Bigg Boss Kannada: ಚಿಕ್ಕ ಹುಡುಗ ವಿಶ್ವನಾಥ್ಗೆ ಶಿಷ್ಯನಾದ ಸಂಬರಗಿ! ಒಂದೇ ವಾರದಲ್ಲಿ ಗೇಮ್ ಚೇಂಜ್ ಮಾಡಿದ ಕಿಚ್ಚ!
ವೀಕ್ಷಕರು ಊಹಿಸಲೂ ಸಾಧ್ಯವಾಗದಂತಹ ಟ್ವಿಸ್ಟ್ಗಳು ಬಿಗ್ ಬಾಸ್ ಮನೆಯಲ್ಲಿ ಕಾಣಿಸುತ್ತಿವೆ. ಮನೆಯೊಳಗಿನ ಚಿಕ್ಕ ಸ್ಪರ್ಧಿ ವಿಶ್ವನಾಥ್ಗೆ ಪ್ರಶಾಂತ್ ಸಂಬರಗಿ ಶಿಷ್ಯನಾಗಿದ್ದಾರೆ.
ಬಿಗ್ ಬಾಸ್ನಲ್ಲಿ ಏನು ಬೇಕಾದರೂ ಆಗಬಹುದು. ಇಂದು ಹಾರಾಡಿದವರು ನಾಳೆ ಮುಗ್ಗರಿಸಿ ಬೀಳಬಹುದು. ಪ್ರಶಾಂತ್ ಸಂಬರಗಿ ಮತ್ತು ವಿಶ್ವನಾಥ್ ನಡುವೆಯೂ ಹಾಗೆಯೇ ಆಗಿದೆ. ಅದಕ್ಕೆ ಕಾರಣ ಆಗಿರುವುದು ಮಾತ್ರ ಕಿಚ್ಚ ಸುದೀಪ್! ಹೌದು, ಎರಡನೇ ವಾರದ ಪಂಚಾಯಿತಿಯಲ್ಲಿ ಸುದೀಪ್ ಇಂಥದ್ದೊಂದು ಟ್ವಿಸ್ಟ್ ನೀಡಿದ್ದಾರೆ.
ವಿಶ್ವ ವೀಕ್ ಎಂದಿದ್ದ ಸಂಬರಗಿ ಮೊದಲ ವಾರದಲ್ಲಿ ನಾಮಿನೇಷನ್ನಿಂದ ಬಚಾವ್ ಆಗಲು ಇದ್ದ ಟಾಸ್ಕ್ನಲ್ಲಿ ವಿಶ್ವನಾಥ್ ಅವರನ್ನು ಪ್ರಶಾಂತ್ ಪ್ರತಿಸ್ಪರ್ಧಿಯಾಗಿ ಆಯ್ಕೆ ಮಾಡಿಕೊಂಡಿದ್ದರು. ಅವರ ಆಯ್ಕೆಗೆ ಕಾರಣ ಏನು ಎಂದು ಕೇಳಿದ್ದಕ್ಕೆ, ‘ವಿಶ್ವ ತುಂಬಾ ವೀಕ್ ಸ್ಪರ್ಧಿ. ನನ್ನ ಸ್ವಾರ್ಥಕ್ಕಾಗಿ ಅವರನ್ನು ಆಯ್ಕೆ ಮಾಡಿಕೊಂಡೆ’ ಎಂದು ಪ್ರಶಾಂತ್ ಸಂಬರಗಿ ಉತ್ತರ ನೀಡಿದ್ದರು. ಸುದೀಪ್ ಮುಂದೆ ಅದನ್ನು ಪ್ರಶಾಂತ್ ಒಪ್ಪಿಕೊಂಡಿದ್ದರು ಕೂಡ. ಅಲ್ಲದೆ, ಆ ಟಾಸ್ಕ್ನಲ್ಲಿ ವಿಶ್ವನಾಥ್ ಎದುರು ಪ್ರಶಾಂತ್ ಗೆದ್ದು ಬೀಗಿದ್ದರು. ಆದರೆ ತಮ್ಮನ್ನು ವೀಕ್ ಎಂದು ಕರೆದಿದ್ದು ವಿಶ್ವನಾಥ್ಗೆ ಬೇಸರ ಮೂಡಿಸಿತ್ತು.
ಆದರೆ ಈಗ ಗೇಮ್ ಚೇಂಜ್! ಎರಡನೇ ವಾರದ ಪಂಚಾಯಿತಿಯಲ್ಲಿ ಒಂದು ಹಾಡು ಹೇಳುವಂತೆ ವಿಶ್ವನಾಥ್ಗೆ ಸುದೀಪ್ ಸೂಚಿಸಿದರು. ಅದರಂತೆ, ಮನೆಯೊಳಗೆ ತಾವೇ ಕಂಪೋಸ್ ಮಾಡಿದ ಹಾಡನ್ನು ವಿಶ್ವನಾಥ್ ಹೇಳಿದರು. ಅದೇ ಹಾಡಿನ ನಾಲ್ಕು ಸಾಲು ಹೇಳುವಂತೆ ಪ್ರಶಾಂತ್ಗೆ ಸುದೀಪ್ ಸೂಚಿಸಿದರು. ಆದರೆ ಪ್ರಶಾಂತ್ ಹಾಡಿದ ರೀತಿ ಅಷ್ಟಾಗಿ ಯಾರಿಗೂ ಹಿಡಿಸಲಿಲ್ಲ. ಇನ್ನೊಂದು ವಾರದೊಳಗೆ ಕಲಿತು ಹಾಡುತ್ತೇನೆ ಎಂದು ಪ್ರಶಾಂತ್ ಭರವಸೆ ನೀಡಿದ್ದಾರೆ. ಅವರಿಗೆ ಹಾಡು ಕಲಿಸುವ ಜವಾಬ್ದಾರಿಯನ್ನು ವಿಶ್ವನಾಥ್ಗೆ ವಹಿಸಲಾಗಿದೆ. ಅಂದು ವೀಕ್ ಎಂದು ಪರಿಗಣಿಸಿದ್ದ ವಿಶ್ವನಾಥ್ಗೆ ಇಂದು ಹಾಡಿನ ವಿಚಾರದಲ್ಲಿ ಪ್ರಶಾಂತ್ ಶಿಷ್ಯನಾಗಿದ್ದಾರೆ!
ಒಬ್ಬರು ಒಂದು ವಿಚಾರದಲ್ಲಿ ಸ್ಟ್ರಾಂಗ್ ಆಗಿದ್ದರೆ, ಇನ್ನೊಂದು ವಿಚಾರದಲ್ಲಿ ವೀಕ್ ಆಗಿರುವುದು ಸಹಜ. ಮಾತುಗಾರಿಕೆ ಮತ್ತು ಟಾಸ್ಕ್ ವಿಚಾರದಲ್ಲಿ ಪ್ರಶಾಂತ್ ಸ್ಟ್ರಾಂಗ್ ಆಗಿರಬಹುದು. ಆದರೆ ಹಾಡುಗಾರಿಕೆಯಲ್ಲಿ ಅವರು ವೀಕ್ ಎಂಬುದು ಎಲ್ಲರ ಎದುರು ಬಹಿರಂಗ ಆಗಿದೆ. ಈ ವಿಚಾರವನ್ನು ಮನಗಾಣಿಸುವ ಸಲುವಾಗಿಯೇ ಸುದೀಪ್ ಈ ಟಾಸ್ಕ್ ನೀಡಿದ್ದಾರಾ? ಹಾಡು ಕಲಿತು ಪ್ರಶಾಂತ್ ಎಲ್ಲರ ಎದುರಿನಲ್ಲೂ ಭೇಷ್ ಎನಿಸಿಕೊಳ್ಳುತ್ತಾರಾ? ಈ ಎಲ್ಲ ಪ್ರಶ್ನೆಗಳಿಗೆ ಮುಂದಿನ ವಾರದ ಪಂಚಾಯಿತಿಯಲ್ಲಿ ಉತ್ತರ ಸಿಗಬೇಕಿದೆ.
ಇದನ್ನೂ ಓದಿ: Bigg Boss Kannada Elimination: ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ನಿರ್ಮಲಾ ಚೆನ್ನಪ್ಪ; ಇಲ್ಲಿದೆ ಕಾರಣ
‘ಅಸಭ್ಯವಾಗಿ ಮುಟ್ಟಿದರೆ ಬಿಗ್ ಬಾಸ್ ಸಹಿಸಲ್ಲ’: ಸುದೀಪ್ ಹೀಗೆ ಎಚ್ಚರಿಕೆ ನೀಡಿದ್ದು ಯಾರಿಗೆ?