮೋಷನ್​ ಸುಂದ್ರ ಎಂಬ ಪ್ರಶಸ್ತಿ ನೀಡಲಾಯಿತು. ಟಾಸ್ಕ್​ ಮಾಡುವಾಗ, ಮನೆ ಕೆಲಸ ಮಾಡುವಾಗ ಮತ್ತು ಮಾತನಾಡುವಾಗ ಕೂಡ ರಘು ಸಿಕ್ಕಾಪಟ್ಟೆ ಸ್ಲೋ ಎಂಬುದನ್ನು ಎಲ್ಲರೂ ಒತ್ತಿ ಹೇಳಿದರು. ಮನೆಯಲ್ಲಿ ಅತಿ ಸ್ಪೀಡ್​ ಆಗಿರುವ ಪ್ರಶಾಂತ್​ ಸಂಬರಗಿ ಅವರು ಈ ಪ್ರಶಸ್ತಿಯನ್ನು ರಘುಗೆ ಪ್ರದಾನ ಮಾಡಿದರು.

ಮಿಂಚಿಂಗ್​ ಸ್ಟಾರ್​ ದಿವ್ಯಾ

ಬಿಗ್​ ಬಾಸ್​ ಮನೆಯಲ್ಲಿ ಸದಾ ಕಾಲ ಮಿಂಚುತ್ತಲೇ ಇರುವವರು ಯಾರು ಎಂಬ ಪ್ರಶ್ನೆಗೆ ಹೆಚ್ಚು ಜನರು ದಿವ್ಯಾ ಸುರೇಶ್​ ಹೆಸರನ್ನು ಸೂಚಿಸಿದರು. ಹಾಗಾಗಿ ಅವರಿಗೆ ಮಿಂಚಿಂಗ್​ ಸ್ಟಾರ್​ ಪ್ರಶಸ್ತಿ ನೀಡಲಾಯಿತು. ಇನ್ನೂ ಕೆಲವು ಅವಾರ್ಡ್​ಗಳು ಕಾಯುತ್ತಿವೆ. ಮೇ 10ರ ಎಪಿಸೋಡ್​ನಲ್ಲಿ ಆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

ಇದನ್ನೂ ಓದಿ: 

ಚಕ್ರವರ್ತಿ ತೆಗೆದುಕೊಂಡ ಆ ಒಂದು ನಿರ್ಧಾರ ಅವರ ಬಿಗ್​ ಬಾಸ್​ ಜರ್ನಿಯನ್ನೇ ಬದಲಾಯಿಸಿತು

ನನ್ನನ್ನು ವೇಶ್ಯೆ ಮನೆಯಲ್ಲಿ ಕೆಲಸಕ್ಕೆ ಬಿಟ್ಟಿದ್ದರು; ಭಯಾನಕ ಘಟನೆ ಬಗ್ಗೆ ಹೇಳಿಕೊಂಡ ಚಕ್ರವರ್ತಿ

ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು