The Kerala Story: 2ನೇ ವಾರವೂ ‘ದಿ ಕೇರಳ ಸ್ಟೋರಿ’ ಯಶಸ್ವಿ ಪ್ರದರ್ಶನ; 164 ಕೋಟಿ ರೂ. ಗಳಿಸಿದ ಕಾಂಟ್ರವರ್ಸಿ ಸಿನಿಮಾ

|

Updated on: May 18, 2023 | 4:31 PM

The Kerala Story Box Office Collection: ಪ್ರತಿದಿನವೂ ‘ದಿ ಕೇರಳ ಸ್ಟೋರಿ’ ಸಿನಿಮಾ ಬಹುಕೋಟಿ ರೂಪಾಯಿ ಕಲೆಕ್ಷನ್​ ಮಾಡುತ್ತಿರುವುದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. ಮೂರನೇ ವೀಕೆಂಡ್​ ಕೂಡ ಈ ಸಿನಿಮಾ ಮೋಡಿ ಮಾಡುವ ಸಾಧ್ಯತೆ ದಟ್ಟವಾಗಿದೆ.

The Kerala Story: 2ನೇ ವಾರವೂ ‘ದಿ ಕೇರಳ ಸ್ಟೋರಿ’ ಯಶಸ್ವಿ ಪ್ರದರ್ಶನ; 164 ಕೋಟಿ ರೂ. ಗಳಿಸಿದ ಕಾಂಟ್ರವರ್ಸಿ ಸಿನಿಮಾ
ದಿ ಕೇರಳ ಸ್ಟೋರಿ ಪೋಸ್ಟರ್​
Follow us on

ವಿವಾದ ಎಬ್ಬಿಸಿದ ಸಿನಿಮಾಗಳ ಬಗ್ಗೆ ಜನರು ಸಹಜವಾಗಿಯೇ ಕುತೂಹಲ ಹೆಚ್ಚಿಸಿಕೊಳ್ಳುತ್ತಾರೆ. ಆ ಮಾತಿಗೆ ಲೇಟೆಸ್ಟ್​ ಉದಾಹರಣೆ ಎಂದರೆ ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರ. ಕೇರಳದಲ್ಲಿ ನಡೆದಿದೆ ಎನ್ನಲಾದ ಮತಾಂತರ ಮತ್ತು ಲವ್​ ಜಿಹಾದ್​ ಘಟನೆಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ದೇಶಾದ್ಯಂತ ಚರ್ಚೆ ಹುಟ್ಟುಹಾಕಿದ ಈ ಚಿತ್ರವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಪರಿಣಾಮವಾಗಿ ಇದರ ಕಲೆಕ್ಷನ್​ (The Kerala Story Collection) ಏರುತ್ತಲೇ ಇದೆ. 2ನೇ ವಾರವೂ ಸಿನಿಮಾ ಅಸಾಧಾರಣ ಕಲೆಕ್ಷನ್​ ಮಾಡುತ್ತಿದೆ ಎಂಬುದು ವಿಶೇಷ. ಈವರೆಗೆ 14 ದಿನಗಳ ಕಾಲ ‘ದಿ ಕೇರಳ ಸ್ಟೋರಿ’ ಚಿತ್ರ ಭರ್ಜರಿ ಪ್ರದರ್ಶನ ಕಂಡಿದೆ. 13 ದಿನಗಳವರೆಗಿನ ಕಲೆಕ್ಷನ್​ 164 ಕೋಟಿ ರೂಪಾಯಿ ತಲುಪಿದೆ.

‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಸುದೀಪ್ತೋ ಸೇನ್​ ಅವರು ನಿರ್ದೇಶನ ಮಾಡಿದ್ದಾರೆ. ನಟಿ ಅದಾ ಶರ್ಮಾ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಇತ್ತೀಚೆಗೆ ಅವರು ಚಲಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿತ್ತು. ಆದರೆ ಹೆಚ್ಚೇನೂ ಪೆಟ್ಟಾಗಿಲ್ಲ ಎಂಬುದು ಸಮಾಧಾನಕರ ಸಂಗತಿ. ಈಗ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾದ ಗೆಲುವನ್ನು ಎಂಜಾಯ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: Adah Sharma: ‘ದಿ ಕೇರಳ ಸ್ಟೋರಿ ಕೇವಲ ಸಿನಿಮಾ ಅಲ್ಲ, ಇದೊಂದು ಆಂದೋಲನ’: ನಟಿ ಅದಾ ಶರ್ಮಾ

‘ದಿ ಕೇರಳ ಸ್ಟೋರಿ’ ಚಿತ್ರದ ಕಲೆಕ್ಷನ್​ ರಿಪೋರ್ಟ್​:

1ನೇ ದಿನ: 8.03 ಕೋಟಿ ರೂ.

2ನೇ ದಿನ: 11.22 ಕೋಟಿ ರೂ.

3ನೇ ದಿನ: 16.40 ಕೋಟಿ ರೂ.

4ನೇ ದಿನ: 10.07 ಕೋಟಿ ರೂ.

5ನೇ ದಿನ: 11.14 ಕೋಟಿ ರೂ.

6ನೇ ದಿನ: 12 ಕೋಟಿ ರೂ.

7ನೇ ದಿನ: 12.50 ಕೋಟಿ ರೂ.

8ನೇ ದಿನ: 12.23 ಕೋಟಿ ರೂ.

9ನೇ ದಿನ: 19.50 ಕೋಟಿ ರೂ.

10ನೇ ದಿನ: 23.75 ಕೋಟಿ ರೂ.

11ನೇ ದಿನ: 10.30 ಕೋಟಿ ರೂ.

12ನೇ ದಿನ: 9.65 ಕೋಟಿ ರೂ.

13ನೇ ದಿನ: 7.90 ಕೋಟಿ ರೂ.

ಪ್ರತಿದಿನವೂ ‘ದಿ ಕೇರಳ ಸ್ಟೋರಿ’ ಸಿನಿಮಾ ಬಹುಕೋಟಿ ರೂಪಾಯಿ ಕಲೆಕ್ಷನ್​ ಮಾಡುತ್ತಿರುವುದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. ಮೂರನೇ ವೀಕೆಂಡ್​ ಕೂಡ ಈ ಸಿನಿಮಾ ಮೋಡಿ ಮಾಡುವ ಸಾಧ್ಯತೆ ದಟ್ಟವಾಗಿದೆ. ಹೊಸದಾಗಿ ರಿಲೀಸ್​ ಆದ ಚಿತ್ರಗಳಿಗೂ ಕೂಡ ‘ದಿ ಕೇರಳ ಸ್ಟೋರಿ’ ಪೈಪೋಟಿ ನೀಡುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.