ಅಕ್ಷಯ್ ಕುಮಾರ್ ಅವರು ‘ಭೂಲ್ ಭುಲಯ್ಯ’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ‘ಭೂಲ್ ಭುಲಯ್ಯ 2’ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರನ್ನು ಹೊರಕ್ಕೆ ಇಡಲಾಯಿತು. ಈ ಜಾಗಕ್ಕೆ ಬಂದಿದ್ದೇ ಕಾರ್ತಿಕ್ ಆರ್ಯನ್. ಹೀಗೆಕೆ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳುತ್ತಾರೆ. ಇದಕ್ಕೆ ಉತ್ತರ ಇಲ್ಲ. ಈಗ ‘ಭೂಲ್ ಭುಲಯ್ಯ 3’ ಬರುತ್ತಿದ್ದು, ಇದರಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾ ರಾ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ನಿರ್ದೇಶಕರೇ ಉತ್ತರ ಕೊಟ್ಟಿದ್ದಾರೆ.
ಅನೀಸ್ ಬಾಜ್ಮೀ ಅವರು ‘ಭೂಲ್ ಭುಲಯ್ಯ 3’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅತಿಥಿ ಪಾತ್ರ ಮಾಡಬೇಕು ಅಥವಾ ಮಾಡಿದ್ದಾರೆ ಎಂಬುದು ಮೊದಲಿನಿಂದಲೂ ಇರುವ ಚರ್ಚೆ. ಈ ಬಗ್ಗೆ ಅನೀಸ್ ಮಾತನಾಡಿದ್ದಾರೆ. ‘ಕೆಲವು ಕಾರಣಗಳಿಂದ ಭೂಲ್ ಭುಲಯ್ಯ ಸೀಕ್ವೆಲ್ನಲ್ಲಿ ಅಕ್ಷಯ್ ಕುಮಾರ್ ನಿಟಸೋಕೆ ಸಾಧ್ಯವಾಗಿಲ್ಲ. ಆ ಪರಿಸ್ಥಿತಿಯಲ್ಲಿ ನಾನಾಗಲೀ ಅಥವಾ ನಿರ್ದೇಶಕರಾಗಲಿ ಅವರಿಗೆ ಒತ್ತಾಯ ಮಾಡಲು ಹೋಗಿಲ್ಲ. ಅವರು ಒಳ್ಳೆಯ ನಟ’ ಎಂದು ಅವರು ಹೇಳಿದ್ದಾರೆ.
‘ಭೂಲ್ ಭುಲಯ್ಯ 2 ರಿಲೀಸ್ ಆದಾಗ ಸಾಕಷ್ಟು ತೊಂದರೆ ಆಯಿತು. ಸಿನಿಮಾ ಹಿಟ್ ಆಗಲ್ಲ ಎನ್ನುವ ಅಭಿಪ್ರಾಯ ಬಂತು. ಟ್ರೇಲರ್ ನೋಡಿದ ಜನರು ಇದನ್ನು ಮೆಚ್ಚಿಕೊಂಡರು. ಅಕ್ಷಯ್ ಕುಮಾರ್ ಅವರು ಭೂಲ್ ಭುಲಯ್ಯಾದಲ್ಲಿ ಚೆನ್ನಾಗಿ ನಟಿಸಿದ್ದರು. ಅವರಿಲ್ಲದೆ ಸೀಕ್ವೆಲ್ ಮಾಡಬೇಕಾಯಿತು’ ಎಂದಿದ್ದಾರೆ ಅನೀಸ್.
ಇದನ್ನೂ ಓದಿ:‘ಭೂಲ್ ಭುಲಯ್ಯ 3’ಗೆ ವಿದ್ಯಾ ಬಾಲನ್ ಎಂಟ್ರಿ; ಮಂಜುಲಿಕಾನ ಸ್ವಾಗತಿಸಿದ ಕಾರ್ತಿಕ್ ಆರ್ಯನ್
ಮುಂದಿನ ದಿನಗಳಲ್ಲಿ ಸೀರಿಸ್ನಲ್ಲಿ ಅವರು ಇರ್ತಾರಾ? ಈ ಪ್ರಶ್ನೆಗೆ ಅನೀಸ್ ಉತ್ತರಿಸಿದ್ದಾರೆ. ‘ನಾನು ಯಾವಾಗ ಬೇಕಿದ್ದರೂ ಅವರನ್ನು ಭೇಟಿ ಮಾಡಬಹುದು. ಅದನ್ನು ಮಾಡಲು ಮತ್ತೆ ಯೋಚಿಸಬೇಕಿಲ್ಲ. ಅವರ ಬಗ್ಗೆ ಸಾಕಷ್ಟು ಪ್ರೀತಿ ಇದೆ. ನನ್ನ ಸಿನಿಮಾದಲ್ಲಿ ಪಾತ್ರ ಮಾಡಿಸಬಹುದು. ಅಷ್ಟು ಒಳ್ಳೆಯ ಸಂಬಂಧ ಇದೆ. ಅವರಿಗೆ ಪಾತ್ರ ಹೊಂದಿದರೆ ಖಂಡಿತವಾಗಿಯೂ ಅವರು ಅತಿಥಿ ಪಾತ್ರ ಮಾಡುತ್ತಾರೆ’ ಎಂದಿದ್ದಾರೆ. ಆದರೆ, ‘ಭೂಲ್ ಭುಲಯ್ಯ 3’ ಚಿತ್ರದಲ್ಲಿ ಅವರು ನಟಿಸಿಲ್ಲ.
ಅಕ್ಷಯ್ ಕುಮಾರ್ ಹಾಗೂ ಅನೀಸ್ ಅವರು ‘ವೆಲ್ಕಮ್’, ‘ಭೂಲ್ ಭುಲಯ್ಯ’ ಹಾಗೂ ‘ಸಿಂಗ್ ಈಸ್ ಕಿಂಗ್’ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇವರು ಒಟ್ಟಾಗಿ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ