ರಿಯಾಲಿಟಿ ಶೋಗಳ ಪೈಕಿ ಬಿಗ್ ಬಾಸ್ ಈವರೆಗೂ ಬೇಡಿಕೆ ಉಳಿಸಿಕೊಂಡಿದೆ. ಹಿಂದಿಯಲ್ಲಿ ಯಶಸ್ವಿಯಾಗಿ 14 ಸೀಸನ್ ಪೂರ್ಣಗೊಂಡರೆ, ಕನ್ನಡದಲ್ಲಿ 8ನೇ ಸೀಸನ್ ಎರಡನೇ ಇನ್ನಿಂಗ್ಸ್ ಆರಂಭಗೊಳ್ಳುತ್ತಿದೆ. ಈಗ ‘ಹಿಂದಿ ಬಿಗ್ ಬಾಸ್ ಸೀಸನ್ 15’ ಸಿದ್ಧತೆ ನಡೆದಿದೆ. ಅಚ್ಚರಿ ವಿಚಾರ ಏಂದರೆ, ಈ ಸೀಸನ್ ಬರೋಬ್ಬರಿ 6 ತಿಂಗಳು ಪ್ರಸಾರ ಆಗಲಿದೆಯಂತೆ.
ಸಾಮಾನ್ಯವಾಗಿ ಬಿಗ್ ಬಾಸ್ ಪ್ರತೀ ಸೀಸನ್ 100ರಿಂದ 120 ದಿನಗಳ ಕಾಲ ನಡೆಯುತ್ತದೆ. ಅಂದರೆ ನಾಲ್ಕು ತಿಂಗಳಿಗೆ ಬಿಗ್ ಬಾಸ್ ಪೂರ್ಣಗೊಳ್ಳುತ್ತದೆ. ಅದರೆ, ಈಗ ಇದನ್ನು ಎರಡು ತಿಂಗಳು ಹೆಚ್ಚುವರಿಯಾಗಿ ನಡೆಸೋಕೆ ವಾಹಿನಿ ನಿರ್ಧರಿಸಿದೆ. ‘ಹಿಂದಿ ಬಿಗ್ ಬಾಸ್ ಸೀಸನ್ 14’ ಉತ್ತಮ ಟಿಆರ್ಪಿ ತಂದುಕೊಟ್ಟಿತ್ತು. ಪ್ರೇಕ್ಷಕರು ಇದನ್ನು ಇಷ್ಟಪಟ್ಟಿದ್ದರು. ಈ ಕಾರಣಕ್ಕೆ ಈ ಸೀಸನ್ 180 ದಿನಗಳ ಕಾಲ ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.
ಸೀಸನ್ 14 ಬರೋಬ್ಬರಿ 143 ದಿನಗಳ ಕಾಲ ಪ್ರಸಾರವಾಗಿತ್ತು. ವೀಕ್ಷಕರಿಗೆ ಎಲ್ಲಿಯೂ ಬೇಸರ ಬಾರದ ರೀತಿಯಲ್ಲಿ ಶೋ ನಡೆಸಿಕೊಡಲಾಗಿತ್ತು. ಈ ಬಾರಿ ರಿಯಾ ಚಕ್ರವರ್ತಿ ಸೇರಿ ಖ್ಯಾತ ಕಲಾವಿದರನ್ನು ಮನೆ ಒಳಗೆ ಕರೆತರೋಕೆ ಸಿದ್ಧತೆ ನಡೆದಿದೆ. ಆದರೆ, ಯಾವ ಹೆಸರೂ ಅಂತಿಮವಾಗಿಲ್ಲ. ಇನ್ನು, ಈ ಬಾರಿ ವೈಲ್ಡ್ ಕಾರ್ಡ್ ಎಂಟ್ರಿ ಹೆಚ್ಚಿರಲಿದೆ. ಸಲ್ಮಾನ್ ಖಾನ್ ಅವರೇ ಈ ಬಾರಿ ಬಿಗ್ ಬಾಸ್ ನಡೆಸಿಕೊಡಲಿದ್ದಾರೆ. ಅವರ ನಿರೂಪಣೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ಬಾರಿ ಅವರ ನಿರೂಪಣೆಯಲ್ಲಿ ಮತ್ತಷ್ಟು ಬದಲಾವಣೆ ಇರಲಿದೆ ಎನ್ನಲಾಗುತ್ತಿದೆ.
ಈಗತಾನೇ ಕೊವಿಡ್ ಎರಡನೇ ಅಲೆ ತಣ್ಣಗಾಗುತ್ತಿದೆ. ಸಿನಿಮಾ ಶೂಟಿಂಗ್ಗೆ ಅವಕಾಶ ನೀಡಲಾಗಿದೆ. ಈ ಕಾರಣಕ್ಕೆ ಶೀಘ್ರದಲ್ಲೇ ಹಿಂದಿ ಬಿಗ್ ಬಾಸ್ 15ನೇ ಸೀಸನ್ ಆರಂಭವಾಗಲಿದೆ. ಯಾರ್ಯಾರು ಬಿಗ್ ಬಾಸ್ ಮನೆ ಸೇರಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ವೀಕ್ಷಕರದ್ದು.
ಕೊವಿಡ್ ಎರಡನೇ ಅಲೆ ಕಾಣಿಸಿಕೊಂಡಿದ್ದರಿಂದ ಕನ್ನಡ ಬಿಗ್ ಬಾಸ್ ಸೀಸನ್ 8 ಅರ್ಧಕ್ಕೆ ನಿಂತಿತ್ತು. ಆದರೆ, ಶೀಘ್ರವೇ ’ಬಿಗ್ ಬಾಸ್ 8’ ಎರಡನೇ ಇನ್ನಿಂಗ್ಸ್ ಆರಂಭವಾಗುತ್ತಿದೆ. 12 ಸ್ಪರ್ಧಿಗಳು ಈಗ ಮತ್ತೆ ಮನೆ ಒಳಗೆ ಸೇರುತ್ತಿದ್ದಾರೆ.
ಇದನ್ನೂ ಒದಿ: Bigg Boss Kannada Season 8: ಇನ್ನು ಕೇವಲ ಐದೇ ದಿನದಲ್ಲಿ ಮತ್ತೆ ಆರಂಭವಾಗಲಿದೆ ಕನ್ನಡ ‘ಬಿಗ್ ಬಾಸ್ ಸೀಸನ್ 8’
ಸಂಚಾರಿ ವಿಜಯ್ ಹೆಸರಿನಲ್ಲಿ ದೇವರು ಮೆಚ್ಚುವ ಕೆಲಸ ಮಾಡಿದ ಬಿಗ್ ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್