ಆಮಿರ್ ಖಾನ್ (Aamir Khan) ಮಗಳು ಇರಾ ಖಾನ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿಲ್ಲ. ಅವರು ಯಾವುದೇ ಸಿನಿಮಾಗಳಲ್ಲಿ ಈವರೆಗೆ ನಟಿಸಿಲ್ಲ. ಫ್ಯಾಮಿಲಿ ಸದಸ್ಯರ ರೀತಿಯಲ್ಲಿ ಅವರಿಗೆ ಚಿತ್ರರಂಗಕ್ಕೆ ಬರೋಕೆ ಇಷ್ಟವಿಲ್ಲ. ಆದರೆ, ಇರಾ ಖಾನ್ (Ira Khan) ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಹಲವು ಫೋಟೋಗಳನ್ನು ಅವರು ಪೋಸ್ಟ್ ಮಾಡುತ್ತಾ ಇರುತ್ತಾರೆ. ಈಗ ಅವರು ಹೊಸ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಇರಾ ಅವರ ಬಾಯ್ಫ್ರೆಂಡ್ ನೂಪುರ್ ಶಿಖಾರೆ ಕೂಡ ಇದ್ದಾರೆ. ಅವರನ್ನು ಇರಾ ಫ್ಯಾನ್ಸ್ ಸಖತ್ ಟ್ರೋಲ್ ಮಾಡಿದ್ದಾರೆ.
ಇರಾ ಅವರು ಇನ್ಸ್ಟಾಗ್ರಾಮ್ನಲ್ಲಿ ಒಂದಿಲ್ಲೊಂದು ಫೋಟೋ ಹಂಚಿಕೊಳ್ಳುತ್ತ ಇರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅವರ ದೇಹದ ತೂಕ ಹೆಚ್ಚಿದೆ. ಈ ಬಗ್ಗೆ ಇರಾಗೆ ಬೇಸರ ಇದೆ. ಈ ವಿಚಾರದಲ್ಲಿ ಅವರು ಖಿನ್ನತೆಗೆ ಕೂಡ ಒಳಗಾಗಿದ್ದರು. ದೇಹದ ತೂಕ ಇಳಿಸಿಕೊಳ್ಳಲು ಇರಾ ಪಣ ತೊಟ್ಟಿದ್ದಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಈ ವಿಚಾರದಲ್ಲಿ ಅವರು ಬಾಡಿ ಶೇಮಿಂಗ್ ಎದುರಿಸಿದ್ದೂ ಇದೆ. ಈಗ ಇರಾ ಹಾಕಿರುವ ಹೊಸ ಫೋಟೋದಲ್ಲಿ ಅವರ ಬಾಯ್ಫ್ರೆಂಡ್ಅನ್ನು ಟ್ರೋಲ್ ಮಾಡಲಾಗಿದೆ.
ಇರಾ ಹಾಗೂ ನೂಪುರ್ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಇದನ್ನು ಇವರು ಮುಚ್ಚಿಟ್ಟಿಲ್ಲ. ಇರಾಗೆ ಹೋಲಿಕೆ ಮಾಡಿದರೆ ನೂಪರ್ ನೋಡಲು ಅಂದವಾಗಿಲ್ಲ ಎಂಬುದು ಫ್ಯಾನ್ಸ್ ಅಭಿಪ್ರಾಯ. ಈ ಕಾರಣಕ್ಕೆ ನೂಪುರ್ ಜತೆ ಫೋಟೋ ಹಾಕಿದಾಗೆಲ್ಲ ಟ್ರೋಲ್ ಮಾಡಲಾಗುತ್ತದೆ. ಈಗ ಅಜ್ಜಿ ಹಾಗೂ ನೂಪುರ್ ಜತೆ ಒಟ್ಟಾಗಿ ನಿಂತಿರುವ ಫೋಟೋವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಬಾಯ್ಫ್ರೆಂಡ್ ಜತೆ ಇರಾ ಖಾನ್ ಬರ್ತ್ಡೇ ಆಚರಣೆ; ಮತ್ತಷ್ಟು ಫೋಟೋ ಹಂಚಿಕೊಂಡ ಆಮಿರ್ ಮಗಳು
ಇರಾ ಹಂಚಿಕೊಂಡಿರುವ ಫೋಟೋಗೆ ಕೆಲವರು ‘ಅವರು ನಿಜಕ್ಕೂ ನಿಮ್ಮ ಬಾಯ್ಫ್ರೆಂಡಾ? ಅವರನ್ನು ಎಲ್ಲಿಂದ ಹುಡುಕಿದಿರೋ ದೇವರಿಗೇ ಗೊತ್ತು’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ‘ನೀವು ಸ್ಟಾರ್ ನಟನ ಮಗಳು ಎಂಬ ಮಾತ್ರಕ್ಕೆ ಸುದ್ದಿಯಲ್ಲಿದ್ದೀರಾ. ಇಲ್ಲದಿದ್ದರೆ ನೀವು ಜೀರೋ’ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ನೂಪುರ್ ಅವರ ದೇಹದ ಬಣ್ಣದ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಇರಾ ಅವರ ದೇಹದ ಬಗ್ಗೆಯೂ ಹಗುರವಾಗಿ ಕಮೆಂಟ್ ಮಾಡಲಾಗಿದೆ. ಈ ಪೋಸ್ಟ್ಗೆ ಕಮೆಂಟ್ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಲ್ಲಿ ಬಹುತೇಕ ಕಮೆಂಟ್ಗಳು ನೆಗೆಟಿವ್ ಕಮೆಂಟ್ಗಳೇ. ಆದರೆ, ಈ ಬಗ್ಗೆ ಇರಾ ಅವರು ತಲೆಕೆಡಿಸಿಕೊಂಡಿಲ್ಲ.