ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಎಷ್ಟು ಲಕ್ಷ ಚಾರ್ಜ್ ಮಾಡ್ತಾರೆ ಗೊತ್ತಾ?
ಸೆಲೆಬ್ರಿಟಿಗಳ ಹೇರ್ ಸ್ಟೈಲ್‌ಗೆ ಆಲಿಮ್ ಹಕೀಮ್ ಹೆಸರುವಾಸಿ. ಕ್ರಿಕೆಟ್ ಮತ್ತು ಚಿತ್ರರಂಗದ ಸ್ಟಾರ್‌ಗಳಿಗೆ ಇವರು ಕೇಶ ವಿನ್ಯಾಸ ಮಾಡುತ್ತಾರೆ. ಆಲಿಮ್, ತಮ್ಮ ತಂದೆ ಹಕೀಮ್ ಕರಣಾವಿ ಪರಂಪರೆಯನ್ನು ಮುಂದುವರೆಸಿದ್ದಾರೆ. ಪ್ರತಿಯೊಂದು ಹೇರ್ ಕಟ್‌ಗೆ ಲಕ್ಷಾಂತರ ರೂ. ಶುಲ್ಕ ವಿಧಿಸುತ್ತಾರೆ. ಅವರ ಗ್ರಾಹಕರು ದೇಶ-ವಿದೇಶಗಳಲ್ಲಿ ಇದ್ದು, ಸೆಲೆಬ್ರಿಟಿ ಕೇಶ ವಿನ್ಯಾಸದಲ್ಲಿ ಅವರದ್ದು ಅಗ್ರಸ್ಥಾನ.

ದೊಡ್ಡ ಸೆಲೆಬ್ರಿಟಿಗಳ ಹೇರ್ ಸ್ಟೈಲ್ಗಳನ್ನು ಅವರ ಅಸಂಖ್ಯಾತ ಅಭಿಮಾನಿಗಳು ಅನುಸರಿಸುತ್ತಾರೆ. ಈ ಕಾರಣದಿಂದಲೇ ಸೆಲೆಬ್ರಿಟಿಗಳು ಈ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ. ಈ ಸೆಲೆಬ್ರಿಟಿಗಳ ಹೇರ್ ಸ್ಟೈಲ್ ಮತ್ತು ಹೇರ್ ಕಟ್ಗಳನ್ನು ಅತ್ಯಂತ ವಿಶಿಷ್ಟ ರೀತಿಯಲ್ಲಿ ಮಾಡುವ ಜವಾಬ್ದಾರಿ ಸ್ಟೈಲಿಸ್ಟ್ ಮೇಲಿರುತ್ತದೆ. ಸೆಲೆಬ್ರಿಟಿಗಳು ತಮ್ಮ ಹೇರ್ ಕಟ್ಗಳಿಗೆ ಎಷ್ಟು ಹಣ ನೀಡುತ್ತಾರೆ ಎಂಬುದನ್ನು ಕಂಡುಕೊಳ್ಳೋಣ.
ಕ್ರಿಕೆಟ್ ಮತ್ತು ಚಲನಚಿತ್ರೋದ್ಯಮದ ಅನೇಕ ಸೆಲೆಬ್ರಿಟಿಗಳು ಆಲಿಮ್ ಹಕೀಮ್ ಬಳಿಯೇ ಕೇಶ ವಿನ್ಯಾಸ ಮಾಡಿಕೊಳ್ಳುತ್ತಾರೆ. ಆಲಿಮ್ ‘ವಾರ್’ ಚಿತ್ರದಲ್ಲಿ ಹೃತಿಕ್ ರೋಷನ್, ‘ಕಬೀರ್ ಸಿಂಗ್’ ಚಿತ್ರದಲ್ಲಿ ಶಾಹಿದ್ ಕಪೂರ್, ‘ಬಾಹುಬಲಿ’ ಚಿತ್ರದಲ್ಲಿ ಪ್ರಭಾಸ್, ‘ಅನಿಮಲ್’ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಬಾಬಿ ಡಿಯೋಲ್ ಮತ್ತು ‘ಜೈಲರ್’ ಚಿತ್ರದಲ್ಲಿ ರಜನಿಕಾಂತ್ ಅವರ ಕೇಶವಿನ್ಯಾಸವನ್ನು ಮಾಡಿದ್ದಾರೆ.ಯಶ್ಗೂ ಈ ಮೊದಲು ಹೊಸ ಲುಕ್ ನೀಡಿದರು.
ಅಜಯ್ ದೇವಗನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಮಹೇಂದ್ರ ಸಿಂಗ್ ಧೋನಿ, ಮಹೇಶ್ ಬಾಬು, ರಣವೀರ್ ಸಿಂಗ್, ರೋಹಿತ್ ಶರ್ಮಾ, ಆನಂದ್ ಪಿರಾಮಲ್, ಅರ್ಜುನ್ ಕಪೂರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಆಲಿಮ್ ಹಕೀಮ್ ಅವರ ಕ್ಲೈಂಟ್‌ಗಳಾಗಿದ್ದಾರೆ.
ಆಲಿಮ್ ಅವರ ತಂದೆ ಹಕೀಮ್ ಕರಣಾವಿ ಮಾರ್ಚ್ 28, 1984 ರಂದು ನಿಧನರಾದರು. ಆಗ ಆಲಿಮ್ ಅವರಿಗೆ 9 ವರ್ಷ. ಹಕೀಮ್ ಕರಣಾವಿ 1960 ರಿಂದ 1980ರವರೆಗೆ ಉನ್ನತ ಕೇಶ ವಿನ್ಯಾಸಕರಾಗಿದ್ದರು. ಅವರು ಕೇಶ ವಿನ್ಯಾಸ ಉದ್ಯಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು.
ತಂದೆಯ ಮರಣದ ನಂತರ, ಆಲಿಮ್ ಒಂಬತ್ತನೇ ವಯಸ್ಸಿನಲ್ಲಿ ಕೆಲಸ ಕಲಿಯಲು ಪ್ರಾರಂಭಿಸಿದರು. ಕಲಿಯುತ್ತಲೇ, 16 ನೇ ವಯಸ್ಸಿನಲ್ಲಿ ಕೇಶ ವಿನ್ಯಾಸಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು.
ಅಮಿತಾಬ್ ಬಚ್ಚನ್ ಅವರ ಕೂದಲನ್ನು ಪ್ರಸಿದ್ಧವಾಗಿ ಸ್ಟೈಲ್ ಮಾಡಿದ್ದವರು ಆಲಿಮ್ ಅವರ ತಂದೆ. ದಿಲೀಪ್ ಕುಮಾರ್ ನಿಂದ ಸುನಿಲ್ ದತ್, ಅನಿಲ್ ಕಪೂರ್ ವರೆಗೆ ಎಲ್ಲರೂ ಅವರ ಕ್ಲೈಂಟ್ ಆಗಿದ್ದರು. ಬ್ರೂಸ್ ಲೀ, ಮುಹಮ್ಮದ್ ಅಲಿ, ಟೋನಿ ಕ್ರೇಗ್, ರಿಚರ್ಡ್ ಹ್ಯಾರಿಸ್, ಕ್ರೇಜಿ ಬಾಯ್ಸ್, ಎಲ್ಲರೂ ಆಲಿಮ್ ಅವರ ತಂದೆಯಿಂದ ಸ್ಟೈಲ್ ಮಾಡಿಸಿಕೊಂಡವರು.
ಹದಿನಾರನೇ ವಯಸ್ಸಿನಲ್ಲಿ, ಆಲಿಮ್ ತನ್ನ ತಂದೆಯ ಹಕೀಮ್ ಬ್ರ್ಯಾಂಡ್ ಅನ್ನು ಮುಂದುವರಿಸಲು ನಿರ್ಧರಿಸಿದರು. ಆಲಿಮ್ ತಮ್ಮ ಮನೆಯ ಬಾಲ್ಕನಿಯಲ್ಲಿ ಫ್ಯಾನ್, ಬೇಸಿನ್ ಮತ್ತು ಕಟಿಂಗ್ ಚೇರ್ ಅಳವಡಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇಂದು, ಅವರ ಕಠಿಣ ಪರಿಶ್ರಮ ಮತ್ತು ಕೌಶಲ್ಯದಿಂದ, ಅವರು ದೊಡ್ಡ ಕೇಶ ವಿನ್ಯಾಸ ಸ್ಟುಡಿಯೋವನ್ನು ನಿರ್ಮಿಸಿದ್ದಾರೆ.
ಆಲಿಮ್ ಹಕೀಮ್ ಹೇರ್ ಸ್ಟೈಲಿಂಗ್ ಮತ್ತು ಹೇರ್ ಕಟ್‌ಗೆ ಕನಿಷ್ಠ 1 ಲಕ್ಷ ರೂ. ಶುಲ್ಕ ವಿಧಿಸುತ್ತಾರೆ. ಹೇರ್ ಸ್ಟೈಲಿಂಗ್ ಮತ್ತು ಅದಕ್ಕೆ ತೆಗೆದುಕೊಳ್ಳುವ ಸಮಯವನ್ನು ಅವಲಂಬಿಸಿ ಶುಲ್ಕ ಬದಲಾಗುತ್ತದೆ. ಏಕೆಂದರೆ ನಿರ್ದಿಷ್ಟ ಲುಕ್ ಸಾಧಿಸಲು ಸಾಮಾನ್ಯವಾಗಿ ಆರು ತಿಂಗಳುಗಳು ಬೇಕಾಗುತ್ತದೆ. ಇನ್ನು ವಿದೇಶಕ್ಕೆ ತೆರಳಿಯೂ ಅವರು ಹೇರ್ಸ್ಟೈಲ್ ಮಾಡುತ್ತಾರೆ. ಇದಕ್ಕೆ ಫ್ಲೈಟ್ ಟಿಕೆಟ್ ಅವರೇ ಬುಕ್ ಮಾಡಬೇಕು. ಉಳಿದುಕೊಳ್ಳಲು ವ್ಯವಸ್ಥೆಯೂ ಆಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಕ್ಲೈಂಟ್ ಪ್ರಾಫೈಲ್ ದೊಡ್ಡದಿದ್ದರೆ ಮಾತ್ರ ಅವರು ತೆರಳುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



