ಆಮಿರ್ ಖಾನ್ (Aamir Khan) ನಟನೆಯ ಬಹುನಿರೀಕ್ಷಿತ ‘ಲಾಲ್ ಸಿಂಗ್ ಚಡ್ಡಾ’ (Laal Singh Chaddha) ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಐಪಿಎಲ್ 2022ರ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ನ ಎರಡನೇ ಲಘು ವಿರಾಮದ ವೇಳೆ ಟ್ರೇಲರ್ ರಿಲೀಸ್ ಮಾಡಲಾಗಿದೆ. ಅದ್ವೈತ್ ಚಂದನ್ ನಿರ್ದೇಶನದ ಈ ಚಿತ್ರ ಹಾಲಿವುಡ್ನ ‘ಫಾರೆಸ್ಟ್ ಗಂಪ್’ನ ಅಧಿಕೃತ ರಿಮೇಕ್ ಆಗಿದೆ. ಟಾಲಿವುಡ್ ನಟ ನಾಗಚೈತನ್ಯ ಈ ಚಿತ್ರದ ಮೂಲಕ ಬಾಲಿವುಡ್ಗೆ ಪ್ರವೇಶಿಸುತ್ತಿದ್ದಾರೆ. ಟ್ರೇಲರ್ನಲ್ಲಿ ಅವರೂ ಕಾಣಿಸಿಕೊಂಡಿದ್ದು, ಕುತೂಹಲ ಮೂಡಿಸಿದ್ದಾರೆ. ಎಂದಿನಿಂತೆ ಆಮಿರ್ ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅವರ ಮ್ಯಾನರಿಸಂ ಗಮನ ಸೆಳೆದಿದೆ. ಕರೀನಾ ಕಪೂರ್ ಪಾತ್ರ ವಿಶೇಷವಾಗಿದೆ. 2.45 ನಿಮಿಷಗಳ ಟ್ರೇಲರ್ ಈಗ ಟ್ರೆಂಡ್ ಆಗುತ್ತಿದೆ. ಆಮಿರ್ ಖಾನ್ ಹಾಗೂ ಕಿರಣ್ ರಾವ್ ಒಟ್ಟಾಗಿ ‘ಆಮಿರ್ ಖಾನ್ ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ ಚಿತ್ರ ನಿರ್ಮಿಸಿದ್ದಾರೆ. ‘ಪ್ರೀತಿ, ಭರವಸೆ ತುಂಬಿದ ಸರಳ ವ್ಯಕ್ತಿ ಲಾಲ್ ಸಿಂಗ್ ಛಡ್ಡಾರ ಅಸಾಮಾನ್ಯ ಜೀವನ ಪ್ರಯಾಣವನ್ನು ಆನಂದಿಸಿ’ ಎಂದು ಬರೆದುಕೊಂಡು ಟ್ರೇಲರ್ ಹಂಚಿಕೊಳ್ಳಲಾಗಿದೆ.
‘ಆಮಿರ್ ಖಾನ್ ಪ್ರೊಡಕ್ಷನ್ಸ್’ ಟ್ವೀಟ್:
Experience the extraordinary journey of #LaalSinghChaddha, a simple man whose heart is filled with love, hope and warmth.#LaalSinghChaddhaTrailer out now! Releasing in cinemas worldwide on 11th Aug.https://t.co/yahghWFhJA
— Aamir Khan Productions (@AKPPL_Official) May 29, 2022
ಇದನ್ನೂ ಓದಿ: ಆಮಿರ್ ಖಾನ್ ಜತೆ ತೆರೆ ಹಂಚಿಕೊಂಡ ಈ ನಟಿ ಈಗ ಹೇಗಾಗಿದ್ದಾರೆ ನೋಡಿ
ಆಗಸ್ಟ್ 11ರಂದು ‘ಲಾಲ್ ಸಿಂಗ್ ಚಡ್ಡಾ’ ರಿಲೀಸ್:
ಈ ಹಿಂದೆ ಚಿತ್ರವನ್ನು ಏಪ್ರಿಲ್ 14ರಂದು ತೆರೆಗೆ ತರಲು ಉದ್ದೇಶಿಸಲಾಗಿತ್ತು. ಅದೇ ದಿನ ‘ಕೆಜಿಎಫ್ ಚಾಪ್ಟರ್ 2’ ಕೂಡ ಬಿಡುಗಡೆ ಘೋಷಿಸಿತ್ತು. ನಂತರದಲ್ಲಿ ಚಿತ್ರದ ರಿಲೀಸ್ಅನ್ನು ಮುಂದೂಡಿದ್ದರು ಆಮಿರ್. ಚಿತ್ರದ ಕೆಲಸಗಳು ಪೂರ್ಣಗೊಂಡಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದರು. ಇದೀಗ ಚಿತ್ರವು ತೆರೆಗೆ ಬರಲು ಸಿದ್ಧವಾಗಿದ್ದು, ಆಗಸ್ಟ್ 11 ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ.
‘ಲಾಲ್ ಸಿಂಗ್ ಚಡ್ಡಾ’ ಟ್ರೇಲರ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
‘ಲಾಲ್ ಸಿಂಗ್ ಚಡ್ಡಾ’ ಚಿತ್ರವನ್ನು ಬರೋಬ್ಬರಿ 200ಕ್ಕೂ ಅಧಿಕ ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ‘ಲಗಾನ್’ ಚಿತ್ರದ ನಂತರ ಆಮಿರ್ ಒಂದು ಚಿತ್ರದ ಚಿತ್ರೀಕರಣಕ್ಕಾಗಿಯೇ ಇಷ್ಟೊಂದು ಸಮಯ ವ್ಯಯಿಸಿರುವುದು ಇದೇ ಮೊದಲು. ಅಲ್ಲದೇ ಈ 200 ದಿನಗಳ ಚಿತ್ರೀಕರಣದ ಅವಧಿಯಲ್ಲಿ ಚಿತ್ರತಂಡ ಭಾರತದಾದ್ಯಂತ ಸುಮಾರು 100ಕ್ಕೂ ಅಧಿಕ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿದೆ. ಟ್ರೇಲರ್ನಲ್ಲಿ ಇದಕ್ಕೆ ಸಾಕ್ಷಿ ಸಿಕ್ಕಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:29 pm, Sun, 29 May 22