ಲೆಕ್ಕಾಚಾರದಲ್ಲಿ ಯಾಮಾರಿದ ಅಕ್ಷಯ್ ಕುಮಾರ್​​; ಅಕ್ಕಿ ತೆಗೆದುಕೊಂಡ್ರು ಮಹತ್ವದ ನಿರ್ಧಾರ

| Updated By: ರಾಜೇಶ್ ದುಗ್ಗುಮನೆ

Updated on: Aug 22, 2021 | 8:47 AM

ಕೊವಿಡ್ ಎರಡನೇ ಅಲೆ ಜೋರಾದ ನಂತರದಲ್ಲಿ ಚಿತ್ರಮಂದಿರಕ್ಕೆ ಬೀಗ ಹಾಕಲಾಗಿತ್ತು. ಈಗ ಚಿತ್ರಮಂದಿರ ತೆರೆದಿದೆಯಾದರೂ ಅನೇಕ ರಾಜ್ಯಗಳಲ್ಲಿ ಶೇ. 50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಲಾಗಿದೆ.

ಲೆಕ್ಕಾಚಾರದಲ್ಲಿ ಯಾಮಾರಿದ ಅಕ್ಷಯ್ ಕುಮಾರ್​​; ಅಕ್ಕಿ ತೆಗೆದುಕೊಂಡ್ರು ಮಹತ್ವದ ನಿರ್ಧಾರ
ಲೆಕ್ಕಾಚಾರದಲ್ಲಿ ಯಾಮಾರಿದ ಅಕ್ಷಯ್ ಕುಮಾರ್​​; ಅಕ್ಕಿ ತೆಗೆದುಕೊಂಡ್ರು ಮಹತ್ವದ ನಿರ್ಧಾರ
Follow us on

ಅಕ್ಷಯ್​ ಕುಮಾರ್ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತವೆ. ಅವರ ಅನೇಕ ಚಿತ್ರಗಳು ನೂರ ಕೋಟಿ ಕಲೆಕ್ಷನ್​ ಮಾಡಿವೆ. ಸಿನಿಮಾ ಉತ್ತಮವಾಗಿದ್ದರೆ ವೀಕ್ಷಕರು ಗೆಲ್ಲಿಸುತ್ತಾರೆ ಎನ್ನುವ ನಂಬಿಕೆ ಅವರದ್ದು. ‘ಬೆಲ್​ ಬಾಟಮ್​’ ವಿಚಾರದಲ್ಲಿ ಈ ಲೆಕ್ಕಾಚಾರ ತಪ್ಪಿದೆ. ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದ್ದರೂ ಚಿತ್ರಮಂದಿರದತ್ತ ಯಾರೂ ಹೆಜ್ಜೆ ಹಾಕುತ್ತಿಲ್ಲ. ಪರಿಣಾಮ ‘ಬೆಲ್​ ಬಾಟಮ್​’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸೊರಗಿದೆ. ಇದು ಅಕ್ಷಯ್​ ಚಿಂತೆಗೆ ಕಾರಣವಾಗಿದೆ.

ಕೊವಿಡ್ ಎರಡನೇ ಅಲೆ ಜೋರಾದ ನಂತರದಲ್ಲಿ ಚಿತ್ರಮಂದಿರಕ್ಕೆ ಬೀಗ ಹಾಕಲಾಗಿತ್ತು. ಈಗ ಚಿತ್ರಮಂದಿರ ತೆರೆದಿದೆಯಾದರೂ ಅನೇಕ ರಾಜ್ಯಗಳಲ್ಲಿ ಶೇ. 50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಲಾಗಿದೆ. ಅಂದರೆ, ಅಕ್ಕಪಕ್ಕ ಕೂರುವಂತಿಲ್ಲ. ಹೀಗಿರುವಾಗ ಫ್ಯಾಮಿಲಿ ಆಡಿಯನ್ಸ್​ ಚಿತ್ರಮಂದಿರದತ್ತ ಮುಖ ಮಾಡುವ ಸಾಧ್ಯತೆ ಕಡಿಮೆ. ಇದೇ ಕಾರಣಕ್ಕೆ ‘ಬೆಲ್​ ಬಾಟಮ್​’ ಸಿನಿಮಾ ವೀಕ್ಷಣೆಗೆ ಪ್ರೇಕ್ಷಕರು ಚಿತ್ರಮಂದಿರದತ್ತ ಮುಖ ಮಾಡುತ್ತಿಲ್ಲ. ಇದು ಸಿನಿಮಾ ಕಲೆಕ್ಷನ್​ಗೆ ಹೊಡೆತ ನೀಡಿದೆ.

ಬಾಕ್ಸ್​ ಆಫೀಸ್​ ಮೂಲಗಳ ಪ್ರಕಾರ ಈ ಚಿತ್ರ ಶುಕ್ರವಾರ 2.75 ಕೋಟಿ ರೂಪಾಯಿ ಹಾಗೂ ಶನಿವಾರ 2.40 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ ಎನ್ನಲಾಗಿದೆ. ಕಲೆಕ್ಷನ್​ ವಿಚಾರದಲ್ಲಿ ಈ ಸಿನಿಮಾಗೆ ತೀವ್ರ ಹಿನ್ನಡೆ ಆಗಿದೆ ಎನ್ನಬಹುದು. ಹೀಗಾಗಿ ಈ ಸಿನಿಮಾ ಕೆಲವೇ ವಾರಗಳಲ್ಲಿ ಅಮೇಜಾನ್​ ಪ್ರೈಮ್​ನಲ್ಲಿ ಪ್ರಸಾರವಾಗಲಿದೆ ಎನ್ನುವ ಮಾತು ಕೇಳಿ ಬಂದಿದೆ. ಒಟಿಟಿಯವರು ದೊಡ್ಡ ಮೊತ್ತಕ್ಕೆ ಆಫರ್​ ಮಾಡಿದ್ದರಿಂದ ಚಿತ್ರತಂಡ ಇದಕ್ಕೆ ಒಕೆ ಎಂದಿದೆ. ಅಕ್ಷಯ್ ಕೂಡ ಇದಕ್ಕೆ ತಲೆ ಆಡಿಸಿದ್ದಾರೆ.

ಇನ್ನು, ಅಕ್ಷಯ್​ ಕುಮಾರ್​ ಹಾಗೂ ನಿರ್ದೇಶಕ ರೋಹಿತ್​ ಶೆಟ್ಟಿ ಕಾಂಬಿನೇಷನ್​ ‘ಸೂರ್ಯವಂಶಿ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಆದರೆ, ಕೊವಿಡ್​ ಎರಡನೇ ಅಲೆ ಇದಕ್ಕೆ ಆಸ್ಪದ ನೀಡಿಲ್ಲ. ಈಗ ಚಿತ್ರತಂಡದವರು ಸಿನಿಮಾ ರಿಲೀಸ್​ಗೆ ಪ್ಲ್ಯಾನ್​ ಮಾಡಿಕೊಂಡಿದ್ದರು. ಆದರೆ, ಈಗ ಇನ್ನೂ ಸ್ವಲ್ಪ ಸಮಯ ಕಾದು ಸಿನಿಮಾ ರಿಲೀಸ್​ ಮಾಡುವಂತೆ ಅಕ್ಷಯ್​ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Bell Bottom: ಬಾಕ್ಸಾಫೀಸ್​ನಲ್ಲಿ ಹಿಂದೆ ಬಿತ್ತು ಬಹು ನಿರೀಕ್ಷಿತ ‘ಬೆಲ್​ಬಾಟಂ’; ಅಕ್ಷಯ್ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು?

ಅಕ್ಷಯ್​ ಕುಮಾರ್ ಸಿನಿಮಾ ಬ್ಯಾನ್​ ಮಾಡಿದ ಮೂರು ಪ್ರಮುಖ ರಾಷ್ಟ್ರಗಳು; ಬಾಕ್ಸ್​ ಆಫೀಸ್​ ಕಲೆಕ್ಷನ್​ಗೆ ಹೊಡೆತ

Published On - 7:14 am, Sun, 22 August 21