ಎಷ್ಟೇ ಪ್ರಚಾರ ಮಾಡಿದ್ರೂ ಮಂಕಾಗಿದೆ ‘ಸಾಮ್ರಾಟ್​ ಪೃಥ್ವಿರಾಜ್​’ ಕಲೆಕ್ಷನ್​; 2ನೇ ದಿನದ ಗಳಿಕೆ ಎಷ್ಟು?

| Updated By: ಮದನ್​ ಕುಮಾರ್​

Updated on: Jun 05, 2022 | 2:39 PM

Samrat Prithviraj Collection: ದೇಶಭಕ್ತಿ ಕಥಾಹಂದರ ಹೊಂದಿರುವ ‘ಸಾಮ್ರಾಟ್​ ಪೃಥ್ವಿರಾಜ್​’ ಸಿನಿಮಾಗೆ ಭರ್ಜರಿ ಪ್ರಚಾರ ನೀಡಲಾಗಿದೆ. ಆದರೂ ಸಹ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬರುತ್ತಿಲ್ಲ.

ಎಷ್ಟೇ ಪ್ರಚಾರ ಮಾಡಿದ್ರೂ ಮಂಕಾಗಿದೆ ‘ಸಾಮ್ರಾಟ್​ ಪೃಥ್ವಿರಾಜ್​’ ಕಲೆಕ್ಷನ್​; 2ನೇ ದಿನದ ಗಳಿಕೆ ಎಷ್ಟು?
ಅಕ್ಷಯ್ ಕುಮಾರ್
Follow us on

ಬಣ್ಣದ ಲೋಕ ಒಂದು ಮಾಯೆ. ಯಾವ ಸಿನಿಮಾ ಗೆಲ್ಲುತ್ತದೆ, ಯಾವ ಸಿನಿಮಾ ಸೋಲುತ್ತದೆ ಎಂಬುದನ್ನು ಊಹಿಸುವುದು ಕಷ್ಟ. ಸ್ಟಾರ್ ನಟ ಅಕ್ಷಯ್​ ಕುಮಾರ್ (Akshay Kumar) ಅಭಿನಯದ ‘ಸಾಮ್ರಾಟ್​ ಪೃಥ್ವಿರಾಜ್​’ ಸಿನಿಮಾ (Samrat Prithviraj) ವಿಚಾರದಲ್ಲೂ ಹಾಗೆಯೇ ಆಗಿದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಕಲೆಕ್ಷನ್​ ಮಾಡಲಿದೆ ಎಂದೇ ಊಹಿಸಲಾಗಿತ್ತು. ಆದರೆ ಆಗುತ್ತಿರುವುದೇ ಬೇರೆ. ದೊಡ್ಡ ಬಜೆಟ್​ನಲ್ಲಿ ನಿರ್ಮಾಣವಾದ ಈ ಸಿನಿಮಾ ಅಂದುಕೊಂಡ ಮಟ್ಟದಲ್ಲಿ ಕಮಾಯಿ ಮಾಡುವಲ್ಲಿ ವಿಫಲವಾಗಿದೆ. ಮೊದಲ ದಿನವಾದ ಜೂನ್​ 3ರಂದು 10.70 ಕೋಟಿ ರೂಪಾಯಿ ಕಲೆಕ್ಷನ್​ ಆಯಿತು. ಎರಡನೇ ದಿನ ಗಳಿಕೆ ಗಣನೀಯವಾಗಿ ಹೆಚ್ಚಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೇವಲ 12.60 ಕೋಟಿ ರೂಪಾಯಿ ಮಾತ್ರ ಕಲೆಕ್ಷನ್​ (Box Office Collection) ಆಗಿದೆ. ಅಕ್ಷಯ್​ ಕುಮಾರ್​ ರೀತಿಯ ಸ್ಟಾರ್​ ನಟನ ಚಿತ್ರಕ್ಕೆ ಇದು ಹೇಳಿಕೊಳ್ಳುವಂತಹ ಮೊತ್ತ ಅಲ್ಲ ಎಂಬುದು ಟ್ರೇಡ್​ ಅನಲಿಸ್ಟ್​ಗಳ ಅಭಿಪ್ರಾಯ.

ದೇಶಭಕ್ತಿ ಕಥಾಹಂದರ ಹೊಂದಿರುವ ‘ಸಾಮ್ರಾಟ್​ ಪೃಥ್ವಿರಾಜ್​’ ಸಿನಿಮಾಗೆ ಭರ್ಜರಿ ಪ್ರಚಾರ ನೀಡಲಾಗಿದೆ. ಕೇಂದ್ರ ಗೃಹ ಮಂತ್ರಿ ಅಮಿತ್​ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಸೇರಿದಂತೆ ಅನೇಕರು ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಹಾಗಿದ್ದರೂ ಕೂಡ ಜನರು ನಿರೀಕ್ಷಿತ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬರುತ್ತಿಲ್ಲ.

ಇದನ್ನೂ ಓದಿ: ‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರ ನೋಡಿ ಪತ್ನಿ ಎದುರು ಅಕ್ಷಯ್​ ಕುಮಾರ್​ ರೀತಿ ಡೈಲಾಗ್​ ಹೊಡೆದ ಅಮಿತ್​ ಶಾ

ಇತ್ತೀಚಿನ ದಿನಗಳಲ್ಲಿ ಅಕ್ಷಯ್​ ಕುಮಾರ್ ಅವರ ಇಮೇಜ್​ಗೆ ಕೊಂಚ ಧಕ್ಕೆ ಆಗಿದೆ. ವಿಮಲ್​ ಜಾಹೀರಾತಿನಲ್ಲಿ ಕಾಣಿಸಿಕೊಂಡ ಬಳಿಕ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡಲಾಗಿತ್ತು. ಅಲ್ಲದೇ ಅವರು ಈ ಹಿಂದೆ ನೀಡಿದ್ದ ಕೆಲವು ಕೇಳಿಕೆಗಳನ್ನು ಇಟ್ಟುಕೊಂಡು ಕೂಡ ಈ ಟೀಕೆ ಮಾಡಲಾಗುತ್ತಿದೆ. ‘ಸಾಮ್ರಾಟ್​​ ಪೃಥ್ವಿರಾಜ್​’ ಸಿನಿಮಾದಲ್ಲಿ ನಾಯಕ-ನಾಯಕಿ ನಡುವೆ ವಯಸ್ಸಿನ ಅಂತರ ಹೆಚ್ಚಿದೆ ಎಂಬ ಕಾರಣದಿಂದಲೂ ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ. ಈ ಎಲ್ಲದರ ಪರಿಣಾಮದಿಂದಲೂ ‘ಸಾಮ್ರಾಟ್​ ಪೃಥ್ವಿರಾಜ್’ ಸಿನಿಮಾಗೆ ಹಿನ್ನೆಡೆ ಆಗಿರಬಹುದು.

ಇದನ್ನೂ ಓದಿ: ಬಾಚಣಿಗೆಯಿಂದ ಹಲ್ಲು ಕೆರೆದುಕೊಂಡ ಅಕ್ಷಯ್​ ಕುಮಾರ್​; ಇದು ಗುಟ್ಕಾ ಎಫೆಕ್ಟ್​ ಎಂದ ನೆಟ್ಟಿಗರು

ಭಾನುವಾರ (ಜೂನ್​ 5) ಕಲೆಕ್ಷನ್​ನಲ್ಲಿ ಗಮನಾರ್ಹವಾಗಿ ಏರಿಕೆ ಆಗಲೇ ಬೇಕಿದೆ. ಇಲ್ಲದಿದ್ದರೆ ಈ ಸಿನಿಮಾದ ಲೈಫ್​ ಟೈಮ್​ ಗಳಿಕೆ ಕುಸಿಯಲಿದೆ. ದಕ್ಷಿಣ ಭಾರತದಲ್ಲಿ ಈ ಚಿತ್ರಕ್ಕೆ ‘ವಿಕ್ರಮ್​’ ಸಿನಿಮಾ ಭರ್ಜರಿ ಪೈಪೋಟಿ ನೀಡುತ್ತಿದೆ. ಅತ್ತ, ಬಾಲಿವುಡ್​ನಲ್ಲಿ ‘ಭೂಲ್​ ಭುಲಯ್ಯ 2’ ಸಿನಿಮಾ ಕೂಡ ಅನೇಕ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅದು ಕೂಡ ‘ಸಾಮ್ರಾಟ್​ ಪೃಥ್ವಿರಾಜ್’ ಕಲೆಕ್ಷನ್​ ತಗ್ಗಲು ಕಾರಣ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Published On - 2:39 pm, Sun, 5 June 22