ರಸೆಲ್ ಬರ್ತ್ಡೇ ದಿನ ಮುಖಕ್ಕೆ ಕೇಕ್ ಬಳಿದ ಶಾರುಖ್ ಕಿರಿಯ ಮಗ ಅಬ್ರಾಮ್; ಇಲ್ಲಿದೆ ಕ್ಯೂಟ್ ವಿಡಿಯೋ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಅಧಿಕೃತ ಖಾತೆಯಲ್ಲಿ ರಸೆಲ್ ಬರ್ತ್ಡೇ ಸೆಲೆಬ್ರೇಷನ್ ವಿಡಿಯೋ ಹಂಚಿಕೊಳ್ಳಲಾಗಿದೆ. ಇದರಲ್ಲಿ ಶಾರುಖ್ ಖಾನ್ ಅವರು ಕೂಡ ಭಾಗವಹಿಸಿದ್ದರು. ಅಬ್ರಾಮ್ ಇತರ ಮಕ್ಕಳೊಂದಿಗೆ ಸೆಲೆಬ್ರೇಷನ್ನಲ್ಲಿ ಭಾಗಿ ಆಗಿದ್ದಾನೆ. ಶಾರುಖ್ ಖಾನ್ ಅವರು ಪ್ರಿತಿಯಿಂದ ರಸೆಲ್ನ ಹಗ್ ಮಾಡಿ ವಿಶ್ ತಿಳಿಸಿದ್ದಾರೆ.
ಶಾರುಖ್ ಖಾನ್ (Shah Rukh Khan) ಅವರು ‘ಕೆಕೆಆರ್’ ತಂಡದ ಒಡೆತನ ಹೊಂದಿದ್ದಾರೆ. ಸೋಮವಾರ (ಏಪ್ರಿಲ್ 29) ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತ ತಂಡ ಗೆಲುವು ಕಂಡಿದೆ. ಮ್ಯಾಚ್ ವೀಕ್ಷಣೆಗೆ ಶಾರುಖ್ ಖಾನ್ ಅವರ ಜೊತೆ ಅವರ ಕಿರಿಯ ಮಗ ಅಬ್ರಾಮ್ ಕೂಡ ಇದ್ದ. ಏಪ್ರಿಲ್ 29 ಆ್ಯಂಡ್ರೆ ರಸೆಲ್ ಜನ್ಮದಿನ. ಅವರಿಗೆ ಗೆಲುವಿನ ಉಡುಗೊರೆ ಸಿಕ್ಕಿದೆ. ಇದನ್ನು ಶಾರುಖ್ ಖಾನ್ ಅವರು ಸಂಭ್ರಮಿಸಿದ್ದಾರೆ. ಶಾರುಖ್ ಮಗ ಅಬ್ರಾಮ್ ಅವರು ರಸೆಲ್ ಮುಖಕ್ಕೆ ಕೇಕ್ ಬಳಿದಿದ್ದಾನೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಅಧಿಕೃತ ಖಾತೆಯಲ್ಲಿ ರಸೆಲ್ ಬರ್ತ್ಡೇ ಸೆಲೆಬ್ರೇಷನ್ ವಿಡಿಯೋ ಹಂಚಿಕೊಳ್ಳಲಾಗಿದೆ. ಇದರಲ್ಲಿ ಶಾರುಖ್ ಖಾನ್ ಅವರು ಕೂಡ ಭಾಗವಹಿಸಿದ್ದರು. ಅಬ್ರಾಮ್ ಇತರ ಮಕ್ಕಳೊಂದಿಗೆ ಸೆಲೆಬ್ರೇಷನ್ನಲ್ಲಿ ಭಾಗಿ ಆಗಿದ್ದಾನೆ. ಶಾರುಖ್ ಖಾನ್ ಅವರು ಪ್ರಿತಿಯಿಂದ ರಸೆಲ್ನ ಹಗ್ ಮಾಡಿ ವಿಶ್ ತಿಳಿಸಿದ್ದಾರೆ. ಇಬ್ಬರೂ ಒಟ್ಟಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ: ಶಾರುಖ್ ಖಾನ್ ಹೆಸರಿಗಷ್ಟೇ ಗ್ಲೋಬಲ್ ಸ್ಟಾರ್; ಅವರು ನಡೆದುಕೊಳ್ಳೋದು ಹೇಗೆ ನೋಡಿ
ಈ ವಿಡಿಯೋದಲ್ಲಿ ಅಬ್ರಾಮ್ ಕೂಡ ಗಮನ ಸೆಳೆದಿದ್ದಾರೆ. ಮೊದಲು ಕೇಕ್ ಹಿಡಿದು ನಿಂತಿದ್ದ ಸುನಿಲ್ ನರೈನ್ ಅವರು ರಸೆಲ್ ತಲೆಗೆ ಬಳಿದರು. ಇದಾದ ಬಳಿಕ ಅಲ್ಲೇ ಇದ್ದ ಅಬ್ರಾಮ್ ಬಂದು ಕೇಕ್ನಿಂದ ರಸೆಲ್ ಕೆನ್ನೆಗೆ ಕೇಕ್ನ ಮೆತ್ತಿದ. ಈ ವಿಡಿಯೋ ಸಖತ್ ಕ್ಯೂಟ್ ಆಗಿದೆ. ಮತ್ತೊಂದು ವಿಡಿಯೋದಲ್ಲಿ ಅಬ್ರಾಮ್ ರಿಂಕು ಸಿಂಗ್ಗೆ ಬೌಲ್ ಹಾಕುತ್ತಿರುವ ವಿಡಿಯೋ ಇದೆ.
The celebration couldn’t get better than this 💜 pic.twitter.com/ZYZammiuDG
— KolkataKnightRiders (@KKRiders) April 29, 2024
ಶಾರುಖ್ ಖಾನ್ ಅವರು ಮಕ್ಕಳ ಜೊತೆ ಕೆಕೆಆರ್ ಪಂದ್ಯ ವೀಕ್ಷಿಸಲು ಬರುತ್ತಿದ್ದಾರೆ. ಅವರ ಜೊತೆ ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಶಾರುಖ್ ಖಾನ್ ನಟನೆಯ ಮೂರು ಸಿನಿಮಾಗಳು (ಪಠಾಣ್, ಜವಾನ್, ಡಂಕಿ) ರಿಲೀಸ್ ಆಗಿ ಯಶಸ್ಸು ಕಂಡಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:20 pm, Tue, 30 April 24