ಬೆಂಗಳೂರಲ್ಲಿ ‘ಮೆಟ್ರೋ ಇನ್ ದಿನೋ’ ಸಿನಿಮಾ ಪ್ರಚಾರ ಮಾಡಿದ ಸಾರಾ, ಆದಿತ್ಯ ರಾಯ್ ಕಪೂರ್

‘ಮೆಟ್ರೋ ಇನ್ ದಿನೋ’ ಸಿನಿಮಾದಲ್ಲಿ ಬಾಲಿವುಡ್ನ ಖ್ಯಾತ ನಟ ಆದಿತ್ಯ ರಾಯ್ ಕಪೂರ್, ನಟಿ ಸಾರಾ ಅಲಿ ಖಾನ್ ಅಭಿನಯಿಸಿದ್ದಾರೆ. ಇತ್ತೀಚೆಗೆ ಅವರು ಬೆಂಗಳೂರಿಗೆ ಬಂದು ಪ್ರಚಾರ ಕಾರ್ಯದಲ್ಲಿ ಭಾಗಿಯಾದರು. ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡರು. ಅನುರಾಗ್ ಬಸು ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ.

ಬೆಂಗಳೂರಲ್ಲಿ ‘ಮೆಟ್ರೋ ಇನ್ ದಿನೋ’ ಸಿನಿಮಾ ಪ್ರಚಾರ ಮಾಡಿದ ಸಾರಾ, ಆದಿತ್ಯ ರಾಯ್ ಕಪೂರ್
Aditya Roy Kapur, Sara Ali Khan

Updated on: Jun 25, 2025 | 7:05 PM

ಹಿಂದಿ ಸಿನಿಮಾಗಳಿಗೆ ಬೆಂಗಳೂರಲ್ಲಿ ದೊಡ್ಡ ಮಾರುಕಟ್ಟೆ ಇದೆ. ಹಲವು ಮಲ್ಟಿಪ್ಲೆಕ್ಸ್​ಗಳಲ್ಲಿ ಬಾಲಿವುಡ್ (Bollywood) ಸಿನಿಮಾಗಳು ಉತ್ತಮವಾಗಿ ಪ್ರದರ್ಶನ ಕಾಣುತ್ತವೆ. ಹಾಗಾಗಿ ಚಿತ್ರತಂಡಗಳು ಬೆಂಗಳೂರಿಗೂ ಬಂದು ಪ್ರಚಾರ ಮಾಡುತ್ತವೆ. ಇತ್ತೀಚೆಗೆ ‘ಮೆಟ್ರೋ ಇನ್ ದಿನೋ’ (Metro in Dino) ಸಿನಿಮಾ ತಂಡ ಕೂಡ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿತು. ಈ ಸಿನಿಮಾಗೆ ಅನುರಾಗ್ ಬಸು ನಿರ್ದೇಶನ ಮಾಡಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಆದಿತ್ಯ ರಾಯ್ ಕಪೂರ್, ಸಾರಾ ಅಲಿ ಖಾನ್ ಮುಂತಾದವರು ನಟಿಸಿದ್ದಾರೆ. ಬೆಂಗಳೂರಿಗೆ ಬಂದು ಸಾರಾ ಅಲಿ ಖಾನ್ ಮತ್ತು ಆದಿತ್ಯ ರಾಯ್ ಕಪೂರ್ (Aditya Roy Kapur) ಅವರು ಪ್ರಚಾರ ಮಾಡಿದರು.

ಒಂದಷ್ಟು ಕಾರಣಗಳಿಂದಾಗಿ ‘ಮೆಟ್ರೋ ಇನ್ ದಿನೋ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಅನುರಾಗ್ ಬಸು ನಿರ್ದೇಶನಕ್ಕೆ ಪ್ರತ್ಯೇಕ ಅಭಿಮಾನಿ ವರ್ಗ ಇದೆ. ಇನ್ನು, ಸಾರಾ ಅಲಿ ಖಾನ್ ಹಾಗೂ ಆದಿತ್ಯ ರಾಯ್ ಕಪೂರ್ ಅವರನ್ನು ಇಷ್ಟಪಡುವ ಅಭಿಮಾನಿಗಳು ಬೆಂಗಳೂರಿನಲ್ಲಿ ಸಾಕಷ್ಟು ಮಂದಿ ಇದ್ದಾರೆ. ಹಾಗಾಗಿ ಬೆಂಗಳೂರಿಗೆ ಚಿತ್ರತಂಡ ಭೇಟಿ ನೀಡಿತ್ತು.

ಬೆಂಗಳೂರಿಗೆ ಬಂದ ಆದಿತ್ಯ ರಾಯ್ ಕಪೂರ್​ ಮತ್ತು ಸಾರಾ ಅಲಿ ಖಾನ್ ಅವರಿಗೆ ಗಾಯಕ ಶಾಶ್ವತ್ ಸಿಂಗ್ ಕೂಡ ಸಾಥ್ ನೀಡಿದರು. ‘ಮೆಟ್ರೋ ಇನ್ ದಿನೋ’ ಸಿನಿಮಾದಲ್ಲಿ ಪಂಕಜ್ ತ್ರಿಪಾಠಿ, ಅಲಿ ಫಜಲ್, ಕೊಂಕಣಾ ಸೇನ್‌ ಶರ್ಮಾ, ಫಾತಿಮಾ ಸನಾ ಶೇಖ್, ನೀನಾ ಗುಪ್ತಾ, ಅನುಪಮ್ ಖೇರ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ.

ಇದನ್ನೂ ಓದಿ
ಸಿನಿಮಾಗಳನ್ನು ಬಿಟ್ಟು ವಾಚ್‌ಮ್ಯಾನ್ ಆದ ನಟ; ಈ ಪರಿಸ್ಥಿತಿ ಯಾರಿಗೂ ಬರಬಾರದು
ದಕ್ಷಿಣದ ನಿರ್ಮಾಪಕರ ನೋಡಿ ಕಲಿಯಿರಿ: ಸ್ಟಾರ್ ನಟ ಟಾಂಗ್
ಬಾಲಿವುಡ್ ಹೀರೋಗಳ ಬಣ್ಣ ಬಯಲು ಮಾಡಿದ ಸೋನು ಸೂದ್
‘ಬಾಲಿವುಡ್ ಸಿನಿಮಾಗಳು ಭಾರತವನ್ನು ಕೆಟ್ಟದಾಗಿ ತೋರಿಸಿವೆ’; ರಿಷಬ್ ಶೆಟ್ಟಿ

‘ಮೆಟ್ರೋ ಇನ್ ದಿನೋ’ ಸಿನಿಮಾ ಜುಲೈ 4ರಂದು ದೇಶಾದ್ಯಂತ ಬಿಡುಗಡೆ ಆಗಲಿದೆ. ವಿವಿಧ ನಗರಗಳಿಗೆ ತೆರಳಿ ಪ್ರಚಾರ ಮಾಡಲಾಗುತ್ತಿದೆ. 2007ರಲ್ಲಿ ‘ಲೈಫ್ ಇನ್ ಎ ಮೆಟ್ರೋ’ ಸಿನಿಮಾ ಬಿಡುಗಡೆ ಆಗಿತ್ತು. ಅದಕ್ಕೂ ಅನುರಾಗ್ ಬಸು ಅವರು ಆ್ಯಕ್ಷನ್-ಕಟ್ ಹೇಳಿದ್ದರು. ಆ ಚಿತ್ರದ ಥೀಮ್​ನಲ್ಲಿಯೇ ‘ಮೆಟ್ರೋ ಇನ್ ದಿನೋ’ ಸಿನಿಮಾ ಮೂಡಿಬಂದಿದೆ. ಟ್ರೇಲರ್ ಗಮನ ಸೆಳೆದಿದೆ.

ಇದನ್ನೂ ಓದಿ: ಹುಬ್ಬಳ್ಳಿ ದೇವಾಲಯಕ್ಕೆ ಭೇಟಿ ನೀಡಿದ ಬಾಲಿವುಡ್ ಬೆಡಗಿ ಸಾರಾ ಅಲಿ ಖಾನ್

ಪ್ರೀತಮ್ ಅವರು ‘ಮೆಟ್ರೋ…ಇನ್ ದಿನೋ’ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ನಾಲ್ಕು ಬೇರೆ ಬೇರೆ ಕಥೆಗಳನ್ನು ಈ ಸಿನಿಮಾ ಹೊಂದಿದೆ. ‘ಪ್ರತಿಯೊಂದು ಕಥೆಯು ಪ್ರೀತಿ, ನಿಷ್ಠೆ ಹಾಗೂ ಆಧುನಿಕ ಸಂಬಂಧಗಳ ಭಾವನಾತ್ಮಕ ಏರಿಳಿತಗಳನ್ನು ಅನಾವರಣ ಮಾಡುತ್ತದೆ. ಹಾಸ್ಯಮಯವಾದರೂ ಹೃದಯಸ್ಪರ್ಶಿ ನಿರೂಪಣಾ ಶೈಲಿ ಈ ಸಿನಿಮಾದಲ್ಲಿದೆ’ ಎಂದು ಚಿತ್ರತಂಡ ಹೇಳಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.