ತಮನ್ನಾ ಬಳಿಕ ಬಾಲಿವುಡ್ ಯುವ ನಟಿ ಜೊತೆ ವಿಜಯ್ ವರ್ಮಾ ಸುತ್ತಾಟ?
Tamannah Bhatia and Vijay Varma: ಮಿಲ್ಕಿ ಬ್ಯೂಟಿ ಎಂದೇ ಜನಪ್ರಿಯವಾಗಿರುವ ನಟಿ ತಮನ್ನಾ ಭಾಟಿಯಾ ಬಾಲಿವುಡ್ ನಟ ವಿಜಯ್ ವರ್ಮಾ ಅವರೊಟ್ಟಿಗೆ ಪ್ರೀತಿಯಲ್ಲಿದ್ದರು. ಆದರೆ ಕೆಲ ತಿಂಗಳ ಹಿಂದಷ್ಟೆ ಈ ಜೋಡಿ ಪರಸ್ಪರ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ. ಇದೀಗ ನಟ ವಿಜಯ್ ವರ್ಮಾ ಮತ್ತೊಬ್ಬ ಮಿಲ್ಕಿ ಬ್ಯೂಟಿ ಹಿಂದೆ ಬಿದ್ದಿದ್ದಾರೆ. ಈಗ ಮತ್ತೊಬ್ಬ ಬಾಲಿವುಡ್ ನಟಿಯೊಟ್ಟಿಗೆ ಪ್ರೀತಿಯಲ್ಲಿದ್ದಾರೆ ನಟ.

ಬಾಲಿವುಡ್ (Bollywood) ಹಿರಿಯ ನಟ ವಿಜಯ್ ವರ್ಮಾ ಮತ್ತು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ತಮನ್ನಾ ಭಾಟಿಯಾ ಹಲವು ದಿನಗಳಿಂದ ಸಂಬಂಧದಲ್ಲಿದ್ದರು. ಆದರೆ ಈಗ ಅವರು ಬೇರ್ಪಟ್ಟಿದ್ದಾರೆ. ಇದಕ್ಕೆ ಕಾರಣ ರಿವೀಲ್ ಆಗಿಲ್ಲ. ಈ ಮಧ್ಯೆ ವಿಜಯ್ ಅವರ ಹೆಸರು ನಟಿಯೊಂದಿಗೆ ತಳುಕು ಹಾಕಿಕೊಂಡಿದೆ. ಅವರು ಹಿಂದಿ ಹೀರೋಯಿನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ತಮನ್ನಾ ಅವರಿಂದ ಬೇರ್ಪಟ್ಟ ನಂತರ ವಿಜಯ್ ವರ್ಮಾ ಮತ್ತು ಈ ನಟಿ ಪರಸ್ಪರ ಹತ್ತಿರವಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ವರದಿಗಳ ಪ್ರಕಾರ, ತಮನ್ನಾ ಭಾಟಿಯಾ ಅವರಿಂದ ಬೇರ್ಪಟ್ಟ ನಂತರ, ವಿಜಯ್ ವರ್ಮಾ ಈಗ ಹೊಸ ಸುಂದರ ಹುಡುಗಿಯನ್ನು ಪ್ರೀತಿಸುತ್ತಿದ್ದಾರೆ ಎನ್ನಲಾಗಿದೆ. ವಿಶೇಷವೆಂದರೆ ಈ ಹುಡುಗಿ ಬಾಲಿವುಡ್‌ನಲ್ಲೂ ದೊಡ್ಡ ನಟಿ. ಈ ನಟಿ ಮತ್ತು ವಿಜಯ್ ವರ್ಮಾ ಇಬ್ಬರೂ ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಈ ನಟಿ ಬೇರೆ ಯಾರೂ ಅಲ್ಲ, ‘ದಂಗಲ್’ ಚಿತ್ರದ ಫಾತಿಮಾ ಸನಾ ಶೇಖ್. ಫಾತಿಮಾ ಮತ್ತು ವಿಜಯ್ ವರ್ಮಾ ಅವರ ಪ್ರೇಮ ಸಂಬಂಧದ ಬಗ್ಗೆ ವದಂತಿಗಳು ಹಬ್ಬಿವೆ. ಆದರೆ ವಿಜಯ್ ಮತ್ತು ಫಾತಿಮಾ ಈ ವದಂತಿಗಳಿಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವಿಜಯ್ ವರ್ಮಾ ಮತ್ತು ಫಾತಿಮಾ ಇಬ್ಬರೂ ‘ಗುಸ್ತಖ್ ಇಷ್ಕ್’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ಕೂಡ ಬಹಿರಂಗವಾಗಿದೆ. ಫಾತಿಮಾ ಅವರನ್ನು ವಿಜಯ್ ವರ್ಮಾ ಬಗ್ಗೆ ಕೇಳಲಾಯಿತು. ಇದರ ಬಗ್ಗೆ ಮಾತನಾಡುತ್ತಾ, ‘ವಿಜಯ್ ಓರ್ವ ಒಳ್ಳೆಯ ನಟ. ನೀವು ಒಳ್ಳೆಯ ನಟರಾಗಿದ್ದರೆ, ನಿಮ್ಮ ಸ್ವಂತ ಹಾದಿಯನ್ನು ನೀವು ಸುಗಮಗೊಳಿಸಿಕೊಳ್ಳಿ. ನೀವು ಯಶಸ್ಸನ್ನು ಸಾಧಿಸಲು ಹೆಚ್ಚು ಅಥವಾ ಕಡಿಮೆ ಸಮಯ ತೆಗೆದುಕೊಳ್ಳಬಹುದು. ಆದರೆ ಒಳ್ಳೆಯ ನಟನಾಗಿರುವ ವ್ಯಕ್ತಿ ಯಶಸ್ಸನ್ನು ಸಾಧಿಸುತ್ತಾನೆ. ವಿಜಯ್ ಒಬ್ಬ ಒಳ್ಳೆಯ ನಟ. ಬಾಲಿವುಡ್ ಉದ್ಯಮದಲ್ಲಿ ಅವರಿಗೆ ವಿಭಿನ್ನವಾದ ಮನ್ನಣೆ ಸಿಗುತ್ತಿದೆ. ಇದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ’ ಎಂದು ಫಾತಿಮಾ ಪ್ರತಿಕ್ರಿಯಿಸಿದ್ದರು.
ಬ್ರೇಕಪ್ ಕತೆ..
ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಬೇರ್ಪಟ್ಟಿದ್ದಾರೆ. ‘ಲಸ್ಟ್ ಸ್ಟೋರಿ’ಯ ಎರಡನೇ ಸೀಸನ್ ಚಿತ್ರೀಕರಣದ ಸಮಯದಲ್ಲಿ ಇಬ್ಬರೂ ಭೇಟಿಯಾದರು. ಈ ವೆಬ್ ಸರಣಿಯಲ್ಲಿ ಇಬ್ಬರೂ ಬೋಲ್ಡ್ ದೃಶ್ಯಗಳನ್ನು ನೀಡಿದ್ದಾರೆ. ಮಾರ್ಚ್ 2025 ರಲ್ಲಿ, ಅವರ ಬೇರ್ಪಡುವಿಕೆಯ ವರದಿಗಳು ಬಂದವು. ಅವರ ಬೇರ್ಪಡುವಿಕೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:28 pm, Wed, 25 June 25



