‘ನಾನಂತೂ ನಿವೃತ್ತಿ ಪಡೆಯಲ್ಲ, ಅವರೇ ಹೊರದಬ್ಬಬೇಕು’; ನೇರವಾಗಿ ಹೇಳಿದ ಶಾರುಖ್ ಖಾನ್

| Updated By: ರಾಜೇಶ್ ದುಗ್ಗುಮನೆ

Updated on: Feb 21, 2023 | 9:41 AM

ಶಾರುಖ್ ಖಾನ್ ಅವರು ಅಭಿಮಾನಿಗಳ ಮಧ್ಯೆ ತೆರಳಿ ಪ್ರಚಾರ ಮಾಡಿದ್ದು ಕಡಿಮೆ. ಬದಲಿಗೆ ಸೋಶಿಯಲ್ ಮೀಡಿಯಾ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದರ ಮೂಲಕ ಪ್ರಮೋಷನ್ ಮಾಡುತ್ತಿದ್ದಾರೆ.

‘ನಾನಂತೂ ನಿವೃತ್ತಿ ಪಡೆಯಲ್ಲ, ಅವರೇ ಹೊರದಬ್ಬಬೇಕು’; ನೇರವಾಗಿ ಹೇಳಿದ ಶಾರುಖ್ ಖಾನ್
ಶಾರುಖ್ ಖಾನ್
Follow us on

ಶಾರುಖ್ ಖಾನ್ (Shah Rukh Khan) ಅವರು ಚಿತ್ರರಂಗದಲ್ಲಿ ಹಲವು ದಶಕಗಳಿಂದ ಶ್ರಮಿಸುತ್ತಿದ್ದಾರೆ. ವೃತ್ತಿಜೀವನದಲ್ಲಿ ಅವರು ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ದೇಶ-ವಿದೇಶದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಹಲವು ಕಲಾವಿದರು ಹಣ ಮಾಡಿಕೊಂಡು ನಟನೆಯಿಂದ ನಿವೃತ್ತಿ ಪಡೆಯುತ್ತಾರೆ. ಅದೇ ರೀತಿ ಸಾಯುವವರೆಗೂ ಬಣ್ಣ ಹಚ್ಚುವವರಿದ್ದಾರೆ. ಶಾರುಖ್ ಖಾನ್ ಅವರು ಎರಡನೇ ಸಾಲಿಗೆ ಸೇರುತ್ತಾರೆ. ಅವರು ನಟನೆಯಿಂದ ನಿವೃತ್ತಿ ಪಡೆಯಲ್ಲ ಎಂಬುದನ್ನು ಪುನರುಚ್ಛರಿಸಿದ್ದಾರೆ.

ಶಾರುಖ್​ ಖಾನ್ ನಟನೆಯ ‘ಪಠಾಣ್​’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಶಾರುಖ್ ಒಳ್ಳೆಯ ಕಂಬ್ಯಾಕ್ ಮಾಡಿದ್ದಾರೆ. ಈ ಸಿನಿಮಾದ ಒಟ್ಟೂ ಕಲೆಕ್ಷನ್ ಸಾವಿರ ಕೋಟಿ ರೂಪಾಯಿ ಸಮೀಪಿಸುವುದರಲ್ಲಿದೆ. ಶಾರುಖ್ ಖಾನ್ ಅವರು ಅಭಿಮಾನಿಗಳ ಮಧ್ಯೆ ತೆರಳಿ ಪ್ರಚಾರ ಮಾಡಿದ್ದು ಕಡಿಮೆ. ಬದಲಿಗೆ ಸೋಶಿಯಲ್ ಮೀಡಿಯಾ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದರ ಮೂಲಕ ಪ್ರಮೋಷನ್ ಮಾಡುತ್ತಿದ್ದಾರೆ. ಟ್ವಿಟರ್​ನಲ್ಲಿ ಅವರು ಪ್ರಶ್ನೋತ್ತರ ನಡೆಸುತ್ತಾರೆ. ಈ ವೇಳೆ ನಿವೃತ್ತಿ ಬಗ್ಗೆ ಕೇಳಲಾಗಿದೆ.

‘ನೀವು ನಿವೃತ್ತಿ ಪಡೆದ ನಂತರ ಬಾಲಿವುಡ್​ನಲ್ಲಿ ದೊಡ್ಡ ವ್ಯಕ್ತಿ ಯಾರು’ ಎಂದು ಶಾರುಖ್​​ ಖಾನ್​ಗೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ಶಾರುಖ್ ಖಾನ್, ‘ನಾನು ನಟನೆಯಿಂದ ನಿವೃತ್ತಿ ಪಡೆಯುವ ಮಾತೇ ಇಲ್ಲ. ನನ್ನನ್ನು ಹೊರದಬ್ಬಬೇಕು. ಬಹುಶಃ ಆಗಲೂ ನಾನು ಮತ್ತಷ್ಟು ಹಾಟ್ ಆಗಿ ಕಂಬ್ಯಾಕ್ ಮಾಡುತ್ತೇನೆ’ ಎಂದಿದ್ದಾರೆ.

ಇದನ್ನೂ ಓದಿ
Siddharth Anand: ಬಾಲಿವುಡ್​ಗೆ 2023ರ ಮೊದಲ ಬ್ಲಾಕ್​ ಬಸ್ಟರ್​​ ನೀಡಿದ ‘ಪಠಾಣ್​’ ನಿರ್ದೇಶಕ ಸಿದ್ದಾರ್ಥ್​ ಆನಂದ್​
Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ
Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ
Pathaan Movie Twitter Review: ‘ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾ’; ‘ಪಠಾಣ್​’ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು

ಇದನ್ನೂ ಓದಿ: Pathaan Sequel: ಬರಲಿದೆ ‘ಪಠಾಣ್​ 2’; ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ ಶಾರುಖ್​ ಖಾನ್​

‘ಪಠಾಣ್​’ ಸಿನಿಮಾದಲ್ಲೂ ನಿವೃತ್ತಿಯ ಮಾತು ಬರುತ್ತದೆ. ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ರೈಲ್ವೇ ಸೇತುವೆ ಮೇಲೆ ಕುಳಿತಿರುವ ದೃಶ್ಯವನ್ನು ತೋರಿಸಲಾಗುತ್ತದೆ. ‘ಚಿತ್ರರಂಗಕ್ಕೆ ಬಂದು 30 ವರ್ಷವಾಯಿತು. ಹೀಗಾಗಿ, ನಿವೃತ್ತಿ ಪಡೆಯಬೇಕು’ ಎಂದು ಶಾರುಖ್-ಸಲ್ಮಾನ್ ಖಾನ್ ಅಂದುಕೊಳ್ಳುತ್ತಾರೆ. ಅವರು ಹೋದ ಬಳಿಕ ಬಾಲಿವುಡ್​ ಮುನ್ನಡೆಸುವವರು ಯಾರು ಎನ್ನುವ ಪ್ರಶ್ನೆ ಬರುತ್ತದೆ. ಅವರಿಗೆ ಯಾವ ಹೆಸರೂ ಸೂಕ್ತ ಎನಿಸುವುದಿಲ್ಲ. ಹೀಗಾಗಿ, ತಾವೇ ಚಿತ್ರರಂಗವನ್ನು ಮುನ್ನಡೆಸಬೇಕು ಎಂದು ಅವರಿಗೆ ಅನಿಸುತ್ತದೆ. ಈ ಮೂಲಕ ತಾವು ಇನ್ನಷ್ಟು ವರ್ಷ ಚಿತ್ರರಂಗದಲ್ಲಿ ಇರುವ ಬಗ್ಗೆ ಅವರು ಪರೋಕ್ಷವಾಗಿ ಮಾಹಿತಿ ನೀಡಿದ್ದರು.

 

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:07 am, Tue, 21 February 23