‘ಘಜಿನಿ 2’ ಬಗ್ಗೆ ಆಸೆ ಇಟ್ಟುಕೊಂಡಿದ್ದ ಸಿನಿಪ್ರಿಯರಿಗೆ ನಿರಾಸೆ; ಮುಂದಿನ ಪ್ಲ್ಯಾನ್​ ತಿಳಿಸಿದ ಎ.ಆರ್​. ಮುರುಗದಾಸ್​

A R Murugadoss | Ghajini 2: ‘ಘಜಿನಿ’ ಸಿನಿಮಾದಿಂದ ಎ.ಆರ್​. ಮುರುಗದಾಸ್​ ಅವರಿಗೆ ಸಖತ್​ ಬೇಡಿಕೆ ಸೃಷ್ಟಿ ಆಗಿತ್ತು. ಆ ಚಿತ್ರದ ಸೀಕ್ವೆಲ್​ಗಾಗಿ ಅವರು ಸ್ಕ್ರಿಪ್ಟ್​ ಮಾಡುತ್ತಿದ್ದಾರೆ ಎಂದು ಗಾಸಿಪ್​ ಹಬ್ಬಿತ್ತು.

‘ಘಜಿನಿ 2’ ಬಗ್ಗೆ ಆಸೆ ಇಟ್ಟುಕೊಂಡಿದ್ದ ಸಿನಿಪ್ರಿಯರಿಗೆ ನಿರಾಸೆ; ಮುಂದಿನ ಪ್ಲ್ಯಾನ್​ ತಿಳಿಸಿದ ಎ.ಆರ್​. ಮುರುಗದಾಸ್​
ಆಮಿರ್ ಖಾನ್, ಸೂರ್ಯ
Follow us
ಮದನ್​ ಕುಮಾರ್​
|

Updated on: Apr 03, 2023 | 7:00 AM

ನಿರ್ದೇಶಕ ಎ.ಆರ್​. ಮುರುಗದಾಸ್​ (A R Murugadoss) ಅವರು ಇತ್ತೀಚೆಗೆ ಸೈಲೆಂಟ್​ ಆಗಿದ್ದಾರೆ. ಒಂದು ಕಾಲದಲ್ಲಿ ಬ್ಯಾಕ್​ ಟು ಬ್ಯಾಕ್​ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದ ಅವರು ಈಗ ನಿರ್ದೇಶನದಿಂದ ಅಂತರ ಕಾ​ಯ್ದುಕೊಂಡಿದ್ದಾರೆ. ಅವರು ನಿರ್ಮಾಣ ಮಾಡಿರುವ ‘ಆಗಸ್ಟ್​ 16, 1947’ ಸಿನಿಮಾದ ಸುದ್ದಿಗೋಷ್ಠಿ ಇತ್ತೀಚೆಗೆ ಮುಂಬೈನಲ್ಲಿ ನಡೆಯಿತು. ಈ ವೇಳೆ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಎ.ಆರ್​. ಮುರುಗದಾಸ್​ ಅವರು ‘ಘಜಿನಿ’ ಸಿನಿಮಾ (Ghajini) ನಿರ್ದೇಶಿಸಿ ದೊಡ್ಡ ಯಶಸ್ಸು ಕಂಡಿದ್ದರು. ಆ ಚಿತ್ರಕ್ಕೆ ಸೀಕ್ವೆಲ್(Ghajini 2) ಬರಲಿದೆ ಎಂದು ಸಿನಿಪ್ರಿಯರು ನಿರೀಕ್ಷಿಸಿದ್ದರು. ಆದರೆ ಅದು ಸಾಧ್ಯವಿಲ್ಲ ಎಂದು ಈಗ ಸ್ವತಃ ಎ.ಆರ್​. ಮುರುಗದಾಸ್​ ಅವರು ಸ್ಪಷ್ಟನೆ ನೀಡಿದ್ದಾರೆ. ಇದರಿಂದ ಕೆಲವು ಅಭಿಮಾನಿಗಳಿಗೆ ಬೇಸರ ಆಗಿದೆ.

2005ರಲ್ಲಿ ತಮಿಳಿನ ‘ಘಜಿನಿ’ ಸಿನಿಮಾ ತೆರೆಕಂಡು ಸೂಪರ್​ ಹಿಟ್​ ಆಯಿತು. ಆ ಚಿತ್ರದಲ್ಲಿ ಸೂರ್ಯ ಅವರ ನಟನೆಗೆ ಫ್ಯಾನ್ಸ್​ ಫಿದಾ ಆದರು. ಅವರಿಗೆ ಜೋಡಿಯಾಗಿ ಯಾಸಿನ್​ ನಟಿಸಿದ್ದರು. ನಂತರ ಅದೇ ಸಿನಿಮಾವನ್ನು ಬಾಲಿವುಡ್​ಗೆ ರಿಮೇಕ್​ ಮಾಡಲಾಯಿತು. 2008ರಲ್ಲಿ ಬಂದ ಹಿಂದಿಯ ‘ಘಜಿನಿ’ ಸಿನಿಮಾದಲ್ಲಿ ಆಮಿರ್​ ಖಾನ್​ ಮತ್ತು ಯಾಸಿನ್​ ತೆರೆಹಂಚಿಕೊಂಡರು. ಆ ಚಿತ್ರ ಕೂಡ ಬ್ಲಾಕ್​ಬಸ್ಟರ್​ ಹಿಟ್​ ಆಯಿತು.

ಇದನ್ನೂ ಓದಿ: ‘ಸಲಾರ್​’ ಸಿನಿಮಾಗೆ ಸೀಕ್ವೆಲ್ ಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸಲಿದೆ ಈ ವಿಚಾರ

ಇದನ್ನೂ ಓದಿ
Image
ಈ ಫೋಟೋದಲ್ಲಿರುವ ಸ್ಟಾರ್ ನಟರು ಯಾರು ಎಂದು ಗುರುತಿಸುತ್ತೀರಾ?
Image
‘ವಿಕ್ರಮ್​’ ವಿಲನ್ ಸೂರ್ಯಗೆ ರೋಲೆಕ್ಸ್ ವಾಚ್ ಗಿಫ್ಟ್ ಕೊಟ್ಟ ಕಮಲ್ ಹಾಸನ್​; ಇದರ ಬೆಲೆ ಎಷ್ಟು ಲಕ್ಷ? ಗೆಸ್ ಮಾಡಿ
Image
ಅಪಘಾತದಲ್ಲಿ ಮೃತಪಟ್ಟ ಅಭಿಮಾನಿ ಮನೆಗೆ ಭೇಟಿ ನೀಡಿ ಭಾವುಕರಾದ ನಟ ಸೂರ್ಯ
Image
Suriya: ನಟ ಸೂರ್ಯ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ; ಕಾರಣವೇನು? ಇಲ್ಲಿದೆ ಮಾಹಿತಿ

ಬಾಲಿವುಡ್​ನಲ್ಲಿ 100 ಕೋಟಿ ರೂಪಾಯಿ ಗಳಿಸಿದ ಮೊದಲ ಸಿನಿಮಾ ಎಂಬ ಖ್ಯಾತಿ ‘ಘಜಿನಿ’ ಚಿತ್ರಕ್ಕಿದೆ. ಆ ಬಳಿಕ ಹಿಂದಿ ಚಿತ್ರರಂಗದಲ್ಲಿ ಮುರುಗದಾಸ್​ ಅವರಿಗೆ ಸಖತ್​ ಬೇಡಿಕೆ ಸೃಷ್ಟಿ ಆಯಿತು. ಇಷ್ಟೆಲ್ಲ ಸಕ್ಸಸ್​ ತಂದುಕೊಟ್ಟ ‘ಘಜಿನಿ’ ಸಿನಿಮಾದ ಸೀಕ್ವೆಲ್​ಗಾಗಿ ಅವರು ಸ್ಕ್ರಿಪ್ಟ್​ ಮಾಡುತ್ತಿದ್ದಾರೆ ಎಂದು ಕೆಲವರು ಗಾಸಿಪ್​ ಹಬ್ಬಿಸಿದ್ದರು. ಆದರೆ ಅದು ನಿಜವಲ್ಲ ಎಂದು ಸ್ವತಃ ಮುರುಗದಾಸ್​ ಹೇಳಿದ್ದಾರೆ.

ಇದನ್ನೂ ಓದಿ: 2022ರಲ್ಲಿ ಸೀಕ್ವೆಲ್​ಗಳದ್ದೇ ದರ್ಬಾರು; ‘ಪಾರ್ಟ್ 2’ ಮಾಡಿ ಗೆದ್ದ ನಿರ್ಮಾಪಕರು

‘ಘಜಿನಿ 2 ಬಗ್ಗೆ ನನಗೆ ಏನೂ ತಿಳಿದಿಲ್ಲ. ನಾಯಕಿ ಪಾತ್ರ ಸತ್ತು ಹೋಯ್ತು, ಕಥಾನಾಯಕನಿಗೆ ನೆನಪಿನ ಶಕ್ತಿ ಇಲ್ಲ. ಈಗ ನಾನು ಹೊಸದೇನನ್ನೋ ಮಾಡುತ್ತೇನೆ. ಒಂದೆರಡು ಸ್ಕ್ರಿಪ್ಟ್​ಗಳು ಇವೆ. ಹಿಂದಿಯಲ್ಲಿ ಹೊಸ ಪ್ರಯತ್ನ ಮಾಡುತ್ತೇನೆ’ ಎಂದು ಎ.ಆರ್​. ಮುರುಗದಾಸ್​ ಹೇಳಿದ್ದಾರೆ. ಆ ಮೂಲಕ ಅವರು ‘ಘಜಿನಿ 2’ ಬಗೆಗಿನ ವದಂತಿಗಳನ್ನು ತಳ್ಳಿಹಾಕಿದ್ದಾರೆ.

ಎ.ಆರ್​. ಮುರುಗದಾಸ್​ ನಿರ್ಮಾಣ ಮಾಡಿರುವ ‘ಆಗಸ್ಟ್​ 16, 1947’ ಸಿನಿಮಾ ಏಪ್ರಿಲ್​ 7ರಂದು ರಿಲೀಸ್​ ಆಗಲಿದೆ. ಹಲವು ಭಾಷೆಗಳಿಗೆ ಡಬ್​ ಮಾಡಿ ಈ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟದ ಕಥೆಯನ್ನು ಈ ಸಿನಿಮಾ ಹೊಂದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ