ಶಾರುಖ್ ಖಾನ್ ರೀತಿಯೇ ಮನೆ ಬಿಡಲು ನಿರ್ಧರಿಸಿದ ಆಮಿರ್ ಖಾನ್; ಕಾರಣ ಏನು?

ಬಾಲಿವುಡ್ ನಟ ಆಮಿರ್ ಖಾನ್ ಅವರು ಮನೆ ಬಿಟ್ಟು ಬೇರೆ ಕಡೆಗೆ ತೆರಳಲು ನಿರ್ಧರಿಸಿದ್ದಾರೆ. ಇತ್ತೀಚೆಗೆ ಶಾರುಖ್ ಖಾನ್ ಕೂಡ ಮನ್ನತ್ ಬಂಗಲೆ ತೊರೆದಿದ್ದರು. ಹೊಸ ಸಿನಿಮಾಗಳ ಆಯ್ಕೆಯಲ್ಲಿ ಆಮಿರ್ ಖಾನ್ ಅವರು ಅವಸರ ತೋರುತ್ತಿಲ್ಲ. ಸದ್ಯಕ್ಕೆ ಅವರು ವೈಯಕ್ತಿಕ ಜೀವನದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

ಶಾರುಖ್ ಖಾನ್ ರೀತಿಯೇ ಮನೆ ಬಿಡಲು ನಿರ್ಧರಿಸಿದ ಆಮಿರ್ ಖಾನ್; ಕಾರಣ ಏನು?
Aamir Khan

Updated on: Apr 23, 2025 | 10:53 PM

ನಟ ಶಾರುಖ್ ಖಾನ್ (Shah Rukh Khan) ಅವರ ಮನ್ನತ್ ಬಂಗಲೆ ಎಂದರೆ ಮುಂಬೈನಲ್ಲಿ ಒಂದು ಪ್ರಸಿದ್ಧ ಸ್ಥಳ. ವಿಶೇಷ ದಿನಗಳಲ್ಲಿ ಶಾರುಖ್ ಖಾನ್ ಅವರನ್ನು ನೋಡಲು ಅಲ್ಲಿ ಜನ ಸೇರುತ್ತಾರೆ. ಆದರೆ ಇತ್ತೀಚೆಗೆ ಶಾರುಖ್ ಖಾನ್ ಅವರು ಮನ್ನತ್ ಬಂಗಲೆ ತೊರೆದರು. ಅಲ್ಲಿಂದ ಅವರು ಬೇರೆ ಕಡೆಗೆ ತೆರಳಿ ವಾಸ ಮಾಡಲು ಆರಂಭಿಸಿದರು. ಈಗ ಬಾಲಿವುಡ್​ನ ಮತ್ತೋರ್ವ ಸ್ಟಾರ್ ನಟ ಆಮಿರ್ ಖಾನ್ ಕೂಡ ಅದೇ ರೀತಿ ನಿರ್ಧಾರ ಮಾಡಿದ್ದಾರೆ. ಪಾಲಿ ಹಿಲ್ಸ್​ನಲ್ಲಿ ಇರುವ ಮನೆಯನ್ನು ಬಿಟ್ಟು ಬೇರೆ ಕಡೆಗೆ ತೆರಳಲು ಆಮಿರ್ ಖಾನ್ (Aamir Khan) ನಿರ್ಧರಿಸಿದ್ದಾರೆ ಎಂದು ಸುದ್ದಿ ಆಗಿದೆ. ಅದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ..

ಶಾರುಖ್ ಖಾನ್ ಅವರ ಮನ್ನತ್ ಬಂಗಲೆಯ ನವೀಕರಣ ಕಾರ್ಯ ನಡೆಯುತ್ತಿದೆ. ಹಾಗಾಗಿ ಅವರು ತಾತ್ಕಾಲಿಕವಾಗಿ ಬೇರೆ ಕಡೆಗೆ ಹೋಗಿದ್ದಾರೆ. ಆಮಿರ್ ಖಾನ್ ಕೂಡ ಅದೇ ರೀತಿ ತಮ್ಮ ಮನೆಯ ನವೀಕರಣ ಮಾಡಿಸಲಿದ್ದಾರೆ. ಕೆಲಸ ಪೂರ್ಣ ಆಗುವ ತನಕ ಬೇರೆ ಕಡೆ ವಾಸಿಸಲು ಅವರು ನಿರ್ಧರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಾಲಿವುಡ್​ನಲ್ಲಿ ಹಲವು ವರ್ಷಗಳಿಂದ ಆಮಿರ್ ಖಾನ್ ಅವರು ಸಕ್ರಿಯರಾಗಿದ್ದಾರೆ. ನಟನಾಗಿ, ನಿರ್ಮಾಪಕನಾಗಿ ಅವರು ಯಶಸ್ಸು ಕಂಡಿದ್ದಾರೆ. ಪ್ರತಿ ಸಿನಿಮಾಗೆ ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುವ ಅವರು ಹಲವು ಕಡೆಗಳಲ್ಲಿ ಆಸ್ತಿ ಹೊಂದಿದ್ದಾರೆ. ಮುಂಬೈನಲ್ಲಿ ಹಲವು ಅಪಾರ್ಟ್​ಮೆಂಟ್​ಗಳನ್ನು ಅವರು ಖರೀದಿಸಿದ್ದಾರೆ.

ಇದನ್ನೂ ಓದಿ
ಆಮಿರ್ ಖಾನ್-ರಣ್​ಬೀರ್ ಕಪೂರ್ ಜಗಳ, ಮಧ್ಯಸ್ಥಿಕೆ ವಹಿಸಿದ ರೋಹಿತ್ ಶರ್ಮಾ
ಹೊಸ ಪ್ರಾಜೆಕ್ಟ್​ಗಾಗಿ ಒಂದಾದ ಆಮಿರ್-ರಣಬೀರ್; ವಿಚಾರ ರಿವೀಲ್ ಮಾಡಿದ ಆಲಿಯಾ
59ನೇ ವಯಸ್ಸಲ್ಲಿ ಬೆಂಗಳೂರು ಹುಡುಗಿ ಮೇಲೆ ಆಮಿರ್​​​ಗೆ ಲವ್? ಯಾರು ಈ ಗೌರಿ?
ಆಮಿರ್ ಖಾನ್ ಈ ರೀತಿ ವೇಷ ಹಾಕಿದ್ದು ದುಡ್ಡಿಗಾಗಿ; ಅಸಲಿ ವಿಚಾರ ರಿವೀಲ್

ಇತ್ತೀಚಿನ ದಿನಗಳಲ್ಲಿ ಆಮಿರ್ ಖಾನ್ ಅವರು ಸಿನಿಮಾಗಿಂತಲೂ ವೈಯಕ್ತಿಕ ಕಾರಣದಿಂದ ಸುದ್ದಿ ಆಗಿದ್ದೇ ಹೆಚ್ಚು. ಈಗಾಗಲೇ ಇಬ್ಬರು ಪತ್ನಿಯರಿಗೆ ವಿಚ್ಛೇದನ ನೀಡಿರುವ ಆಮಿರ್ ಖಾನ್ ಅವರು ಈಗ ಮೂರನೇ ಮಹಿಳೆಯ ಜೊತೆ ವಾಸಿಸುತ್ತಿದ್ದಾರೆ. ಬೆಂಗಳೂರು ಮೂಲದ ಗೌರಿ ಸ್ಪ್ರಾಟ್ ಜೊತೆ ಅವರಿಗೆ ಪ್ರೀತಿ ಚಿಗುರಿದೆ. ಇತ್ತೀಚೆಗೆ ತಮ್ಮ ಬರ್ತ್​ಡೇ ಸಮಯದಲ್ಲಿ ಅವರು ಮಾಧ್ಯಮಗಳ ಎದುರು ಗೌರಿ ಪರಿಚಯ ಮಾಡಿಸಿದರು. ಆದರೂ ಕೂಡ ಅವರು ಮಾಜಿ ಪತ್ನಿಯರ ಜೊತೆ ಆತ್ಮೀಯ ಸಂಬಂಧ ಹೊಂದಿದ್ದಾರೆ.

ಇದನ್ನೂ ಓದಿ: ಮತ್ತೆ ದಕ್ಷಿಣ ಭಾರತದ ನಿರ್ದೇಶಕನೊಟ್ಟಿಗೆ ಕೈ ಜೋಡಿಸಲಿರುವ ಆಮಿರ್ ಖಾನ್

‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ಸೋಲಿನ ಬಳಿಕ ಆಮಿರ್ ಖಾನ್ ಅವರು ಸಿನಿಮಾಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸುತ್ತಿದ್ದಾರೆ. ಸದ್ಯ ಅವರು ‘ಸಿತಾರೆ ಜಮೀನ್ ಪರ್’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

​ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.