12 ದಿನ ಸ್ನಾನ ಮಾಡದೆ ಇದ್ದರು ಆಮಿರ್ ಖಾನ್; ಸ್ಟಾರ್ ಆದರೂ ಹೀಗೇಕೆ?

ಪ್ರಸಿದ್ಧ ನಟ ಆಮಿರ್ ಖಾನ್ ಅವರು ತಮ್ಮ ಚಲನಚಿತ್ರ ಪಾತ್ರಗಳಿಗಾಗಿ 12 ದಿನಗಳವರೆಗೆ ಸ್ನಾನ ಮಾಡದೇ ಇದ್ದ ವಿಷಯವನ್ನು ಬಹಿರಂಗಪಡಿಸಿದ್ದಾರೆ. "ರಾಖ್" ಮತ್ತು "ಗುಲಾಮ್" ಚಿತ್ರಗಳ ಚಿತ್ರೀಕರಣದ ಸಮಯದಲ್ಲಿ ಅವರು ಈ ರೀತಿ ಮಾಡಿದ್ದರು ಎಂದು ಹೇಳಿದ್ದಾರೆ. ನಟನೆಗೆ ನೈಜತೆ ತರಲು ಇದನ್ನು ಮಾಡಿದ್ದಾಗಿ ಅವರು ವಿವರಿಸಿದ್ದಾರೆ. ಇದು ಅಭಿಮಾನಿಗಳಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.

12 ದಿನ ಸ್ನಾನ ಮಾಡದೆ ಇದ್ದರು ಆಮಿರ್ ಖಾನ್; ಸ್ಟಾರ್ ಆದರೂ ಹೀಗೇಕೆ?
Aamir Khan
Edited By:

Updated on: May 07, 2025 | 6:11 PM

ಸ್ನಾನ ಮಾಡುವ ವಿಚಾರದಲ್ಲಿ ಎಲ್ಲರದ್ದೂ ಒಂದೊಂದು ಥಿಯರಿ ಇದೆ ಎನ್ನಿ. ಕೆಲವರು ನಿತ್ಯಕ್ಕೆ ಎರಡು ಬಾರಿ ಸ್ನಾನ ಮಾಡಿದರೆ ಕೆಲವರು ಒಮ್ಮೆ ಮಾತ್ರ ಮಾಡುತ್ತಾರೆ. ಇನ್ನೂ ಕೆಲವರು ಸ್ನಾನ ಮಾಡದೆ ಎರಡು ಮೂರು ದಿನ ಇರಬಲ್ಲರು. ಆದರೆ, ಸಿನಿಮಾ ಸ್ಟಾರ್ಸ್ ಹೀಗಲ್ಲ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ಏಕೆಂದರೆ ಆಮಿರ್ ಖಾನ್ (Aamir Khan) ಅವರು ಈ ಮೊದಲು 12 ದಿನ ಸ್ನಾನ ಮಾಡದೆ ಇದ್ದರು. ಸಂದರ್ಶನ ಒಂದರಲ್ಲಿ ಈ ವಿಚಾರವನ್ನು ಅವರು ರಿವೀಲ್ ಮಾಡಿದ್ದಾರೆ. ಇದನ್ನು ಕೇಳಿದ ಅವರ ಅಭಿಮಾನಿಗಳಿಗೆ ಶಾಕ್ ಆಗಿದ್ದು ನಿಜ.

ಆಮಿರ್ ಖಾನ್ ಅವರು ತುಂಬಾನೇ ಶಿಸ್ತಿನ ವ್ಯಕ್ತಿ. ಅವರು ಎಲ್ಲವನ್ನೂ ಪರ್ಫೆಕ್ಟ್ ಆಗಿ ಇರುವಂತೆ ನೋಡಿಕೊಳ್ಳುತ್ತಾರೆ. ಆದರೆ, ಸ್ನಾನದ ವಿಚಾರದಲ್ಲಿ ಅವರು ಒಮ್ಮೆ 12 ದಿನ ಸ್ನಾನ ಮಾಡೇ ಇರಲಿಲ್ಲ. ಮತ್ತೊಮ್ಮೆ ವಾರಗಟ್ಟಲೆ ಸ್ನಾನ ಮಾಡಿರಲಿಲ್ಲ ಎನ್ನಿ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದರು.

‘ನಾನು ಎರಡು ಬಾರಿ ಹೀಗೆ ಮಾಡಿದ್ದೆ. ರಾಖ್ ಸಿನಿಮಾದ ಶೂಟಿಂಗ್ ಸಮಯ ಅದು. ನಾನು ಸ್ನಾನವನ್ನೇ ಮಾಡಿರಲಿಲ್ಲ. ಏಕೆಂದರೆ ಮನೆ ಕಳೆದುಕೊಳ್ಳುವ ನಾನು ಬೀದಿಯಲ್ಲಿ ಉಳಿದುಕೊಳ್ಳುವ ಪಾತ್ರವಾಗಿತ್ತು. ನೈಜತೆ ಇರಲಿ ಎಂದು ಸ್ನಾನವನ್ನು ಮಾಡಿರಲಿಲ್ಲ. ನಿಜಕ್ಕೂ ನಾನು ಬೀದಿ ಬದಿಯವನಂತೆ ಕಾಣುತ್ತಿದ್ದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ:ಸಿನಿಮಾಗಳು ಸೋಲುತ್ತಿರುವುದೇಕೆ? ಚಿತ್ರರಂಗದ ಹುಳುಕು ತೆರೆದಿಟ್ಟ ಆಮಿರ್ ಖಾನ್

‘ಗುಲಾಮ್ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಒಂದು ದೀರ್ಘವಾದ ಆಕ್ಷನ್ ಸೀಕ್ವೆನ್ಸ್ ಇತ್ತು, ಅಲ್ಲಿ ನನಗೆ ಕೆಟ್ಟದಾಗಿ ಹೊಡೆಯವ ದೃಶ್ಯ ಇತ್ತು. ಕ್ರಮೇಣ ನನ್ನ ಗಾಯಗಳು ಹೆಚ್ಚಾಗತೊಡಗಿದವು. ಶೂಟಿಂಗ್ ನಂತರ ನಾನು ಪ್ರತಿದಿನ ಸ್ನಾನ ಮಾಡಿದ್ದರೆ, ಅದು ನಿರಂತರತೆಯನ್ನು ಹಾಳುಮಾಡುತ್ತಿತ್ತು. ಹಾಗಾಗಿ ಆಗ ನಾನು ಒಂದು ವಾರ ಸ್ನಾನ ಮಾಡದಿರಲು ನಿರ್ಧರಿಸಿದೆ. ಏಕೆಂದರೆ ನೀವು ಮರುದಿನ ಸ್ನಾನ ಮಾಡುವಾಗ, ನೀವು ತಾಜಾವಾಗಿ ಕಾಣುತ್ತೀರಿ, ಅದು ನನಗೆ ಬೇಡವಾಗಿತ್ತು’ ಎಂದಿದ್ದಾರೆ ಅವರು.

ಆಮಿರ್ ನಟನೆಯ ಗುಲಾಮ್ 1998ರಲ್ಲಿ ಬಿಡುಗಡೆ ಕಂಡಿತು. ‘ರಾಖ್’ ಚಿತ್ರ 1989ರಲ್ಲಿ ರಿಲೀಸ್ ಆಗಿತ್ತು. ಆಮಿರ್ ಹೇಳಿದ ಈ ವಿಚಾರ ಅಚ್ಚರಿ ಮೂಡಿಸಿದೆ. ಈಗ ಆಮಿರ್ ಖಾನ್ ಅವರು ‘ಸಿತಾರೇ ಜಮೀನ್ ಪರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿ ಗಮನ ಸೆಳೆದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ