AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepika Padukone: ಆಸ್ಕರ್​ನಲ್ಲಿ ಮಿಂಚಿದ ದೀಪಿಕಾ ತೊಟ್ಟಿದ್ದ ಬಟ್ಟೆಯ ಬೆಲೆ ಎಷ್ಟು

ಆಸ್ಕರ್​ ವೇದಿಕೆ ಮೇಲೆ ಮಿಂಚಿದ ದೀಪಿಕಾ ಪಡುಕೋಣೆ ಧರಿಸಿದ್ದ ಉಡುಪಿನ ವಿಶೇಷತೆ ಏನು? ಉಡುಪಿನ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ...

Deepika Padukone: ಆಸ್ಕರ್​ನಲ್ಲಿ ಮಿಂಚಿದ ದೀಪಿಕಾ ತೊಟ್ಟಿದ್ದ ಬಟ್ಟೆಯ ಬೆಲೆ ಎಷ್ಟು
ದೀಪಿಕಾ ಪಡುಕೋಣೆ
ಮಂಜುನಾಥ ಸಿ.
|

Updated on: Mar 15, 2023 | 8:30 PM

Share

ಆಸ್ಕರ್ 2023 (Oscar 2023) ಭಾರತೀಯರ ಪಾಲಿಗೆ ಕೆಲವು ಅವಿಸ್ಮರಣೀಯ ನೆನಪುಗಳನ್ನು ನೀಡಿದೆ. ಮೊದಲ ಬಾರಿಗೆ ಭಾರತೀಯ ನಿರ್ಮಾಣದ ಸಿನಿಮಾ ಒಂದು ಆಸ್ಕರ್ ಪಡೆದಿದ್ದು ಹೆಮ್ಮೆಯ ಸಂಗತಿಯಾದರೆ ಭಾರತದ ಕಿರು ಡಾಕ್ಯುಮೆಂಟರಿ ಸಹ ಇದೇ ವರ್ಷ ಆಸ್ಕರ್ ಗೆದ್ದು ಇತಿಹಾಸ ನಿರ್ಮಿಸಿದೆ. ಇದರ ಜೊತೆಗೆ ಮೊದಲ ಬಾರಿಗೆ ಭಾರತೀಯ ಸಿನಿಮಾದ ಹಾಡೊಂದರ ಪ್ರದರ್ಶನ ಆಸ್ಕರ್ ವೇದಿಕೆಯ ಮೇಲೆ ಆಗಿದೆ. ಜೊತೆಗೆ ನಟಿ ದೀಪಿಕಾ ಪಡುಕೋಣೆ (Deepika Padukone) ಸಹ ಆಸ್ಕರ್ ವೇದಿಕೆ ಏರಿದ್ದು ಸಹ ವಿಶೇಷಗಳಲ್ಲಿ ಒಂದು.

ಆಸ್ಕರ್ ವೇದಿಕೆ ಏರಿದ ನಟಿ ದೀಪಿಕಾ ಪಡುಕೋಣೆ ನಾಟು-ನಾಟು ಹಾಡು ಪ್ರದರ್ಶನದ ಬಗ್ಗೆ ಮಾಹಿತಿ ನೀಡಿದರು. ಈ ಸಮಯದಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಉಡುಗೊರೆ ಗಮನ ಸೆಳೆಯಿತು. ಕಡುಕಪ್ಪು ಬಣ್ಣದ ವೆಲ್ವೆಟ್ ಮಾದರಿಯ ಶೋಲ್ಡರ್ ಫ್ರೀ ಉಡುಪನ್ನು ದೀಪಿಕಾ ಧರಿಸಿದ್ದರು. ಉಡುಪಿನ ಕೆಳಗಡೆಯ ಅಂಚು ಮರ್ಮೆಡ್ ಮಾದರಿಯನ್ನು ಹೋಲುವಂತಿತ್ತು. ಹೊಳೆಯುವ ವಜ್ರದ ಸರ ಹಾಗೂ ಉಂಗುರವನ್ನು ದೀಪಿಕಾ ಪಡುಕೋಣೆ ಧರಿಸಿದ್ದರು.

ದೀಪಿಕಾ ಪಡುಕೋಣೆ ಧರಿಸಿದ್ದ ಉಡುಪು ವಿಶ್ವವಿಖ್ಯಾತ ಬಟ್ಟೆ ಹಾಗೂ ಆಭರಣಗಳ ಬ್ರ್ಯಾಂಡ್ ಆಗಿರುವ ಲೂಯಿ ವಿಟಾನ್ ಅವರು ಸಿದ್ಧಪಡಿಸಿದ್ದಾಗಿತ್ತು. ದೀಪಿಕಾ ಧರಿಸಿದ್ದ ಆಭರಣಗಳು ಕಾರ್ಟಿಯರ್ ಸಂಸ್ಥೆಯದ್ದಾಗಿಗಿತ್ತು. ಆಸ್ಕರ್ ವೇದಿಕೆ ಮೇಲೆ ದೀಪಿಕಾ ಧರಿಸಿದ್ದ ಉಡುಪಿನ ಬೆಲೆ ಅಂದಾಜು 10 ಲಕ್ಷ ಎನ್ನಲಾಗಿದೆ. ಇನ್ನು ದೀಪಿಕಾ ಧರಿಸಿದ್ದ ಆಭರಣಗಳ ಬೆಲೆ 25 ಲಕ್ಷಕ್ಕೂ ಹೆಚ್ಚಂತೆ.

ಆಸ್ಕರ್ ಕಾರ್ಯಕ್ರಮ ಮುಗಿದ ಬಳಿಕ ವ್ಯಾನಿಟಿ ಫೇರ್ ಆಯೋಜಿಸಿದ್ದ ಆಫ್ಟರ್ ಪಾರ್ಟಿಯಲ್ಲಿಯೂ ದೀಪಿಕಾ ಪಡುಕೋಣೆ ಭಾಗವಹಿಸಿದ್ದರು. ಈ ವೇಳೆ ಭಿನ್ನವಾದ ಉಡುಪನ್ನು ದೀಪಿಕಾ ಧರಿಸಿದ್ದರು. ನ್ಯೂಯಾರ್ಕ್​ನ ಜನಪ್ರಿಯ ಡಿಸೈನರ್ ನಯೀಮ್ ಖಾನ್ ವಿನ್ಯಾಸ ಮಾಡಿದ್ದ ಭಿನ್ನ ಮಾದರಿಯ ಉಡುಪನ್ನು ದೀಪಿಕಾ ಧರಿಸಿದ್ದರು. ಈ ಉಡುಪಿನ ಬೆಲೆ ಸುಮಾರು 10000 ಡಾಲರ್ ಅಂದರೆ ಸುಮಾರು 8.19 ಲಕ್ಷ ರುಪಾಯಿಗಳಿಗೂ ಹೆಚ್ಚು. ಆಸ್ಕರ್ ವೇದಿಕೆ ಮೇಲೆ ದೀಪಿಕಾ ಧರಿಸಿದ್ದ ಉಡುಪಿಗಿಂತಲೂ ದೀಪಿಕಾರ ಆಫ್ಟರ್ ಪಾರ್ಟಿ ಲುಕ್ ಹೆಚ್ಚು ವೈರಲ್ ಆಗಿದೆ.

ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಹಲವು ಬಾರಿ ಕಾಣಿಸಿಕೊಂಡಿರುವ ದೀಪಿಕಾ ಪಡುಕೋಣೆ ಪ್ರತಿಬಾರಿಯೂ ತಮ್ಮ ಭಿನ್ನ ಹಾಗೂ ಸ್ಟೈಲಿಸ್ಟ್ ಉಡುಪುಗಳನ್ನು ಧರಿಸಿ ಗಮನ ಸೆಳೆಯುತ್ತಾರೆ. ಕೆಲ ತಿಂಗಳ ಹಿಂದೆ ಕಾನ್ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದಾಗಲೂ ಸಹ ದೀಪಿಕಾ ಪಡುಕೋಣೆ ತಮ್ಮ ಫ್ಯಾಷನ್​ನಿಂದ ಗಮನ ಸೆಳೆದಿದ್ದರು.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್