ಬಾಲಿವುಡ್ನಲ್ಲಿ ಬ್ರೇಕಪ್, ವಿಚ್ಛೇದನ ತುಂಬಾನೇ ಕಾಮನ್. ಇಬ್ಬರು ಬೇರೆ ಆದ ಬಳಿಕ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುವುದಿಲ್ಲ ಅನ್ನೋದೆಲ್ಲ ಅಪರೂಪ. ಪರಸ್ಪರ ಪ್ರೀತಿಸುತ್ತಿದ್ದವರು, ಬ್ರೇಕಪ್ ಬಳಿಕ ಒಟ್ಟಾಗಿ ಸಿನಿಮಾ ಮಾಡಿದ ಸಾಕಷ್ಟು ಉದಾಹರಣೆ ಇದೆ. ಈಗ ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ (Ranbir Kapoor) ಮತ್ತೆ ಒಂದಾಗಿದ್ದಾರೆ. ಮಾಜಿ ಪ್ರಿಯಕರ ರಣಬೀರ್ ಕಪೂರ್ ಅವರನ್ನು ದೀಪಿಕಾ ಪಡುಕೋಣೆ ತಬ್ಬಿ ನಿಂತಿದ್ದಾರೆ. ಈ ಫೋಟೋಗಳನ್ನು ಸ್ವತಃ ದೀಪಿಕಾ ಪಡುಕೋಣೆ (Deepika Padukone) ಹಂಚಿಕೊಂಡಿದ್ದಾರೆ. ಅಂದಹಾಗೆ, ಇವರ ರೀಯೂನಿಯನ್ಗೆ ಕಾರಣ ‘ಯೇ ಜವಾನಿ ಹೈ ದಿವಾನಿ’ ಸಿನಿಮಾಗೆ 10 ವರ್ಷ ತುಂಬಿರೋದು. ಅಭಿಮಾನಿಗಳು ಕೂಡ ಈ ಫೋಟೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ‘ಯೇ ಜವಾನಿ ಹೈ ದಿವಾನಿ’ (Yeh Jawaani Hai Deewani) ಸಿನಿಮಾದ ನೆನಪುಗಳನ್ನು ಫ್ಯಾನ್ಸ್ ಮೆಲುಕು ಹಾಕಲಾಗುತ್ತಿದೆ.
ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ಪರಸ್ಪರ ಪ್ರೀತಿಸುತ್ತಿದ್ದರು. ಪ್ರಿಯಕರನಿಗೋಸ್ಕರ ದೀಪಿಕಾ ಕತ್ತಿನ ಹಿಂಭಾಗದಲ್ಲಿ ಆರ್ಕೆ ಎಂದು ಹಚ್ಚೆ ಕೂಡ ಹಾಕಿಸಿಕೊಂಡಿದ್ದರು. ಆದರೆ, ಇವರ ಸಂಬಂಧ 2009ರಲ್ಲಿ ಮುರಿದು ಬಿತ್ತು. ವಿಶೇಷ ಎಂದರೆ ಆ ಬಳಿಕವೂ ಇವರು ಒಟ್ಟಾಗಿ ಸಿನಿಮಾ ಮಾಡಿದ್ದರು. ಇವರು ಒಟ್ಟಾಗಿ ನಟಿಸಿದ ‘ಯೇ ಜವಾನಿ ಹೈ ದಿವಾನಿ’ ಸಿನಿಮಾ 2013ರ ಮೇ 31ರಂದು ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಚಿತ್ರಕ್ಕೆ 10 ವರ್ಷ ತುಂಬಿದ ಸಂಭ್ರಮಾಚಾರಣೆಗೆ ಎಲ್ಲರೂ ಒಂದೆಡೆ ಸೇರಿದ್ದರು.
ಇದನ್ನೂ ಓದಿ: ಆಸ್ಕರ್ ಅವಾರ್ಡ್ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆಗೆ ಅವಮಾನ; ಸಿಟ್ಟಿಗೆದ್ದ ಫ್ಯಾನ್ಸ್
‘ಯೇ ಜವಾನಿ ಹೈ ದಿವಾನಿ’ ಸಿನಿಮಾದ ಕಲಾವಿದರಾದ ದೀಪಿಕಾ ಪಡುಕೋಣೆ, ಕಲ್ಕಿ ಕೇಕ್ಲಾ, ಆದಿತ್ಯ ರಾಯ್ ಕಪೂರ್, ನಿರ್ದೇಶಕ ಅಯಾನ್ ಮುಖರ್ಜಿ, ನಿರ್ಮಾಪಕ ಕರಣ್ ಜೋಹರ್ ಮೊದಲಾದವರು ಒಂದೆಡೆ ಸೇರಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಾಗಿದೆ.
ಇದನ್ನೂ ಓದಿ: ‘ಪ್ರಾಜೆಕ್ಟ್ ಕೆ’ ಚಿತ್ರಕ್ಕೆ ಭರ್ಜರಿ ಸಂಭಾವನೆ ಪಡೆದ ದೀಪಿಕಾ ಪಡುಕೋಣೆ; ಸ್ಟಾರ್ ಹೀರೋಗಿಂತ ಹೆಚ್ಚು ರೆಮ್ಯುನರೇಷನ್
ರಣಬೀರ್-ದೀಪಿಕಾ ಪಡುಕೋಣೆ ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವು ಬಾರಿ ಮುಖಾಮುಖಿ ಆಗುವ ಸಂದರ್ಭ ಬರುತ್ತದೆ. ಈ ಕಾರಣಕ್ಕೆ ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಇಬ್ಬರೂ ಹಳೆಯ ಘಟನೆಗಳನ್ನು ಮರೆತು ಮುಂದೆ ಬಂದಿದ್ದಾರೆ. ಹೀಗಾಗಿ, ರೀಯೂನಿಯನ್ ಸಂದರ್ಭದಲ್ಲಿ ಒಂದೆಡೆ ಸೇರಿದ್ದಾರೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ‘ಯೇ ಜವಾನಿ ಹೈ ದಿವಾನಿ’ ಸಿನಿಮಾ ಈಗಲೂ ಅನೇಕರ ಫೇವರಿಟ್ ಚಿತ್ರ ಎನಿಸಿಕೊಂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.