ಸಂಜಯ್ ದತ್ ಹೆಸರಲ್ಲಿ ವಿಲ್ ಬರೆದಿದ್ದ ಅಭಿಮಾನಿ; ಒಂದಲ್ಲ, ಎರಡಲ್ಲ 72 ಕೋಟಿ ರೂಪಾಯಿ
Sanjay Dutt fan: ಬಾಲಿವುಡ್ನ ಸ್ಟಾರ್ ನಟ, ಇತ್ತೀಚೆಗೆ ದಕ್ಷಿಣ ಭಾರತದಲ್ಲಿ ಪವರ್ಫುಲ್ ವಿಲನ್ ಆಗಿ ಸಖತ್ ಹೆಸರು ಮಾಡಿರುವ ಸಂಜಯ್ ದತ್ ಅವರಿಗೆ ಒಂದು ಕಾಲದಲ್ಲಿ ಭಾರಿ ದೊಡ್ಡ ಅಭಿಮಾನಿ ವರ್ಗವಿತ್ತು. ಸಂಜಯ್ ದತ್ ಅಭಿಮಾನಿಯೊಬ್ಬ ಯಾವ ಅಭಿಮಾನಿಯೂ ಮಾಡದ ಕೆಲಸ ಮಾಡಿದ್ದ. ತನ್ನ ಸಕಲ ಆಸ್ತಿಯನ್ನು ಸಂಜಯ್ ಹೆಸರಿಗೆ ಮಾಡಿಬಿಟ್ಟಿದ್ದ.

ಸಂಜಯ್ ದತ್ (Sanjay Dutt) ಅವರು ಬಾಲಿವುಡ್ನ ಬೇಡಿಕೆಯ ಖಳನಟ. ಅವರ ಖ್ಯಾತಿ ದಕ್ಷಿಣಕ್ಕೂ ಹಬ್ಬಿದ್ದು, ಇಲ್ಲಿಯೂ ವಿಲನ್ ಪಾತ್ರಗಳನ್ನು ಮಾಡುತ್ತಿದ್ದಾರೆ. ಅವರು 135ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ ಎಂಬುದು ವಿಶೇಷ. ಅವರಿಗೆ ಹಣಕ್ಕೆ ಯಾವುದೇ ಕೊರತೆ ಇಲ್ಲ. ಅವರ ಜೀವನದಲ್ಲಿ ಒಂದು ಅಚ್ಚರಿಯ ಘಟನೆ ನಡೆದಿತ್ತು. ಆ ಬಗ್ಗೆ ನಾವು ಹೇಳಲೇಬೇಕು. 2018ರಲ್ಲಿ ನಡೆದ ಘಟನೆ ಇದಾಗಿದೆ. ಅವರ ಅಭಿಮಾನಿ ಅವರ ಹೆಸರಲ್ಲಿ ವಿಲ್ ಬರೆದಿದ್ದರು ಎಂದರೆ ನೀವು ನಂಬಲೇಬೇಕು. ಇಂದು (ಜುಲೈ 29) ಅವರಿಗೆ ಜನ್ಮದಿನ. ಈ ವೇಳೆ ಆ ಘಟನೆ ಬಗ್ಗೆ ನೆನಪಿಸಿಕೊಳ್ಳೋಣ.
2018ರ ಸಮಯ. ಸಂಜಯ್ ದತ್ ಅವರಿಗೆ ಪೊಲೀಸ್ ಠಾಣೆಯಿಂದ ಕರೆಯೊಂದು ಬಂತು. ಪೊಲೀಸ್ ಠಾಣೆ ಎಂದಾಗ ಸಂಜಯ್ಗೆ ಇದೇನಪ್ಪ ಕೇಸು ಎಂದುಕೊಂಡಿದ್ದಂತೂ ಸತ್ಯ. ನಿಶಾ ಪಾಟಿಲ್ ಎಂಬ ಅಭಿಮಾನಿ ಸಂಜಯ್ ದತ್ ಹೆಸರಿಗೆ 72 ಕೋಟಿ ರೂಪಾಯಿ ಆಸ್ತಿಯನ್ನು ಬರೆದಿದ್ದರು. ನಟನಿಗೆ ಎಲ್ಲಾ ಆಸ್ತಿ ನೇರವಾಗಿ ಹಸ್ತಾಂತರ ಆಗಬೇಕು ಎಂದು ವಿಲ್ನಲ್ಲಿ ಹೇಳಿದ್ದರು. ಈ ವಿಚಾರವನ್ನು ಪೊಲೀಸರು ಸಂಜಯ್ಗೆ ತಿಳಿಸಿದರು.
ಸಂಜಯ್ ದತ್ ಬಳಿ ಸಾಕಷ್ಟು ಹಣ ಇದೆ. ಈ ರೀತಿ ಸಿಗುವ ಹಣ ಅವರಿಗೆ ಬೇಡವಾಗಿತ್ತು. ಹೀಗಾಗಿ, ಇದನ್ನು ಅವರು ಸ್ವೀಕರಿಸಲೇ ಇಲ್ಲ. ನಿಶಾ ಪಾಟೀಲ್ ಯಾರು ಎಂಬುದೇ ಅವರಿಗೆ ಗೊತ್ತಿರಲಿಲ್ಲ. ಹೀಗಿರುವಾಗ ಅವರು ಕೊಟ್ಟ ಹಣ ಸ್ವೀಕರಿಸುವುದು ಹೇಗೆ ನೀವೇ ಹೇಳಿ. ಸಂಜಯ್ ದತ್ಗೆ ಇಷ್ಟು ಡೈಹಾರ್ಡ್ ಫ್ಯಾನ್ಸ್ ಇದ್ದಾರಾ ಎಂಬ ವಿಚಾರ ತಿಳಿದು ಅನೇಕರು ಅಚ್ಚರಿ ಆಗಿತ್ತು.
ಇದನ್ನೂ ಓದಿ:ಬಾಲಿವುಡ್ನಲ್ಲಿ ಮತ್ತೊಂದು ಭಾರಿ ದೊಡ್ಡ ಅವಕಾಶ ಬಾಚಿಕೊಂಡ ಶ್ರೀಲೀಲಾ
ಸಂಜಯ್ ದತ್ ಅವರು ‘ಕೆಜಿಎಫ್ 2’ ಚಿತ್ರದ ಮೂಲಕ ಕನ್ನಡಕ್ಕೆ ಬಂದರು. ಇಲ್ಲಿ ಅವರಿಗೆ ಭರ್ಜರಿ ಬೇಡಿಕೆ ಬಂತು. ಸಿನಿಮಾ ಸಾಕಷ್ಟು ಹಿಟ್ ಆಯಿತು. ತಮಿಳಿನ ‘ಲಿಯೋ’ ಸಿನಿಮಾದಲ್ಲೂ ಅವರು ಬಣ್ಣ ಹಚ್ಚಿದ್ದರು. ಈ ಪಾತ್ರವನ್ನು ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ ಎಂಬ ಬೇಸರ ಅವರಿಗೆ ಇದೆ.
ಸಂಜಯ್ ದತ್ ಅವರು ‘ಕೆಡಿ’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಧ್ರುವ ಸರ್ಜಾ ಈ ಸಿನಿಮಾಗೆ ಹೀರೋ. ‘ಜೋಗಿ’ ಪ್ರೇಮ್ ನಿರ್ದೇಶನ ಇದೆ. ಶಿಲ್ಪಾ ಶೆಟ್ಟಿ ನಟಿಸುತ್ತಿದ್ದಾರೆ. ಎ ಹರ್ಷ ನಿರ್ದೇಶನದ, ಟೈಗರ್ ಶ್ರಾಫ್ ನಟನೆಯ ‘ಭಾಗಿ 4’ ಚಿತ್ರದಲ್ಲೂ ಸಂಜಯ್ ದತ್ ನಟಿಸಿದ್ದು, ಸೆಪ್ಟೆಂಬರ್ 5ರಂದು ಈ ಚಿತ್ರ ತೆರೆಗೆ ಬರಲಿದೆ. ರಣವೀರ್ ಸಿಂಗ್ ನಟನೆಯ ‘ಧುರಂದರ್’ ಚಿತ್ರದ ಭಾಗವೂ ಇವರಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



