ಮಾದಕ ವಸ್ತು ಪ್ರಕರಣದಲ್ಲಿ ಬಿಗ್​ಬಾಸ್ ರನ್ನರ್ ಅಪ್ ಬಂಧನ

Hyderabad Police: ಬಿಗ್​ಬಾಸ್ ರನ್ನರ್ ಅಪ್, ಯೂಟೂಬರ್ ಷಣ್ಮುಖ್ ಅನ್ನು ಮಾದಕ ವಸ್ತು ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆತನ ಸಹೋದರನನ್ನು ಯುವತಿಗೆ ಮೋಸ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ.

ಮಾದಕ ವಸ್ತು ಪ್ರಕರಣದಲ್ಲಿ ಬಿಗ್​ಬಾಸ್ ರನ್ನರ್ ಅಪ್ ಬಂಧನ
Follow us
ಮಂಜುನಾಥ ಸಿ.
|

Updated on: Feb 24, 2024 | 6:08 PM

ಸಾಮಾಜಿಕ ಜಾಲತಾಣಗಳಿಂದಾಗಿ (Social Media) ಜನಪ್ರಿಯತೆ ಎಂಬುದು ಸುಲಭವಾಗಿಬಿಟ್ಟಿದೆ. ಮುಂಚೆ ಜನಪ್ರಿಯತೆ ಗಳಿಸಲು ನಿಜವಾಗಿಯೂ ಒಳ್ಳೆಯ ಕಲಾವಿದರಾಗಬೇಕಿರುತ್ತಿತ್ತು, ವಿದ್ಯಾವಂತರಾಗಬೇಕಿತ್ತು, ಆದರೆ ರೀಲ್ಸ್​ಗಳು ಬಂದ ಮೇಲೆ ಚಿತ್ರ ವಿಚಿತ್ರವಾಗಿ ಆಡುವವರು ಸಹ ಸೆಲೆಬ್ರಿಟಿಗಳಾಗಿಬಿಡುತ್ತಿದ್ದಾರೆ. ಆದರೆ ಹಲವರು ತಮಗೆ ಒದಗಿಬಂದ ಈ ಅಚಾನಕ್ ಜನಪ್ರಿಯತೆಯನ್ನು ಸಂಭಾಳಿಸಲಾಗದೆ ಅಡ್ಡದಾರಿ ಹಿಡಿಯುತ್ತಿದ್ದಾರೆ. ಇದೇ ರೀತಿ ಹಠಾತ್ ಜನಪ್ರಿಯತೆ ಗಳಿಸಿ ಬಿಗ್​ಬಾಸ್​ಗೂ ಹೋಗಿ ಬಂದ ಯುವಕನೊಬ್ಬ ಈಗ ಮಾದಕ ವಸ್ತು ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ.

ಯೂಟ್ಯೂಬ್ ವಿಡಿಯೋಗಳ ಮೂಲಕ ಜನಪ್ರಿಯತೆ ಗಳಿಸಿ, ಬಳಿಕ ತೆಲುಗು ಬಿಗ್​ಬಾಸ್​ಗೆ ಹೋಗಿ ರನ್ನರ್ ಅಪ್ ಆದ ಷಣ್ಮುಕ್ ಜಸ್ವಂತ್ ಅನ್ನು ಮಾದಕ ವಸ್ತು ಬಳಕೆ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಷಣ್ಮುಕ್ ಜಸ್ವಂತ್ ಸಹೋದರನ್ನು ಯುವತಿಗೆ ಮೋಸ ಮಾಡಿದ ಪ್ರಕರಣದಲ್ಲಿ ಅದೇ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:ಪ್ರತಿಭಾವಂತ ಹುಡುಗಿಗೆ ಕೊಟ್ಟ ಮಾತು ಉಳಿಸಿಕೊಂಡ ವಿಜಯ್​ ದೇವರಕೊಂಡ; ಷಣ್ಮುಖಪ್ರಿಯಾಗೆ ಸಿಕ್ತು ಚಾನ್ಸ್​​

ವೈದ್ಯೆ ಮೌನಿಕಾ ಎಂಬ ಮಹಿಳೆಗೆ ಮೋಸ ಮಾಡಿ ಇನ್ನೊಂದು ಮದುವೆಗೆ ಸಜ್ಜಾಗಿದ್ದ ಷಣ್ಮುಕ್ ಸಹೋದರ ಸಂಪತ್ ವಿನಯ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಯೂಟ್ಯೂಬರ್, ಮಾಜಿ ಬಿಗ್​ಬಾಸ್ ಸ್ಪರ್ಧಿ ಷಣ್ಮುಖ್ ಅನ್ನು ಗಾಂಜಾ ಪ್ರಕರಣದಲ್ಲಿ ಬಂಧನಕ್ಕೆ ಒಳಪಡಿಸಿದ್ದಾರೆ. ಷಣ್ಮುಖ್, ಹಲವು ಕಿರು ವಿಡಿಯೋಗಳನ್ನು ಮಾಡಿ ಯೂಟ್ಯೂಬ್​ನಲ್ಲಿ ಜನಪ್ರಿಯತೆ ಗಳಿಸಿದ್ದರು.

ವೈದ್ಯೆ ಮೌನಿಕಾ ನೀಡಿದ ದೂರು ಸ್ವೀಕರಿಸಿ ಆರೋಪಿ ಸಂಪತ್ ಅನ್ನು ವಿಚಾರಣೆ ಮಾಡಲು ಅವರ ನಿವಾಸಕ್ಕೆ ತೆರಳಿದ್ದಾಗ ಷಣ್ಮುಖ್ ಗಾಂಜಾ ಸೇವಿಸಿದ್ದು ತಿಳಿದು ಬಂದಿದೆ. ಕೂಡಲೇ ಷಣ್ಮುಖ್ ಅನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಷಣ್ಮುಖ್, ಬಿಗ್​ಬಾಸ್ ತೆಲುಗು ಸೀಸನ್ 5ರಲ್ಲಿ ಭಾಗವಹಿಸಿದ್ದರು. ಫಿನಾಲೆ ವರೆಗೂ ಬಂದು ರನ್ನರ್ ಅಪ್ ಆಗಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!