ನಟಿ ಐಶ್ವರ್ಯಾ ರೈ (Aishwarya Rai) ಅವರಿಗೆ ಇಂದು (ನವೆಂಬರ್ 1) ಬರ್ತ್ಡೇ ಸಂಭ್ರಮ. ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅವರಿಗೆ ಅಭಿಮಾನಿಗಳ ಕಡೆಯಿಂದ, ಸೆಲೆಬ್ರಿಟಿಗಳ ಕಡೆಯಿಂದ ಶುಭಾಶಯ ಬರುತ್ತಿದೆ. ವಯಸ್ಸು 49 ಆದರೂ ಇನ್ನೂ ಯುವ ನಟಿಯರನ್ನು ಐಶ್ವರ್ಯಾ(Aishwarya Rai Birthday) ನಾಚಿಸುವಂತಿದ್ದಾರೆ. ಈ ಕಾರಣಕ್ಕೂ ಅವರು ಅನೇಕರಿಗೆ ಇಷ್ಟವಾಗುತ್ತಾರೆ. ಫಿಟ್ನೆಸ್ ವಿಚಾರದಲ್ಲಿ ಅವರು ಅನೇಕರಿಗೆ ಮಾದರಿ. ನಟಿ ಐಶ್ವರ್ಯಾ ರೈ ಅವರ ಮೊದಲ ಸಂಭಾವನೆ ಕೇವಲ 1500 ರೂಪಾಯಿ. ಈಗ ಅವರು ಪ್ರತಿ ಸಿನಿಮಾಗೆ ಕೋಟಿ ಕೋಟಿ ಹಣ ಪಡೆದುಕೊಳ್ಳುತ್ತಾರೆ.
ಐಶ್ವರ್ಯಾ ರೈ ಅವರು ಮೊದಲು ಗುರುತಿಸಿಕೊಂಡಿದ್ದು ಮಾಡೆಲಿಂಗ್ ಕ್ಷೇತ್ರದಲ್ಲಿ. ಅಲ್ಲಿ ಐಶ್ವರ್ಯಾ ರೈ ಸಾಕಷ್ಟು ಜನಪ್ರಿಯತೆ ಪಡೆದರು. ಐಶ್ವರ್ಯಾ ರೈ ಅವರು 1992ರಲ್ಲಿ ಮ್ಯಾಗಜಿನ್ ಕೆಟಲಾಗ್ ಫೋಟೋಶೂಟ್ ಒಂದರಲ್ಲಿ ಭಾಗಿ ಆಗಿದ್ದರು. ಇದಕ್ಕಾಗಿ ಅವರು 1500 ರೂಪಾಯಿ ಪಡೆದಿದ್ದರು. ಇದು ಅವರ ಮೊದಲ ಸಂಭಾವನೆ. ಐಶ್ವರ್ಯಾ ರೈ ಅವರಿಗೆ 1994ರಲ್ಲಿ ವಿಶ್ವ ಸುಂದರಿ ಪಟ್ಟ ಸಿಕ್ಕಿತು. ಅಲ್ಲಿಂದ ನಟಿಯ ಬದುಕು ಬದಲಾಗಿ ಹೋಯಿತು.
ಐಶ್ವರ್ಯಾ ರೈ ಅವರಿಗೆ ಸಾಕಷ್ಟು ಸಿನಿಮಾ ಆಫರ್ಗಳು ಬಂದವು. ಆದರೆ, ಎಲ್ಲವನ್ನೂ ಅವರು ಒಪ್ಪಿಕೊಳ್ಳಲಿಲ್ಲ. 1997ರಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದರು. ವರ್ಷಗಳು ಕಳೆದಂತೆ ಐಶ್ವರ್ಯಾ ರೈ ಬೇಡಿಕೆ ಹೆಚ್ಚುತ್ತಾ ಹೋಯಿತು. ಹೀಗಾಗಿ, ಸಂಭಾವನೆ ಕೂಡ ಹೆಚ್ಚಿತು. ಇತ್ತೀಚೆಗೆ ಅವರ ನಟನೆಯ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ರಿಲೀಸ್ ಆಗಿ ಹಿಟ್ ಆಗಿದೆ. ಈ ಚಿತ್ರಕ್ಕಾಗಿ ಐಶ್ವರ್ಯಾ ರೈ ಅವರು ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಐಶ್ವರ್ಯಾ ರೈ ಅವರು ಅಭಿಷೇಕ್ ಬಚ್ಚನ್ ಅವರನ್ನು ಪ್ರೀತಿಸಿ ಮದುವೆ ಆದರು. ಅದಕ್ಕೂ ಮೊದಲು ಸಲ್ಮಾನ್ ಖಾನ್ ಜತೆಗಿನ ಲವ್ ವಿಚಾರಕ್ಕೆ ಐಶ್ವರ್ಯಾ ಸುದ್ದಿ ಆಗಿದ್ದರು. ಆದರೆ, ಇವರ ಸಂಬಂಧ ಹೆಚ್ಚು ದಿನ ಬಾಳಲಿಲ್ಲ. ಇಬ್ಬರೂ ಬೇರೆ ಆದರು.
ಇದನ್ನೂ ಓದಿ: ವಯಸ್ಸಾದಾಗ ಈ ತಾರೆಯರ ಲುಕ್ ಹೇಗಿರುತ್ತೆ ನೋಡಿ; ಇವರೇನಾ ಸಲ್ಲು, ಹೃತಿಕ್, ಆಲಿಯಾ, ಐಶ್ವರ್ಯಾ?
ಸದ್ಯ ಐಶ್ವರ್ಯಾ ರೈ ಅವರು ‘ಪೊನ್ನಿಯಿನ್ ಸೆಲ್ವನ್ 2’ ಹೊರತುಪಡಿಸಿ ಮತ್ತಾವುದೇ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ಈ ಚಿತ್ರದ ಕೆಲಸಗಳು ಇನ್ನಷ್ಟೇ ಆರಂಭಗೊಳ್ಳಬೇಕಿದೆ. 2016ರಲ್ಲಿ ತೆರೆಗೆ ಬಂದ ‘ಯೇ ದಿಲ್ ಹೈ ಮುಷ್ಕಿಲ್’ ಚಿತ್ರದಲ್ಲಿ ಐಶ್ವರ್ಯಾ ಸಖತ್ ಹಾಟ್ ಆಗಿ ಕಾಣಿಸಿಕೊಂಡು ಸುದ್ದಿ ಆಗಿದ್ದರು.