
ಜಾಗತಿಕ ಫ್ಯಾಷನ್ ಉದ್ಯಮದಲ್ಲಿ ಅತ್ಯಂತ ಪ್ರಸಿದ್ಧ ಮತ್ತು ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಪ್ಯಾರಿಸ್ ಫ್ಯಾಷನ್ ವೀಕ್ನಲ್ಲಿ ಐಶ್ವರ್ಯಾ ರೈ ಪಾಲ್ಗೊಂಡು ಮಿಂಚಿದ್ದಾರೆ. ಅವರು ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಸೌಂದರ್ಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಈ ಫ್ಯಾಷನ್ ಶೋ ಮೂಲಕ ಐಶ್ವರ್ಯಾ ಭಾರತದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದ್ದಾರೆ.
‘ಲೋರಿಯಲ್ ಪ್ಯಾರಿಸ್’ ಕಂಪನಿಯ ಜಾಗತಿಕ ರಾಯಭಾರಿಯಾಗಿ ಐಶ್ವರ್ಯಾ ಭಾಗವಹಿಸಿದ್ದರು. ಈ ಬಾರಿಯ ‘ವಾಕ್ ಯುವರ್ ವರ್ತ್’ ಕಲ್ಪನೆಯಡಿ ಅವರು ರ್ಯಾಂಪ್ ವಾಕ್ ಮಾಡಿದರು. ವಿಶ್ವದ ಖ್ಯಾತ ತಾರೆಗಳಾದ ಕೆಂಡಲ್ ಜೆನ್ನರ್, ಸೆಲಿನ್ ಡಿಯೋನ್ ಮತ್ತು ವಿಯೋಲಾ ಡೇವಿಸ್ ಕೂಡ ಐಶ್ವರ್ಯಾ ಜೊತೆ ಹೆಜ್ಜೆ ಹಾಕಿದರು.
ರ್ಯಾಂಪ್ ವಾಕ್ ಸಮಯದಲ್ಲಿ ಐಶ್ವರ್ಯಾ ಕಪ್ಪು ಬಣ್ಣದ ವೆಲ್ವೆಟ್ ಗೌನ್ ಧರಿಸಿದ್ದರು. ಯಾನ್ ಶೂಮೇಕರ್ ವಿನ್ಯಾಸಗೊಳಿಸಿದ ಈ ಉಡುಪಿನಲ್ಲಿ ಅವರು ರಾಜಕುಮಾರಿಯಂತೆ ಕಂಗೊಳಿಸಿದರು. ತಲೆಯ ಮೇಲಿದ್ದ ಕಿರೀಟ ಅವರ ಸೌಂದರ್ಯವನ್ನು ಹೆಚ್ಚಿಸಿತ್ತು. ಗಾಯಕಿ ಸೆಲಿನ್ ಡಿಯೋನ್ ಜೊತೆ ಐಶ್ವರ್ಯಾ ಕೈಜೋಡಿಸಿ ನರ್ತಿಸಿದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಐಶ್ವರ್ಯಾ ಅವರ ಕ್ಯಾಟ್ ವಾಕ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ. 1994ರಲ್ಲಿ ಮಿಸ್ ವರ್ಲ್ಡ್ ಪಟ್ಟ ಗೆದ್ದ ನಟಿ ಇಂದಿಗೂ ಅದೇ ಗ್ಲಾಮರ್ ಹೊಂದಿದ್ದಾರೆ ಎಂದು ಅಭಿಮಾನಿಗಳು ಕೊಂಡಾಡಿದ್ದಾರೆ. ಐಶ್ವರ್ಯಾ ಭಾರತೀಯ ಚಿತ್ರರಂಗದ ನಿಜವಾದ ಐಕಾನ್ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಅವರ ನೈಜ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಇದನ್ನೂ ಓದಿ: ಐಶ್ವರ್ಯಾ ರೈ ಮತ್ತು ರಾಣಿ ಮುಖರ್ಜಿ ಸ್ನೇಹ ಮುರಿದುಬಿದ್ದಿದ್ದು ಏಕೆ? ಇದರಲ್ಲಿದೆ ಶಾರುಖ್, ಅಭಿಷೇಕ್ ಪಾತ್ರ
ವೇದಿಕೆಯ ಹಿಂದೆ ಇತರ ತಾರೆಗಳ ಜೊತೆ ಐಶ್ವರ್ಯಾ ಕಾಲ ಕಳೆದರು. ನಟಿ ಈವಾ ಲೊಂಗೋರಿಯಾ ಅವರನ್ನು ತಬ್ಬಿಕೊಂಡು ಶುಭ ಕೋರಿದರು. ‘ಬ್ರಿಡ್ಜರ್ಟನ್’ ಸರಣಿಯ ಖ್ಯಾತಿಯ ಸಿಮೋನ್ ಆಶ್ಲಿ ಜೊತೆಯೂ ಆತ್ಮೀಯವಾಗಿ ಮಾತನಾಡಿದರು. ಈ ಸೌಹಾರ್ದಯುತ ವೀಡಿಯೊಗಳು ಈಗ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆ ಗಳಿಸುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.