AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

31 ವರ್ಷದ ಉದ್ಯಮಿ ಜೊತೆ 49 ವರ್ಷದ ನಟಿಯ ಸುತ್ತಾಟ: ಫೋಟೋ ಲೀಕ್

‘ಕಹೋ ನಾ ಪ್ಯಾರ್ ಹೇ’, ‘ಗದರ್’ ಇನ್ನೂ ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳ ನಟಿ ಅಮಿಷಾ ಪಟೇಲ್, ಇದೀಗ ತಮಗಿಂತ ಬಹಳ ಚಿಕ್ಕ ವಯಸ್ಸಿನ ಖ್ಯಾತ ಉದ್ಯಮಿಯೊಟ್ಟಿಗೆ ಡೇಟಿಂಗ್ ಆರಂಭಿಸಿದ್ದಾರೆ. ಇಬ್ಬರೂ ಲಿವಿನ್ ರಿಲೇಷನ್​ನಲ್ಲಿ ಇದ್ದಾರೆ ಎನ್ನಲಾಗುತ್ತಿದೆ.

31 ವರ್ಷದ ಉದ್ಯಮಿ ಜೊತೆ 49 ವರ್ಷದ ನಟಿಯ ಸುತ್ತಾಟ: ಫೋಟೋ ಲೀಕ್
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.|

Updated on: Nov 15, 2024 | 6:46 PM

Share

ಸೆಲೆಬ್ರಿಟಿಗಳ ಖಾಸಗಿ ಜೀವನ ಯಾವಾಗಲೂ ಚರ್ಚೆಯಲ್ಲಿರುತ್ತದೆ. ಹಲವು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ ನಟಿ ಅಮಿಷಾ ಪಟೇಲ್ ಇಂದು ಬಾಲಿವುಡ್‌ನಿಂದ ದೂರವಾಗಿದ್ದ್ದಾರೆ. ಅವರು ಸದಾ ಸುದ್ದಿಯಲ್ಲಿದ್ದಾರೆ. 49 ನೇ ವಯಸ್ಸಿನಲ್ಲಿ ನಟಿ ತಮ್ಮ ಸಂಬಂಧದಿಂದಾಗಿ ಚರ್ಚೆಗೆ ಬಂದಿದ್ದಾರೆ. ನಟಿಯ ಹೆಸರನ್ನು ಒಬ್ಬರಲ್ಲ, ಎರಡಲ್ಲ, 4 ವಿವಾಹಿತ ಪುರುಷರೊಂದಿಗೆ ಲಿಂಕ್ ಮಾಡಲಾಗಿದೆ. ಇದೀಗ ನಟಿಯ ಖಾಸಗಿ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋದಲ್ಲಿ, ನಟಿ ಶ್ರೀಮಂತ ಉದ್ಯಮಿಯೊಂದಿಗೆ ಕಾಣಿಸಿಕೊಂಡಿದ್ದಾರೆ.

ಪ್ರಸ್ತುತ ಅವರ ಖಾಸಗಿ ಜೀವನವು ಬೆಳಕಿಗೆ ಬಂದಿರುವ ನಟಿ ನಟಿ ಅಮಿಷಾ ಪಟೇಲ್. ಅಮಿಷಾ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಸಂಬಂಧದ ವಿಚಾರದಿಂದ ಅವರು ಚರ್ಚೆ ಆದರು. ಇದೀಗ 49ರ ಹರೆಯದಲ್ಲೂ ಅಮಿಷಾ ಅಫೇರ್ನಿಂದಾಗಿ ಎಲ್ಲರ ಗಮನ ಸೆಳೆದಿದ್ದಾರೆ.

ಅಮಿಷಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯ. ಇತ್ತೀಚೆಗೆ, ನಟಿ ಉದ್ಯಮಿ ನಿರ್ವಾಣ್ ಬಿರ್ಲಾ ಅವರೊಂದಿಗಿನ ಖಾಸಗಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಫೋಟೋವನ್ನು ಪೋಸ್ಟ್ ಮಾಡಿದ ನಟಿ, ‘ನನ್ನ ಡಾರ್ಲಿಂಗ್ ಜೊತೆ ಒಂದೊಳ್ಳೆಯ ಸಂಜೆ…’ ಎಂದು ಶೀರ್ಷಿಕೆ ನೀಡಿದ್ದಾರೆ. ನಟಿಯ ಫೋಟೋ ದುಬೈನಿಂದ ಬಂದಿದೆ.

ಫೋಟೋದಲ್ಲಿ ಅಮಿಷಾ ಮತ್ತು ನಿರ್ವಾಣ್ ಇಬ್ಬರೂ ಸಂತೋಷದಿಂದ ಇದ್ದಾರೆ. ಫೋಟೋದಲ್ಲಿ ಇಬ್ಬರೂ ಕಪ್ಪು ಬಟ್ಟೆ ಧರಿಸಿದ್ದಾರೆ. ಸದ್ಯ ಅಮಿಷಾ ಅವರ ಖಾಸಗಿ ಬದುಕಿನ ಬಗ್ಗೆ ಮಾತ್ರ ಎಲ್ಲೆಡೆ ಚರ್ಚೆಯಾಗುತ್ತಿದೆ. ಇವರಿಬ್ಬರ ಫೋಟೋಗೆ ಅಭಿಮಾನಿಗಳು ಕೂಡ ಲೈಕ್ ಮತ್ತು ಕಮೆಂಟ್ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ:ಮ್ಯಾನೇಜರ್​ ವರ್ತನೆಯಿಂದ ದೊಡ್ಡ ಸಿನಿಮಾಗಳ ಆಫರ್​ ಕಳೆದುಕೊಂಡಿದ್ದ ‘ಗದರ್​ 2’ ನಟಿ ಅಮೀಷಾ ಪಟೇಲ್​

ನಿರ್ವಾಣ ಬಿರ್ಲಾ ಯಾರು?

ನಿರ್ವಾಣ ಒಬ್ಬ ವಾಣಿಜ್ಯೋದ್ಯಮಿ ಮತ್ತು ಗಾಯಕ. ಅವರು ಬಿರ್ಲಾ ಬ್ರೈನಿಯಾಕ್ಸ್ ಮತ್ತು ಬಿರ್ಲಾ ಓಪನ್ ಮೈಂಡ್ಸ್ ಸಂಸ್ಥಾಪಕರೂ ಆಗಿದ್ದಾರೆ. ಯಶೋವರ್ಧನ್ ಬಿರ್ಲಾ ಮತ್ತು ಅವಂತಿ ಬಿರ್ಲಾ ಅವರ ಮಗನೇ ನಿರ್ವಾಣ.

ಇಲ್ಲಿಯವರೆಗೆ ಅಮಿಶಾ ಪಟೇಲ್ ಹೆಸರನ್ನು 4 ವಿವಾಹಿತ ಪುರುಷರೊಂದಿಗೆ ಚರ್ಚಿಸಲಾಗಿದೆ. ನಿರ್ದೇಶಕ ವಿಕ್ರಮ್ ಭಟ್ ಅವರೊಂದಿಗಿನ ನಟಿಯ ಸಂಬಂಧವು ಹೆಚ್ಚು ವರ್ಣರಂಜಿತವಾಯಿತು. ಅವರು ಸುಮಾರು 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದಾರೆ. ಆದರೆ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ.

ವಿಕ್ರಮ್ ಭಟ್ ಜೊತೆ ಬ್ರೇಕ್ ಅಪ್ ಆದ ನಂತರ ನಟಿ ದೊಡ್ಡ ಹೇಳಿಕೆ ನೀಡಿದ್ದರು. ನಟಿ ಸಂದರ್ಶನವೊಂದರಲ್ಲಿ ‘ವಿಕ್ರಮ್ ಭಟ್ ಅವರನ್ನು ಪ್ರೀತಿಸಿದ್ದು ನನ್ನ ಜೀವನದ ದೊಡ್ಡ ತಪ್ಪು…’ ಎಂದು ಹೇಳಿದ್ದರು. ಅನೇಕ ಸೆಲೆಬ್ರಿಟಿಗಳ ಬಳಿ ಅಮಿಷಾ ಹೆಸರು ಚರ್ಚೆಯಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ