52ನೇ ವಯಸ್ಸಿನಲ್ಲೂ ಸಿಂಗಲ್; ಈ ಸ್ಟಾರ್ ನಟಿ ಮದುವೆ ಆಗದಿರಲು ಅಜಯ್ ದೇವಗನ್ ಕಾರಣ

ಅಜಯ್ ದೇವಗನ್ ಅವರ ಜನ್ಮದಿನದಂದು, ನಟಿ ಟಬು ಅವರು ತಮ್ಮ ಅವಿವಾಹಿತ ಜೀವನಕ್ಕೆ ಅಜಯ್ ಕಾರಣ ಎಂದು ಬಹಿರಂಗಪಡಿಸಿದ್ದಾರೆ. ಬಾಲ್ಯದಿಂದಲೂ ಸ್ನೇಹಿತರಾದ ಇವರ ನಡುವಿನ ಬಾಂಧವ್ಯದ ಬಗ್ಗೆ ಟಬು ಮಾತನಾಡಿದ್ದಾರೆ. ಅಜಯ್ ಅವರ ಬೆಂಬಲ ಮತ್ತು ಕಾಳಜಿಯಿಂದ ತಾವು ವಿವಾಹವಾಗದಿರಲು ನಿರ್ಧರಿಸಿದ್ದಾಗಿ ಅವರು ಹೇಳಿದ್ದಾರೆ.

52ನೇ ವಯಸ್ಸಿನಲ್ಲೂ ಸಿಂಗಲ್; ಈ ಸ್ಟಾರ್ ನಟಿ ಮದುವೆ ಆಗದಿರಲು ಅಜಯ್ ದೇವಗನ್ ಕಾರಣ
ಅಜಯ್​-ಟಬು
Edited By:

Updated on: Apr 02, 2025 | 8:04 AM

ಅಜಯ್ ದೇವಗನ್ (Ajay Devgn) ಅವರು ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡವರು. ಅವರಿಗೆ ಇಂದು (ಏಪ್ರಿಲ್ 2) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಅಜಯ್ ದೇವಗನ್ ಅವರ ಜನ್ಮದಿನದಂದು ಅನೇಕರು ಅವರ ಬಗೆಗಿನ ಅಪರೂಪದ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಓರ್ವ ಸ್ಟಾರ್ ನಟಿ ಇನ್ನೂ ಸಿಂಗಲ್ ಆಗಿ ಇರೋಕೆ ಅಜಯ್ ದೇವಗನ್ ಕಾರಣ ಎಂಬ ವಿಚಾರ ನಿಮಗೆ ಗೊತ್ತೇ? ಈ ಬಗ್ಗೆ ಆ ನಟಿಯೇ ಹೇಳಿಕೊಂಡಿದ್ದರು. ಅಷ್ಟಕ್ಕೂ ಯಾರು ಆ ನಟಿ? ಟಬು! ಅಜಯ್ ದೇವಗನ್​ಗೆ ಇಂದು (ಏಪ್ರಿಲ್ 2) ಜನ್ಮದಿನ. ಹೀಗಾಗಿ ಈ ವಿಚಾರ ನೆನಪಿಸಿಕೊಳ್ಳಲಾಗುತ್ತಿದೆ.

ಬಾಲಿವುಡ್​ನಲ್ಲಿ ಅಜಯ್ ದೇವಗನ್ ಹಾಗೂ ಟಬು ಅವರದ್ದು ಹಿಟ್ ಜೋಡಿ. ಇವರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇದೆ. ಇವರನ್ನು ಈಗಲೂ ಕಾಪಾಡಿಕೊಂಡು ಇವರು ಹೊಗುತ್ತಿದ್ದಾರೆ. ಅಜಯ್ ದೇವಗನ್ ಸಿನಿಮಾ ನಿರ್ದೇಶನ ಅಥವಾ ನಿರ್ಮಾಣ ಮಾಡಿದರೆ ಅದರಲ್ಲಿ ಟಬು ಇದ್ದೇ ಇರುತ್ತದೆ. ಇವರ ಬಾಂಡಿಂಗ್ ಅಷ್ಟು ಪ್ರಭಲವಾಗಿ ಇದೆ. ಹಾಗಾದರೆ ಇವರು ಪ್ರೀತಿಸುತ್ತಿದ್ದರಾ? ಆ ಪ್ರಶ್ನೆಗೆ ಉತ್ತರ ಇಲ್ಲ. ಆದರೆ, ನಾನು ಸಿಂಗಲ್ ಆಗಿರಲು ಅಜಯ್ ಕಾರಣ ಎಂದು ಟಬು ಅನೇಕ ಬಾರಿ ಹೇಳಿದ್ದಾರೆ.

‘ಅಜಯ್ ಮತ್ತು ನಾನು 25 ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಿತರು. ಅವನು ನನ್ನ ಸೋದರಸಂಬಂಧಿ ಸಮೀರ್ ಆರ್ಯನ ನೆರೆಯವನು ಮತ್ತು ನನ್ನ ಆಪ್ತ ಸ್ನೇಹಿತ. ನಾನು ಚಿಕ್ಕವನಿದ್ದಾಗ, ಸಮೀರ್ ಮತ್ತು ಅಜಯ್ ನನ್ನ ಮೇಲೆ ಕಣ್ಣಿಡುತ್ತಿದ್ದರು. ನನ್ನನ್ನು ಹಿಂಬಾಲಿಸುತ್ತಿದ್ದರು. ನನ್ನೊಂದಿಗೆ ಮಾತನಾಡುವ ಹುಡುಗರಿಗೆ  ಹೊಡೆಯುವ ಬೆದರಿಕೆ ಹಾಕುತ್ತಿದ್ದರು. ನಾನು ಇಂದು ಒಂಟಿಯಾಗಿದ್ದರೆ ಅದಕ್ಕೆ ಅಜಯ್ ಕಾರಣ. ಅವನು ಪಶ್ಚಾತ್ತಾಪಪಟ್ಟು ತಾನು ಮಾಡಿದ್ದಕ್ಕೆ ವಿಷಾದಿಸುತ್ತಾನೆ ಎಂದು ನಾನು ಭಾವಿಸುತ್ತೇನೆ’ ಎಂದಿದ್ದರು ಅವರು.

ಇದನ್ನೂ ಓದಿ
ಅಜಯ್ ದೇವಗನ್ ಐಷಾರಾಮಿ ಜೀವನ; 60 ಕೋಟಿ ಮನೆ, ದುಬಾರಿ ಕಾರು, ಬಿಸ್ನೆಸ್
ಪಾತಾಳ ಕಾಣುತ್ತಿದೆ ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಕಲೆಕ್ಷನ್
ನಟನೆ ಮಾತ್ರವಲ್ಲ ಈ ವಿಶೇಷ ವಿದ್ಯೆ ಕಲಿತಿದ್ದಾರೆ ಅಜಯ್ ರಾವ್
‘ನಿಂದು ಒಂದೇ ವರ್ಷಕ್ಕೆ ಡಿವೋರ್ಸ್ ಕಣೋ’; ವಿವಾಹದ ಬಳಿಕ ಅಜಯ್ ಕೇಳಿದ ಮಾತಿದು

ಇದನ್ನೂ ಓದಿ: ಅಜಯ್ ದೇವಗನ್ ಐಷಾರಾಮಿ ಜೀವನ; 60 ಕೋಟಿ ಮನೆ, ದುಬಾರಿ ಕಾರು, ರಿಯಲ್ ಎಸ್ಟೇಟ್ ಬಿಸ್ನೆಸ್

ಟಬು ಅವರಿಗೆ ಸಿಂಗಲ್ ಆಗಿ ಇರೋದೆ ಹೆಚ್ಚು ಇಷ್ಟವಂತೆ. ಈ ಕಾರಣಕ್ಕೆ ಅವರು ವಿವಾಹ ಆಗುವ ಸಾಹಸಕ್ಕೆ ಮುಂದಾಗಿಲ್ಲ. ಇನ್ನು ಅಜಯ್ ದೇವಗನ್ ವಿಚಾರಕ್ಕೆ ಬರೋದಾದರೆ ಅವರು ಕಾಜೋಲ್​ನ ವಿವಾಹ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಕಾಜೋಲ್ ಹಾಗೂ ಅಜಯ್ ಒಟ್ಟಿಗೆ ನಟಿಸಿದವರು. ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:04 am, Wed, 2 April 25