Samrat Prithviraj BO Collections: ಸೋಮವಾರದಂದು ಕುಸಿದ ‘ಸಾಮ್ರಾಟ್ ಪೃಥ್ವಿರಾಜ್’ ಕಲೆಕ್ಷನ್; ಅಕ್ಷಯ್ ನಟನೆಯ ಚಿತ್ರ ಇದುವರೆಗೆ ಗಳಿಸಿದ್ದೆಷ್ಟು?

Akshay Kumar | Manushi Chillar: ಅಕ್ಷಯ್ ಕುಮಾರ್, ಮಾನುಷಿ ಚಿಲ್ಲರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಸೋಮವಾರದಂದು ಬಾಕ್ಸಾಫೀಸ್​ನಲ್ಲಿ ಚಿತ್ರದ ಗಳಿಕೆ ಕುಸಿದಿದೆ.

Samrat Prithviraj BO Collections: ಸೋಮವಾರದಂದು ಕುಸಿದ ‘ಸಾಮ್ರಾಟ್ ಪೃಥ್ವಿರಾಜ್’ ಕಲೆಕ್ಷನ್; ಅಕ್ಷಯ್ ನಟನೆಯ ಚಿತ್ರ ಇದುವರೆಗೆ ಗಳಿಸಿದ್ದೆಷ್ಟು?
‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರದ ಪೋಸ್ಟರ್
Edited By:

Updated on: Jun 07, 2022 | 10:10 AM

‘ಸಾಮ್ರಾಟ್ ಪೃಥ್ವಿರಾಜ್’ (Samrat Prithviraj) ಚಿತ್ರದ ಮೂಲಕ ಬಾಲಿವುಡ್ ಚೇತರಿಸಿಕೊಳ್ಳಲಿದೆ ಎಂಬ ನಿರೀಕ್ಷೆ ಹುಸಿಯಾಗುತ್ತಿದೆ. ಇದೀಗ ಸೋಮವಾರದ ಗಳಿಕೆಯ ವಿವರ ಹೊರಬಿದ್ದಿದ್ದು, ಅಕ್ಷಯ್ ಕುಮಾರ್ (Akshay Kumar) ಚಿತ್ರದ ಗಳಿಕೆ ಕುಸಿದಿದೆ. ಡಾ.ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ ಚಿತ್ರವು ಜೂನ್ 3ರಂದು ವಿಶ್ವಾದ್ಯಂತ ರಿಲೀಸ್ ಆಗಿತ್ತು. ಚಿತ್ರಕ್ಕೆ ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ವಾರಾಂತ್ಯದಲ್ಲಿ ಸುಮಾರು 39 ಕೋಟಿ ರೂಗಳನ್ನು ಗಳಿಸಿದ ಚಿತ್ರಕ್ಕೆ ಸೋಮವಾರ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಜೂನ್ 6ರಂದು ​ಚಿತ್ರವು ಸುಮಾರು 4.85 ಕೋಟಿ ರೂಗಳಿಂದ 5.15 ಕೋಟಿ ರೂಗಳಷ್ಟು ಮೊತ್ತವನ್ನು ಗಳಿಸಿದೆ ಎಂದು ಪಿಂಕ್​ವಿಲ್ಲಾ ವರದಿ ಮಾಡಿದೆ. ಚಿತ್ರವು ಮೊದಲ ದಿನ 10.70 ಕೋಟಿ ರೂ, ಎರಡನೇ ದಿನ 12.60 ಕೋಟಿ ರೂ ಹಾಗೂ ಭಾನುವಾರದಂದು 16.10 ಕೋಟಿ ರೂ ಮೊತ್ತವನ್ನು ಗಳಿಸಿತ್ತು. ಈ ಮೂಲಕ ಒಟ್ಟಾರೆ ಗಳಿಕೆ 44 ಕೋಟಿ ರೂ ಆಗಿದ್ದು, ಮೊದಲ ವಾರದಲ್ಲಿ ಸುಮಾರು 60 ಕೋಟಿ ರೂ ಗಳಿಸುವ ನಿರೀಕ್ಷೆ ಇದೆ.

‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ಹಲವು ರಾಜ್ಯಗಳು ತೆರಿಗೆ ವಿನಾಯಿತಿಯನ್ನು ಘೋಷಿಸಿದ್ದವು. ಉತ್ತರ ಪ್ರದೇಶ, ಮಧ್ಯ ಪ್ರದೇಶ ಸೇರಿದಂತೆ ಹಿಂದಿ ಭಾಷಿಕ ರಾಜ್ಯಗಳು ತೆರಿಗೆ ವಿನಾಯಿತಿ ನೀಡಿದ್ದರೂ, ಜನರು ಚಿತ್ರ ವೀಕ್ಷಿಸಲು ಹೆಚ್ಚು ಆಸಕ್ತಿ ತೋರಿಸಿಲ್ಲ. ಹೀಗಾಗಿ ಗಳಿಕೆಯೂ ಏರುತ್ತಿಲ್ಲ. ಪರಿಣಾಮವಾಗಿ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ಮೀಸಲಾದ ಸ್ಕ್ರೀನ್​ಗಳು ಜನರ ಕೊರತೆಯಿಂದ ಇತರ ಚಿತ್ರಗಳ ಪಾಲಾಗುತ್ತಿವೆ.

ಜೂನ್​ 3ರಂದೇ ತೆರೆ ಕಂಡಿದ್ದ ಕಮಲ್ ಹಾಸನ್ ಅಭಿನಯದ ‘ವಿಕ್ರಮ್’ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಉತ್ತರ ಭಾರತದಲ್ಲಿ ಸೀಮಿತ ಸಂಖ್ಯೆಯ ಸ್ಕ್ರೀನ್​ಗಳಲ್ಲಿ ಪ್ರದರ್ಶನವಾಗುತ್ತಿದ್ದರೂ, ಜನರು ಈ ಚಿತ್ರಕ್ಕೆ ಹೆಚ್ಚು ಒಲವು ತೋರುತ್ತಿದ್ದಾರೆ. ಇದರೊಂದಿಗೆ ಅಡಿವಿ ಶೇಷ್ ನಟನೆಯ ‘ಮೇಜರ್’ ಚಿತ್ರವೂ ಜನರ ಮನಗೆದ್ದಿದೆ. ಇದರ ಗಳಿಕೆ ದಿನದಿಂದ ದಿನಕ್ಕೆ ಏರುತ್ತಿದೆ. ಕಾರ್ತಿಕ್ ಆರ್ಯನ್ ನಟನೆಯ ‘ಭೂಲ್ ಭುಲಯ್ಯ 2’ ಕೂಡ ಕಳೆದ ಕೆಲವು ವಾರದಿಂದ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಚಿತ್ರಗಳ ನಡುವೆ ‘ಸಾಮ್ರಾಟ್ ಪೃಥ್ವಿರಾಜ್’ಗೆ ಜನರು ವಿಶೇಷ ಆಸಕ್ತಿ ತೋರಿಸದೇ ಇರುವುದು ಚಿತ್ರತಂಡಕ್ಕೆ ಹಿನ್ನಡೆಯಾಗುತ್ತಿದೆ.

ಇದನ್ನೂ ಓದಿ
Tamannaah Bhatia: ತೆಲುಗಿನಲ್ಲಿ ‘ನಿಧಿಮಾ‘ ಆಗಿ ಕಾಣಿಸಿಕೊಳ್ಳುತ್ತಿರುವ ತಮನ್ನಾ ಭಾಟಿಯಾ; ನಟಿಯ ಅಂದದ ಫೋಟೋಗಳು ಇಲ್ಲಿವೆ
Salman Khan: ಬಾಲಿವುಡ್​ ಚಿತ್ರಗಳ ಸೋಲಿನ ಬೆನ್ನಲ್ಲೇ ತಮ್ಮ ಮುಂದಿನ ಚಿತ್ರದ ಬಗ್ಗೆ ಮಹತ್ವದ ನಿರ್ಧಾರ ತಳೆದ್ರಾ ಸಲ್ಮಾನ್ ಖಾನ್?
Ekta Kapoor Birthday: ಏಕ್ತಾ ಕಪೂರ್ ನಿರ್ಮಾಣ ಮಾಡಿರೋ ಈ ಚಿತ್ರಗಳನ್ನು ವೀಕ್ಷಿಸಿದ್ದೀರಾ? ಮಿಸ್ ಮಾಡಲೇಬೇಡಿ
ಎರಡು ಶೇಡ್​ ಪಾತ್ರದಲ್ಲಿ ಸಾಯಿ ಪಲ್ಲವಿ; ನಿರೀಕ್ಷೆ ಮೂಡಿಸಿದ ‘ವಿರಾಟ ಪರ್ವಂ’ ಸಿನಿಮಾ

‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರದಲ್ಲಿ ಸಂಜಯ್ ದತ್, ಸೋನು ಸೂದ್ ಮೊದಲಾದವರು ನಟಿಸಿದ್ದಾರೆ. ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಈ ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ. ಯಶ್​ ರಾಜ್ ಫಿಲ್ಮ್ಸ್ ನಿರ್ಮಾಣ ಮಾಡಿರುವ ಈ ಚಿತ್ರ, ಸುಮಾರು 300 ಕೋಟಿ ರೂ ವೆಚ್ಚದಲ್ಲಿ ತಯಾರಾಗಿದೆ ಎಂದು ವರದಿಗಳು ಹೇಳಿವೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ