ಚಿತ್ರರಂಗದಲ್ಲಿ ಫೇಮಸ್ ಆಗಿ ನಂತರ ಮೂಲೆಗುಂಪಾದ ಅನೇಕರು ಇದ್ದಾರೆ. ಈ ಸಾಲಿನಲ್ಲಿ ಸಂದೀಪ್ ರೆಡ್ಡಿ ವಂಗ ನಿರ್ದೇಶನದ ‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ ನಟಿಸಿದ ಶಾಲಿನಿ ಪಾಂಡೆ ಕೂಡ ಇದ್ದಾರೆ. ಮೊದಲ ಚಿತ್ರದಲ್ಲೇ ಗಮನ ಸೆಳೆದ ಅವರು ನಂತರದಲ್ಲಿ ಮಿಂಚಲು ಸಾಧ್ಯವಾಗಿಲ್ಲ ಎನ್ನುವುದು ಬೇಸರದ ವಿಚಾರ. ಅನೇಕರು ಅವರಿಗೆ ಆಫರ್ ಕೊಟ್ಟಿದ್ದಾರೆ. ಆದರೆ, ಅವರ ಬಳಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತಿಲ್ಲವಂತೆ.
ಇಂದು (ಸೆಪ್ಟೆಂಬರ್ 23) ಶಾಲಿನಿ ಪಾಂಡೆಗೆ ಬರ್ತ್ಡೇ. ಅವರಿಗೆ ಇರೋ ಕೆಲವೇ ಕೆಲವು ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಮಾಡಿದ ಹಲವು ಸಿನಿಮಾಗಳು ಏಕೆ ಯಶಸ್ಸು ಕಂಡಿಲ್ಲ ಎಂಬ ವಿಚಾರವನ್ನು ಶಾಲಿನಿ ಪಾಂಡೆ ಅವರು ಈ ಮೊದಲು ಹೇಳಿಕೊಂಡಿದ್ದರು.
ಆಮಿರ್ ಖಾನ್ ಅವರ ಮಗ ಜುನೈದ್ ಖಾನ್ ನಟಿಸುತ್ತಿರುವ ‘ಮಹರಾಜ್’ ಸಿನಿಮಾದಲ್ಲಿ ಶಾಲಿನಿ ಪಾಂಡೆ ನಟಿಸಿತ್ತಿದ್ದಾರೆ. ಇದರ ಜೊತೆಗೆ ಇನ್ನೂ ಕೆಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚುತ್ತಿದ್ದಾರೆ. ಆದರೆ, ಸ್ಟಾರ್ ಹೀರೋಗಳ ಜೊತೆ ಬಣ್ಣ ಹಚ್ಚಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರಿಗೆ ಒಂದು ವಿಚಾರ ಬೇಸರ ಮೂಡಿಸಿತ್ತು.
‘ನನಗೆ ಬಾಡಿ ಶೇಮ್ ಮಾಡಲಾಯಿತು. ನಾನು ಸ್ಪೋರ್ಟ್ಸ್ನಲ್ಲಿ ಹೆಚ್ಚು ಸಮಯ ಕಳೆಯುತ್ತೇನೆ. ಆದರೂ ಜನರು ಬಾಡಿಶೇಮ್ ನಿಲ್ಲಿಸಿಲ್ಲ’ ಎಂದು ಅವರು ಹೇಳಿದ್ದರು. ಇದರಿಂದ ಅವರು ಬೋಲ್ಡ್ ಆಫರ್ಗಳನ್ನು ಒಪ್ಪಿಕೊಳ್ಳಲಿಲ್ಲವೇ ಎನ್ನುವ ಪ್ರಶ್ನೆ ಮೂಡಿದೆ. ಅರ್ಜುನ್ ರಡ್ಡಿ ಸಿನಿಮಾದಲ್ಲಿ ಶಾಲಿನಿ ಪಾಂಡೆ ಸಾಕಷ್ಟು ಬೋಲ್ಡ್ ಪಾತ್ರವನ್ನು ಮಾಡಿದ್ದರು. ಸಾಕಷ್ಟು ಹಾಟ್ ಆಗಿ ಅವರು ಕಾಣಿಸಿಕೊಂಡಿದ್ದರು. ಅವರ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು.
ಶಾಲಿನಿ ಪಾಂಡೆ ನಟನೆಗಾಗಿ ಅವರು ಮನೆಯಿಂದ ಓಡಿ ಹೋಗಿದ್ದರು. ‘ನನ್ನ ತಂದೆಗೆ ಇಂಜಿನಿಯರಿಂಗ್ ಮಾಡಬೇಕು ಎನ್ನುವ ಆಸೆ ಇತ್ತು. ನಾನು ಅದನ್ನು ಪ್ರಯತ್ನಿಸಿದೆ. ಆದರೆ, ಅದನ್ನು ಮಾಡಲು ಸಾಧ್ಯವಾಗಿಲ್ಲ. ನಟನೆ ಪ್ರಯತ್ನಿಸಲು ನನ್ನ ತಂದೆ ಅವಕಾಶ ನೀಡಿಲ್ಲ. ನಾಲ್ಕು ವರ್ಷ ಇದಕ್ಕಾಗಿ ಅವರ ಬಳಿ ಕೇಳಿಕೊಂಡೆ. ಆ ಬಳಿಕ ನಾನು ಮನೆಯಿಂದ ಓಡಿ ಹೋದೆ’ ಎಂದು ಶಾಲಿನಿ ಹೇಳಿಕೊಂಡಿದ್ದರು.
ಇದನ್ನೂ ಓದಿ: ಇನ್ನಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಂಡ ‘ಅರ್ಜುನ್ ರೆಡ್ಡಿ’ ನಟಿ ಶಾಲಿನಿ ಪಾಂಡೆ
ಅವರ ಇಬ್ಬರು ಗೆಳತಿಯರು ಮುಂಬೈನಲ್ಲಿ ಇದ್ದರು. ಅವರ ಜೊತೆ ಉಳಿದುಕೊಳ್ಳಲು ಶಾಲಿನಿ ಅಲ್ಲಿಗೆ ಹೋದರು. ಆದರೆ, ಅಲ್ಲಿ ಹೆಚ್ಚು ದಿನ ಇರೋಕೆ ಸಾಧ್ಯವಾಗಿಲ್ಲ. ಹೀಗಾಗಿ ಅವರು ಬಾಯ್ಸ್ ಜೊತೆ ಇರಬೇಕಾಯಿತು. ಆ ಬಳಿಕ ಇವರು ಫ್ರೆಂಡ್ಸ್ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.