ಕೆಲ ವರ್ಷಗಳ ಹಿಂದೆ ಸಿನಿಮಾಗಳು ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡೋದು ಎಂದರೆ ಅದು ಕಷ್ಟದ ಕೆಲಸವಾಗಿತ್ತು. ಆದರೆ, ಈಗ ಹಾಗಿಲ್ಲ. ಅನೇಕ ಚಿತ್ರಗಳು ಈ ಸಾಧನೆ ಮಾಡಿವೆ. ಈ ವರ್ಷ ‘ಜೈಲರ್’ (Jailer Movie), ‘ಪಠಾಣ್’ ಸೇರಿ ಅನೇಕ ಸಿನಿಮಾಗಳ ಕಲೆಕ್ಷನ್ 500 ಕೋಟಿ ರೂಪಾಯಿ ದಾಟಿದೆ. ಹೀಗಾಗಿ, ಸಿನಿಮಾ ನೂರು ಕೋಟಿ ರೂಪಾಯಿ ಕ್ಲಬ್ ಸೇರಿದೆ ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು ಎಂಬರ್ಥದಲ್ಲಿ ಸಲ್ಮಾನ್ ಖಾನ್ ಮಾತನಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಸಲ್ಮಾನ್ ಖಾನ್ ಅವರು ಗಿಪ್ಪಿ ಗ್ರೇವಾಲ್ ನಟನೆಯ ಪಂಜಾಬಿ ಸಿನಿಮಾ ‘ಮೌಜಾ ಹಿ ಮೌಜಾ’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿ ಆದರು. ಈ ವೇಳೆ ಪಂಜಾಬಿ ಸಿನಿಮಾಗಳು ನೂರು ಕೋಟಿ ರೂಪಾಯಿ ಬಿಸ್ನೆಸ್ ಮಾಡುತ್ತಿರುವ ಬಗ್ಗೆ ಪ್ರಶ್ನೆ ಮಾಡಲಾಯಿತು. ಸಲ್ಮಾನ್ ಖಾನ್ ಇದಕ್ಕೆ ಉತ್ತರಿಸಿದರು. ‘ನನ್ನ ಪ್ರಕಾರ 100 ಕೋಟಿ ರೂಪಾಯಿ ಕ್ಲಬ್ ಅನ್ನೋದು ಈಗ ಸಣ್ಣದು. ಈಗ ಎಲ್ಲಾ ಸಿನಿಮಾಗಳು 400, 500, 600 ಕೋಟಿ ರೂಪಾಯಿ ಬಿಸ್ನೆಸ್ ಮಾಡುತ್ತಿವೆ. ಪಂಜಾಬಿ, ಹಿಂದಿ ಸೇರಿ ಎಲ್ಲಾ ಇಂಡಸ್ಟ್ರಿಯ ಸಿನಿಮಾಗಳು ಮಿಂಚುತ್ತಿವೆ. 100 ಕೋಟಿ ರೂಪಾಯಿ ಕ್ಲಬ್ ಸೇರೋದು ದೊಡ್ಡ ವಿಚಾರ ಅಲ್ಲ. ಹೀಗಾಗಿ, 1000 ಕೋಟಿ ರೂಪಾಯಿ ಅನ್ನೋದನ್ನು ಬೆಂಚ್ಮಾರ್ಕ್ ಮಾಡಬೇಕು’ ಎಂದಿದ್ದಾರೆ ಅವರು.
ಸಲ್ಮಾನ್ ಖಾನ್ ಅವರ ಹೇಳಿಕೆಯನ್ನು ಅನೇಕರು ಒಪ್ಪಿದ್ದಾರೆ. ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದೆ. ‘ಜವಾನ್’ ಕೂಡ ಈ ಬೆಂಚ್ಮಾರ್ಕ್ನ ತಲುಪುವುದರಲ್ಲಿದೆ. ಇನ್ನು ರಜನಿಕಾಂತ್ ನಟನೆಯ ‘ಜೈಲರ್’, ಸನ್ನಿ ಡಿಯೋಲ್ ನಟನೆಯ ‘ಗದರ್ 2’ ಚಿತ್ರಗಳು ಕೂಡ ಗೆದ್ದು ಬೀಗಿವೆ.
ಇದನ್ನೂ ಓದಿ: ಬಾಲಿವುಡ್ನಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಲಿದ್ದಾರೆ ಸಮಂತಾ; ಆಫರ್ ಕೊಟ್ಟೋರು ಯಾರು?
ಸಲ್ಮಾನ್ ಖಾನ್ ಅವರು ಸದ್ಯ ‘ಟೈಗರ್ 3’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರಕ್ಕೆ ಕತ್ರಿನಾ ಕೈಫ್ ನಾಯಕಿ. ಯಶ್ ರಾಜ್ ಫಿಲ್ಮ್ಸ್ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ದೀಪಾವಳಿ ಸಂದರ್ಭದಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:58 am, Fri, 22 September 23