ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದ ಸೌತ್ ನಿರ್ದೇಶಕ; ಹಳೆಯ ಘಟನೆ ನೆನೆದ ಆಮಿರ್​ ಖಾನ್

ಸಾಮಾನ್ಯವಾಗಿ ಸಿನಿಮಾ ಶೂಟಿಂಗ್ ಮಾಡುವಾಗ ಯಾವುದಾದರೂ ಶೂಟ್​ಗಳನ್ನು ಇಂಪ್ರೂವ್ ಮಾಡಬೇಕು ಎನಿಸಿದರೆ ಅದನ್ನು ಹೀರೋಗಳು ನಿರ್ದೇಶಕರಿಗೆ ಹೇಳುತ್ತಾರೆ. ನಿರ್ದೇಶಕರಿಗೆ ಐಡಿಯಾ ಇಷ್ಟ ಆದರೆ ಅದನ್ನು ಒಪ್ಪಿಕೊಳ್ಳುತ್ತಾರೆ, ಇಷ್ಟ ಆಗಿಲ್ಲ ಎಂದರೆ ವಿನಮ್ರತೆಯಿಂದ ಬೇಡ ಎನ್ನುತ್ತಾರೆ. ಆದರೆ, ಮುರುಗದಾಸ್ ಈ ರೀತಿ ಅಲ್ಲ.

ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದ ಸೌತ್ ನಿರ್ದೇಶಕ; ಹಳೆಯ ಘಟನೆ ನೆನೆದ ಆಮಿರ್​ ಖಾನ್
ಆಮಿರ್ ಖಾನ್
Updated By: ರಾಜೇಶ್ ದುಗ್ಗುಮನೆ

Updated on: May 01, 2024 | 8:35 AM

ಆಮಿರ್ ಖಾನ್ (Aamir Khan) ಅವರು ಹಲವು ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. ಕೆಲವು ನಿರ್ದೇಶಕರು ಬೆಸ್ಟ್ ಎನಿಸಿದರೆ, ಇನ್ನೂ ಕೆಲವರ ಜೊತೆ ಕೆಲಸ ಮಾಡೋದು ಅವರಿಗೆ ಖುಷಿ ನೀಡಿಲ್ಲ. ಅವರಿಗೆ ತಮಿಳು ನಿರ್ದೇಶಕ ಎಆರ್ ಮುರುಗದಾಸ್ ಅವರು ವಿಶೇಷ ಎನಿಸಿದ್ದಾರೆ. ಈ ಬಗ್ಗೆ ಆಮಿರ್ ಖಾನ್ ಅವರು ಇತ್ತೀಚೆಗೆ ಮಾತನಾಡಿದ್ದಾರೆ. ಯಾವುದೇ ವಿಚಾರ ಇದ್ದರೂ ಅದನ್ನು ನೇರವಾಗಿ, ಮುಖಕ್ಕೆ ಹೊಡೆದಂತೆ ಹೇಳುವ ಸ್ವಭಾವ ಮುರುಗದಾಸ್ ಅವರದ್ದಂತೆ. ಇದನ್ನು ಆಮಿರ್ ತಮ್ಮದೇ ಸ್ಟೈಲ್​ನಲ್ಲಿ ವಿವರಿಸಿದ್ದಾರೆ.

ಕಪಿಲ್ ಶರ್ಮಾ ಅವರು ‘ದಿ ಗ್ರೇಟ್ ಇಂಡಿಯ್ ಕಪಿಲ್ ಶೋ’ ನಡೆಸಿಕೊಡುತ್ತಿದ್ದಾರೆ. ಇದು ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಕಾಣುತ್ತಿದೆ. ಈ ಶೋಗೆ ಆಮಿರ್ ಖಾನ್ ಅವರು ಅತಿಥಿಯಾಗಿ ಆಗಮಿಸಿದ್ದರು. ಅವರು ತಮ್ಮ ಜೀವನದ ಅನುಭವಗಳನ್ನು ವೀಕ್ಷಕರ ಎದುರು ತೆಗೆದಿಟ್ಟಿದ್ದಾರೆ. ಈ ವೇಳೆ ಅವರು ಮುರುಗದಾಸ್ ಬಗ್ಗೆಯೂ ಹೇಳಿಕೊಂಡಿದ್ದಾರೆ.

‘ಘಜಿನಿ’ ಸಿನಿಮಾ ತಮಿಳಿನಲ್ಲಿ ರಿಲೀಸ್ ಆಗಿ ಹಿಟ್ ಆಯಿತು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಮುರುಗದಾಸ್ ಅವರು. ಇದರ ಹಿಂದಿ ವರ್ಷನ್​ಗೂ ಮುರುಗದಾಸ್ ಅವರೇ ಆ್ಯಕ್ಷನ್ ಕಟ್ ಹೇಳಿದ್ದರು. ಆಮಿರ್ ಖಾನ್ ಅವರು ಇದರಲ್ಲಿ ನಟಿಸಿದ್ದರು. ಈ ಸಿನಿಮಾ ಸೂಪರ್ ಡೂಪಟ್ ಹಿಟ್ ಆಯಿತು. ಈ ಚಿತ್ರದ ಶೂಟಿಂಗ್ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ.

ಸಾಮಾನ್ಯವಾಗಿ ಸಿನಿಮಾ ಶೂಟಿಂಗ್ ಮಾಡುವಾಗ ಯಾವುದಾದರೂ ಶೂಟ್​ಗಳನ್ನು ಇಂಪ್ರೂವ್ ಮಾಡಬೇಕು ಎನಿಸಿದರೆ ಅದನ್ನು ಹೀರೋಗಳು ನಿರ್ದೇಶಕರಿಗೆ ಹೇಳುತ್ತಾರೆ. ನಿರ್ದೇಶಕರಿಗೆ ಐಡಿಯಾ ಇಷ್ಟ ಆದರೆ ಅದನ್ನು ಒಪ್ಪಿಕೊಳ್ಳುತ್ತಾರೆ, ಇಷ್ಟ ಆಗಿಲ್ಲ ಎಂದರೆ ವಿನಮ್ರತೆಯಿಂದ ಬೇಡ ಎನ್ನುತ್ತಾರೆ. ಆದರೆ, ಮುರುಗದಾಸ್ ಈ ರೀತಿ ಅಲ್ಲ. ‘ಮುರುಗದಾಸ್ ಅವರು ಭಿನ್ನ ವ್ಯಕ್ತಿ. ಅವರು ಯಾವಾಗಲೂ ಫಿಲ್ಟರ್ ಇಲ್ಲದೆ ಮಾತನಾಡುತ್ತಾರೆ. ದೃಶ್ಯದ ಬಗ್ಗೆ ನಾವು ಯಾವುದಾದರೂ ಐಡಿಯಾ ಕೊಟ್ಟರೆ ಅದರ ಬಗ್ಗೆ ಮುರುಗದಾಸ್ ಅವರು ಫಿಲ್ಟರ್ ಇಲ್ಲದೆ ಪ್ರತಿಕ್ರಿಯಿಸುತ್ತಿದ್ದರು. ಆ ಬಗ್ಗೆ ಅವರಿಗೆ ಯಾವುದೇ ಭಯ ಕೂಡ ಇರುತ್ತಿರಲಿಲ್ಲ. ಎದುರಿದ್ದ ವ್ಯಕ್ತಿ ಯಾರು ಎಂಬುದನ್ನೂ ಅವರು ನೋಡುತ್ತಿರಲಿಲ್ಲ’ ಎಂದಿದ್ದಾರೆ ಆಮಿರ್ ಖಾನ್.

‘ಮುರುದಾಸ್​ಗೆ ಐಡಿಯಾ ಇಷ್ಟ ಆಯ್ತು ಎಂದುಕೊಳ್ಳಿ ಸೂಪರ್ ಹಿಟ್ ಸರ್ ಸೂಪರ್ ಹಿಟ್ ಎನ್ನುತ್ತಿದ್ದರು. ಅವರಿಗೆ ಯಾವುದೇ ಫಿಲ್ಟರ್ ಇಲ್ಲ. ನಾನು ಈ ಗುಣವನ್ನು ಅವರಿಂದ ಕಲಿತೆ’ ಎಂದಿದ್ದಾರೆ ಆಮಿರ್ ಖಾನ್. ಆಮಿರ್ ಖಾನ್ ಅವರು ಆದಷ್ಟು ಫಿಲ್ಟರ್ ಇಲ್ಲದೆ ಮಾತನಾಡಲು ಪ್ರಯತ್ನಿಸುತ್ತಾರಂತೆ.

ಇದನ್ನೂ ಓದಿ: ‘ಘಜಿನಿ 2’ ಬಗ್ಗೆ ಆಸೆ ಇಟ್ಟುಕೊಂಡಿದ್ದ ಸಿನಿಪ್ರಿಯರಿಗೆ ನಿರಾಸೆ; ಮುಂದಿನ ಪ್ಲ್ಯಾನ್​ ತಿಳಿಸಿದ ಎ.ಆರ್​. ಮುರುಗದಾಸ್​

ಮುರುಗದಾಸ್ ಅವರು ಬಾಲಿವುಡ್​ಗೆ ಮರಳಿದ್ದಾರೆ. ‘ಸಲ್ಮಾನ್ ಖಾನ್’ ನಟನೆಯ ‘ಸಿಖಂದರ್’ ಸಿನಿಮಾನ ಅವರು ನಿರ್ದೇಶನ ಮಾಡುತ್ತಿದ್ದಾರೆ. 2025ರ ಈದ್​​ಗೆ ಸಿನಿಮಾ ರಿಲೀಸ್ ಆಗಲಿದೆ ಎಂದು ಈಗಾಗಲೇ ಘೋಷಣೆ ಆಗಿದೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ ಎಂದು ಫ್ಯಾನ್ಸ್ ನಿರೀಕ್ಷಿಸುತ್ತಿದ್ದಾರೆ. ಆಮಿರ್ ಖಾನ್ ಅವರು ಕೂಡ ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಇದಕ್ಕೆ ‘ಸಿತಾರೆ ಜಮೀನ್​ಪರ್’ ಎಂದು ಟೈಟಲ್ ಕೊಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:08 am, Wed, 1 May 24