AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ತಿಂಗಳಲ್ಲಿ 11 ಕೆಜಿ ದೇಹದ ತೂಕ ಇಳಿಸಿಕೊಂಡ ಕಪಿಲ್ ಶರ್ಮಾ; ಅದು ಹೇಗೆ?

ಕಪಿಲ್ ಶರ್ಮಾ ಅವರು 63 ದಿನಗಳಲ್ಲಿ 11 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಯೋಗೇಶ್ ಭಟೇಜಾ ಅವರ ಮಾರ್ಗದರ್ಶನದಲ್ಲಿ, ಕಟ್ಟುನಿಟ್ಟಾದ ಶಿಸ್ತು, ಜೀವನಶೈಲಿ ಬದಲಾವಣೆ ಮತ್ತು ಸಮತೋಲಿತ ಆಹಾರದ ಮೂಲಕ ಈ ಯಶಸ್ಸು ಸಾಧಿಸಿದ್ದಾರೆ. ವಿಶೇಷ ಆಹಾರವಿಲ್ಲದೆ ಈ ತೂಕ ನಷ್ಟ ಸಾಧ್ಯವಾಗಿದೆ ಎಂಬುದು ವಿಶೇಷ.

ಎರಡು ತಿಂಗಳಲ್ಲಿ 11 ಕೆಜಿ ದೇಹದ ತೂಕ ಇಳಿಸಿಕೊಂಡ ಕಪಿಲ್ ಶರ್ಮಾ; ಅದು ಹೇಗೆ?
ಕಪಿಲ್ ಶರ್ಮಾ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Jul 30, 2025 | 8:10 AM

Share

ನಟ ಹಾಗೂ ಕಮೀಡಿಯನ್ ಕಪಿಲ್ ಶರ್ಮಾ (Kapil Sharma) ಈಗ ತಮ್ಮ ಹೊಸ ಲುಕ್​ನಿಂದ ಸುದ್ದಿಯಲ್ಲಿದ್ದಾರೆ. ಕಪಿಲ್ 63 ದಿನಗಳಲ್ಲಿ 11 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ವಿಶೇಷವೆಂದರೆ ಅವರು ಇದಕ್ಕಾಗಿ ಜಿಮ್‌ನಲ್ಲಿ ನಾಲ್ಕೈದು ಗಂಟೆ ಸಮಯ ಕಳೆದಿಲ್ಲ ಅಥವಾ ವಿಶೇಷ ಆಹಾರ ಸೇವನೆ ಮಾಡಿಲ್ಲ. ಫರಾ ಖಾನ್, ಕಂಗನಾ ರನೌತ್ ಮತ್ತು ಸೋನು ಸೂದ್‌ರಂತಹ ಅನೇಕ ಬಾಲಿವುಡ್ ಸೆಲೆಬ್ರಿಟಿಗಳಿಗೆ ತರಬೇತಿ ನೀಡುವ ಫಿಟ್‌ನೆಸ್ ತರಬೇತುದಾರ ಯೋಗೇಶ್ ಭಟೇಜಾ, ಕಪಿಲ್ ಅವರ ಹೊಸ ಲುಕ್​ನ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

11 ಕೆಜಿ ತೂಕ ಇಳಿಸಿಕೊಳ್ಳುವ ಕಪಿಲ್ ಅವರ ಪ್ರಯಾಣ ಸುಲಭವಲ್ಲ ಎಂದು ಅವರು ಹೇಳಿದರು. ಆದರೆ ಕಟ್ಟುನಿಟ್ಟಾದ ಶಿಸ್ತು, ಜೀವನಶೈಲಿ, ಸ್ಮಾರ್ಟ್ ವಿಧಾನ, ಕೆಲವು ವ್ಯಾಯಾಮದಿಂದ ಅವರು ದೇಹದ ತೂಕ ಇಳಿಸಿಕೊಂಡರು. ಯೋಗೇಶ್ ತಮ್ಮ ಮನೆಯಲ್ಲಿಯೇ ಕಪಿಲ್‌ಗೆ ತರಬೇತಿ ನೀಡಲು ಪ್ರಾರಂಭಿಸಿದರು. ಆರಂಭದಲ್ಲಿ ಇವರು ಯೋಗ ಮಾಡುತ್ತಿದ್ದರು.

‘ಮೊದಲ ದಿನದ ಕಥೆ ತುಂಬಾ ಆಸಕ್ತಿದಾಯಕವಾಗಿತ್ತು. ನಾನು ಅವನನ್ನು ಸ್ಟ್ರೆಚ್ ಮಾಡಲು ಕೇಳಿದ್ದೆ. ಆದರೆ, ಅವರಿಗೆ ನೋವು ಬರುತ್ತಿತ್ತು. ಸರಿಯಾದ ಸಮಯದಲ್ಲಿ ವ್ಯಾಯಾಮ ಮಾಡಲು ನಾನು ಅವರಿಗೆ ಸಲಹೆ ನೀಡಿದೆ. ಅವರ ದೇಹ ಸಾಕಷ್ಟು ಬಿಗಿಯಾಗಿತ್ತು. ತಿನ್ನುವುದು ಮತ್ತು ಕುಡಿಯುವುದರಲ್ಲಿ ಯಾವುದೇ ಶಿಸ್ತು ಇರಲಿಲ್ಲ ಮತ್ತು ಅವರ ದೇಹವು ಒಂದು ರೀತಿಯ ಊದಿಕೊಂಡಿತ್ತು ಎಂದು ನಾನು ಅರಿತುಕೊಂಡೆ’ ಎಂದಿದ್ದಾರೆ ಯೋಗೇಶ್.

ಇದನ್ನೂ ಓದಿ
Image
ಸೋನು ಸೂದ್ ಜನ್ಮದಿನ; ನಟನೆ ಕಡಿಮೆ ಮಾಡಿದರೂ ತಗ್ಗಿಲ್ಲ ನಟನ ಆಸ್ತಿ
Image
ಹೀನಾಯ ಸ್ಥಿತಿ ತಲುಪಿದ ‘ಹರಿ ಹರ ವೀರ ಮಲ್ಲು’ ಕಲೆಕ್ಷನ್; ಪವನ್ ಕನಸು ಭಗ್ನ
Image
ಅಶ್ವಮೇಧದ ಕುದುರೆ ‘ಸು ಫ್ರಮ್ ಸೋ’; ಕೆಲೆಕ್ಷನ್​ನಲ್ಲಿ ತಡೆಯೋರೆ ಇಲ್ಲ
Image
‘ಕನಿಷ್ಠ ಸಭ್ಯತೆ ಇರಲಿ’; ದರ್ಶನ್ ಅಭಿಮಾನಿಗಳ ಬಳಿ ಕೋರಿದ್ರಾ ರಕ್ಷಿತಾ

ಕಪಿಲ್ ಅವರ ಬಿಡುವಿಲ್ಲದ ವೇಳಾಪಟ್ಟಿ ಯೋಗೇಶ್‌ಗೆ ಹಲವು ಸವಾಲುಗಳನ್ನು ಒಡ್ಡಿತು. ‘ಕಪಿಲ್‌ಗೆ ಬಹಳಷ್ಟು ಜವಾಬ್ದಾರಿಗಳಿವೆ. ಆದ್ದರಿಂದ ಅವರ ನಿದ್ರೆಯ ಸಮಯವೂ ಸರಿಯಾಗಿರಲಿಲ್ಲ. ಅವರ ಊಟಕ್ಕೂ ನಿಗದಿತ ವೇಳಾಪಟ್ಟಿ ಇರಲಿಲ್ಲ. ಅವರು ಹೇಗೇಗೋ ತಿನ್ನುತ್ತಿದ್ದರು. ಅದರಲ್ಲಿ ಯಾವುದೇ ಶಿಸ್ತು ಇರಲಿಲ್ಲ. ಅವರ ಮ್ಯಾನೇಜರ್, ಅವರ ತಂಡ ಮತ್ತು ಅವರ ಜೀವನಶೈಲಿಯೊಂದಿಗೆ ಎಲ್ಲವನ್ನೂ ಸಮತೋಲನಗೊಳಿಸಲು ಬಹಳ ಸಮಯ ಹಿಡಿಯಿತು’ ಎಂದು ಯೋಗೇಶ್ ವಿವರಿಸಿದರು.

ಇದನ್ನೂ ಓದಿ: ಕಮಿಡಿಯನ್ ಕಪಿಲ್ ಶರ್ಮಾ ಕೆಫೆ ಮೇಲೆ ಖಲಿಸ್ಥಾನಿ ಉಗ್ರರ ದಾಳಿ

ಯೋಗೇಶ್ ಕಪಿಲ್ ಅವರ ಆಹಾರ ಪದ್ಧತಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದರು. ಅವರು ಹೆಚ್ಚು ಮೀನು ತಿನ್ನಲು ಸಲಹೆ ನೀಡಿದರು. ಇದು ದೇಹಕ್ಕೆ ಪ್ರೋಟೀನ್ ಒದಗಿಸುವುದಲ್ಲದೆ, ಕ್ಯಾಲೊರಿಗಳನ್ನು ನಿಯಂತ್ರಣದಲ್ಲಿಡುತ್ತದೆ. ಕಪಿಲ್ ಅವರ ಆಹಾರ ಪದ್ಧತಿಯಲ್ಲಿ ವಿವಿಧ ತರಕಾರಿಗಳನ್ನು ಸೇರಿಸಲಾಗಿತ್ತು. ಕಪಿಲ್ ಅವರ ತೂಕದಲ್ಲಿ ಏರುಪೇರಾಗುತ್ತಿತ್ತು. ಆದರೆ ಈಗ ಅವರ ದೇಹದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳಾಗಿವೆ. ಅವರ ಅಭಿಮಾನಿಗಳು ಸಹ ಈ ರೂಪಾಂತರವನ್ನು ಇಷ್ಟಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.