AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವಳನ್ನು ಕೇಳುವಷ್ಟು ಧೈರ್ಯ ಇಲ್ಲ’; ಮಗಳ ಆರಾಧ್ಯಾ ಬಗ್ಗೆ ನೇರವಾಗಿ ಮಾತನಾಡಿದ ಅಭಿಷೇಕ್

ಅಮಿತಾಭ್ ಪುತ್ರನೆಂಬ ಹಣೆಪಟ್ಟಿ ಅಭಿಷೇಕ್ ಬಚ್ಚನ್ ವೃತ್ತಿಜೀವನಕ್ಕೆ ಅಡ್ಡಿಯಾಗಿದೆ. ತನ್ನ ಸಿನಿಮಾಗಳ ಬಗ್ಗೆ ಮಗಳು ಆರಾಧ್ಯಳ ಅಭಿಪ್ರಾಯ ಕೇಳಲು ತನಗೆ ಧೈರ್ಯವಿಲ್ಲ ಎಂದು ಅಭಿಷೇಕ್ ಹೇಳಿದ್ದಾರೆ. ಇಂದಿನ ಮಕ್ಕಳು ಆತ್ಮವಿಶ್ವಾಸದಿಂದ ಮತ್ತು ಸ್ಪಷ್ಟವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ಅವರು ಶ್ಲಾಘಿಸಿದ್ದಾರೆ. ಆರಾಧ್ಯಳ ಪ್ರತಿಕ್ರಿಯೆ ತನ್ನ ಕೆಲಸದ ಮೇಲೆ ಪ್ರಭಾವ ಬೀರಬಹುದೆಂಬ ಭಯ ಅವರಿಗೆ ಇದೆ.

‘ಅವಳನ್ನು ಕೇಳುವಷ್ಟು ಧೈರ್ಯ ಇಲ್ಲ’; ಮಗಳ ಆರಾಧ್ಯಾ ಬಗ್ಗೆ ನೇರವಾಗಿ ಮಾತನಾಡಿದ ಅಭಿಷೇಕ್
ಅಭಿಷೇಕ್-ಆರಾಧ್ಯಾ
ರಾಜೇಶ್ ದುಗ್ಗುಮನೆ
|

Updated on: Apr 21, 2026 | 2:26 PM

Share

ಅಮಿತಾಭ್ ಬಚ್ಚನ್ ಮಗ ಎಂಬ ಹಣೆಪಟ್ಟಿಯೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟ ಅಭಿಷೇಕ್ ಬಚ್ಚನ್ ಹಲವು ಏರಿಳಿತ ಕಂಡರು. ಎಲ್ಲರೂ ಅವರನ್ನು ಅಮಿತಾಭ್ ಬಚ್ಚನ್​ ಅವರೊಂದಿಗೆ ಹೋಲಿಕೆ ಮಾಡುತ್ತಾರೆ. ಇದು ಅವರ ವೃತ್ತಿ ಜೀವನಕ್ಕೆ ಸಾಕಷ್ಟು ಹಿನ್ನಡೆ ತಂದಿದೆ. ಇನ್ನು, ಯಾವುದೇ ಸ್ಟಾರ್ ನಿರ್ದೇಶಕರು ಅವರಿಗೆ ಸಿನಿಮಾ ಆಫರ್ ನೀಡುತ್ತಿಲ್ಲ. ಈ ಮೊದಲು ನಟಿಸಿದ ಸಿನಿಮಾಗಳ ಪೈಕಿ ಕೆಲವು ಒಳ್ಳೆಯ ಸಿನಿಮಾಗಳಿವೆ. ಹಾಗಾದರೆ, ಅಭಿಷೇಕ್ ಸಿನಿಮಾಗಳ ಮೇಲೆ ಮಗಳು ಆರಾಧ್ಯಗೆ ಯಾವ ರೀತಿಯ ಅಭಿಪ್ರಾಯ ಇದೆ? ಈ ಪ್ರಶ್ನೆಗೆ ಅಭಿಷೇಕ್ ಉತ್ತರ ನೀಡಿದ್ದಾರೆ.

ಸಿನಿಮಾ ನೋಡಿ ಮಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಅಭಿಷೇಕ್​ಗೆ ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಆ ಬಗ್ಗೆ ಮಗಳನ್ನು ಕೇಳಲ್ಲ. ಆ ಪ್ರಶ್ನೆ ನನ್ನ ತಲೆಯಲ್ಲೇ ಇರಲು ಬಿಡುತ್ತೇನೆ. ಅವಳು ಸಿನಿಮಾ ಇಷ್ಟಪಟ್ಟಿದ್ದೇನೆ ಅಥವಾ ಇಷ್ಟಪಟ್ಟಿಲ್ಲ ಎಂಬುದರಲ್ಲಿ ಒಂದನ್ನು ಹೇಳುತ್ತಾಳೆ. ಅದು ನನ್ನ ಕೆಲಸದ ವಿಧಾನವನ್ನು ಬದಲಿಸುತ್ತದೆ. ನಾನು ಅವಳನ್ನು ಈ ಬಗ್ಗೆ ಕೇಳುವುದಿಲ್ಲ, ಏಕೆಂದರೆ ಅವಳ ಉತ್ತರ ಕೇಳುವಷ್ಟು ಧೈರ್ಯ ನನಗೆ ಇಲ್ಲ’ ಎಂದಿದ್ದಾರೆ ಅವರು.

‘ಇಂದಿನ ಮಕ್ಕಳು ತುಂಬಾ ಆತ್ಮವಿಶ್ವಾಸ ಹೊಂದಿದ್ದಾರೆ. ಅವರಿಗೆ ಏನು ಬೇಕು ಎಂದು ನಿಖರವಾಗಿ ತಿಳಿದಿದೆ. ಅವರು ಅದನ್ನು ತಿಳಿಸುವಲ್ಲಿ ತುಂಬಾ ನಿಪುಣರು. ನನ್ನ ಪೀಳಿಗೆಯ ಜನರಿಗೆ ಹಾಗಲ್ಲ. ಕೆಲವೊಮ್ಮೆ ಕೇಳುವುದು ಕೂಡ ಕಷ್ಟವಾಗಬಹುದು. ಓರ್ವ ಪೋಷಕನಾಗಿ ಅವಳ ಅಭಿಪ್ರಾಯದಿಂದ ನಾನು ನಂಬುವ ಕೆಲಸ ಪ್ರಭಾವಿತ ಆಗದಂತೆ ನೋಡಿಕೊಳ್ಳಲು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ರಾಜ್​ಕುಮಾರ್ ಆಶೀರ್ವಾದ ನಾನೇ ಧನ್ಯ’; ಅಣ್ಣಾವ್ರ ಬಗ್ಗೆ ಅಮಿತಾಭ್ ಬಚ್ಚನ್ ಮೆಚ್ಚುಗೆಯ ಮಾತು

ಅಭಿಷೇಕ್ ಹಾಗೂ ಐಶ್ವರ್ಯಾ ರೈ ವಿಚ್ಛೇದನ ಪಡೆಯುತ್ತಾರೆ ಎಂಬ ಸುದ್ದಿ ಜೋರಾಗಿತ್ತು. ಆದರೆ, ಹಾಗಾಗಿಲ್ಲ. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಒಂದೊಮ್ಮೆ ಇವರು ಬೇರೆ ಆಗಿದ್ದರೆ ಆರಾಧ್ಯ ಮನಸ್ಸಿನ ಮೇಲೆ ಅದು ಸಾಕಷ್ಟು ಪ್ರಭಾವ ಬೀರುತ್ತಿತ್ತು. ಅವಳು ಯಾರ ಪರ ನಿಲ್ಲುತ್ತಾಳೆ ಎನ್ನುವ ಪ್ರಶ್ನೆ ಮೂಡುತ್ತಿತ್ತು. ತಂದೆ ಅಥವಾ ತಾಯಿ ಪೈಕಿ ಒಬ್ಬರ ಪ್ರೀತಿಯನ್ನು ಅವರು ಕಳೆದುಕೊಳ್ಳುತ್ತಿದ್ದಳು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us