‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರ ನೋಡಿ ಪತ್ನಿ ಎದುರು ಅಕ್ಷಯ್​ ಕುಮಾರ್​ ರೀತಿ ಡೈಲಾಗ್​ ಹೊಡೆದ ಅಮಿತ್​ ಶಾ

Amit Shah | Samrat Prithviraj: ಅಮಿತ್​ ಶಾ ಅವರಿಗೆ ‘ಸಾಮ್ರಾಟ್​ ಪೃಥ್ವಿರಾಜ್​’ ಸಿನಿಮಾ ಇಷ್ಟ ಆಗಿದೆ. ಚಿತ್ರ ನೋಡಿದ ‘ನಮ್ಮ ಕುಟುಂಬಕ್ಕೆ ಇದು ಸ್ಪೆಷಲ್​ ದಿನ’ ಎಂದು ಅವರು ಹೇಳಿದ್ದಾರೆ.

‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರ ನೋಡಿ ಪತ್ನಿ ಎದುರು ಅಕ್ಷಯ್​ ಕುಮಾರ್​ ರೀತಿ ಡೈಲಾಗ್​ ಹೊಡೆದ ಅಮಿತ್​ ಶಾ
ಅಕ್ಷಯ್​ ಕುಮಾರ್​, ಸೋನಲ್​ ಶಾ. ಅಮಿತ್​ ಶಾ
Follow us
TV9 Web
| Updated By: ಮದನ್​ ಕುಮಾರ್​

Updated on:Jun 02, 2022 | 1:38 PM

ಅಕ್ಷಯ್​ ಕುಮಾರ್​ (Akshay Kumar) ಅಭಿನಯದ ‘ಸಾಮ್ರಾಟ್​ ಪೃಥ್ವಿರಾಜ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರ ನೋಡಲು ಅವರ ಅಭಿಮಾನಿಗಳು ಕಾದಿದ್ದಾರೆ. ಜೂನ್​ 3ರಂದು ವಿಶ್ವಾದ್ಯಂತ ಈ ಸಿನಿಮಾ ತೆರೆಕಾಣಲಿದೆ. ಅದಕ್ಕೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ‘ಸಾಮ್ರಾಟ್​ ಪೃಥ್ವಿರಾಜ್​’ (Samrat Prithviraj) ಚಿತ್ರವನ್ನು ವೀಕ್ಷಿಸಿದ್ದಾರೆ. ದೆಹಲಿಯಲ್ಲಿ ಗಣ್ಯರಿಗಾಗಿ ಬುಧವಾರ (ಜೂನ್​ 1) ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ತಮ್ಮ ಎಂದಿನ ರಾಜಕೀಯ ಕೆಲಸಗಳಿಗೆ ಬಿಡುವು ನೀಡಿದ್ದ ಅಮಿತ್​ ಶಾ ಅವರು ಈ ಸಿನಿಮಾವನ್ನು ನೋಡಿ ಎಂಜಾಯ್​ ಮಾಡಿದರು. ಅವರ ಜೊತೆಗೆ ಕುಟುಂಬದ ಸದಸ್ಯರು ಕೂಡ ಹಾಜರಾಗಿದ್ದರು. ಸಿನಿಮಾ ನೋಡಿದ ಬಳಿಕ ತಮ್ಮ ಅನಿಸಿಕೆ ಹಂಚಿಕೊಂಡರು. ಅಲ್ಲದೇ, ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಅವರು ನಾಯಕಿ ಮಾನುಶಿ ಚಿಲ್ಲರ್​ಗೆ ಹೇಳಿದ ಡೈಲಾಗ್​ ಅನ್ನು ತಮ್ಮ ಪತ್ನಿಗೆ ಹೇಳುವ ಮೂಲಕ ಅಮಿತ್​ ಶಾ (Amit Shah) ಎಲ್ಲರ ಗಮನ ಸೆಳೆದರು. ಆ ಕುರಿತು ಇಲ್ಲಿದೆ ಮಾಹಿತಿ..

ದೇಶ ಭಕ್ತಿ ಕಥಾಹಂದರ ಇರುವ ಸಿನಿಮಾಗಳನ್ನು ಮಾಡುವಲ್ಲಿ ಅಕ್ಷಯ್​ ಕುಮಾರ್​ ಫೇಮಸ್​. ಈ ಬಾರಿ ‘ಸಾಮ್ರಾಟ್​ ಪೃಥ್ವಿರಾಜ್​’ ಸಿನಿಮಾದಲ್ಲಿಯೂ ಅವರು ಅಂಥದ್ದೇ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಐತಿಹಾಸಿಕ ಕಥೆ ಇರುವ ಈ ಚಿತ್ರವನ್ನು ನೋಡಿ ಅಮಿತ್​ ಶಾ ಮೆಚ್ಚಿಕೊಂಡಿದ್ದಾರೆ. ‘ಸುಮಾರು 13 ವರ್ಷಗಳ ಬಳಿಕ ನಾನು ನನ್ನ ಕುಟುಂಬದವರ ಜೊತೆ ಕುಳಿತು ಸಿನಿಮಾ ನೋಡಿದೆ. ಸಿನಿಮಾದ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಥಿಯೇಟರ್​ನ ಕೊನೇ ಸಾಲಿನಲ್ಲಿ ನಾವು ಕುಳಿತಿದ್ದೆವು. ನಮ್ಮ ಕುಟುಂಬಕ್ಕೆ ಇದು ಸ್ಪೆಷಲ್​ ದಿನ’ ಎಂದು ಅಮಿತ್​ ಶಾ ಹೇಳಿದ್ದಾರೆ.

‘ಸಾಮ್ರಾಟ್​ ಪೃಥ್ವಿರಾಜ್​’ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಅವರು ‘ಚಲಿಯೇ ಹುಕುಂ’ ಎಂದು ನಾಯಕಿಗೆ ಡೈಲಾಗ್​ ಹೊಡೆಯುತ್ತಾರೆ. ಈ ಸಿನಿಮಾದ ವಿಶೇಷ ಪ್ರದರ್ಶನದ ಬಳಿಕ ಮಾತನಾಡಿ ಮುಗಿಸಿದ ಅಮಿತ್​ ಶಾ ಕೂಡ ತಮ್ಮ ಪತ್ನಿ ಸೋನಲ್​ ಶಾ ಕಡೆಗೆ ನೋಡುತ್ತಾ ‘ಚಲಿಯೇ ಹುಕುಂ’ ಎಂದು ಹೇಳಿದರು. ಆಗ ಸೋನಲ್​ ಅವರು ನಗು ಚೆಲ್ಲಿದರು. ಅಲ್ಲಿದ್ದ ಇತರರು ಕೂಡ ನಕ್ಕರು.

ಇದನ್ನೂ ಓದಿ
Image
ಬಾಚಣಿಗೆಯಿಂದ ಹಲ್ಲು ಕೆರೆದುಕೊಂಡ ಅಕ್ಷಯ್​ ಕುಮಾರ್​; ಇದು ಗುಟ್ಕಾ ಎಫೆಕ್ಟ್​ ಎಂದ ನೆಟ್ಟಿಗರು
Image
ಅಜಯ್​ ದೇವಗನ್​ಗೆ ಅಕ್ಷಯ್​ ಕುಮಾರ್ ಬೆಂಬಲ; ‘ಗುಟ್ಕಾ ಗ್ಯಾಂಗ್​’ ಎಂದು ತಿರುಗೇಟು ನೀಡಿದ ನೆಟ್ಟಿಗರು
Image
ವಿಮಲ್​ ಜಾಹೀರಾತಿನಲ್ಲಿ ನಟಿಸಿದ ಅಕ್ಷಯ್​ ಕುಮಾರ್​ಗೆ ಜನರಿಂದ ಭಾರಿ ವಿರೋಧ; ಕ್ಷಮೆ ಕೇಳಿ ಹಿಂದೆ ಸರಿದ ನಟ
Image
ಸೌದಿ ಮಿನಿಸ್ಟರ್​ ಜೊತೆ ಶಾರುಖ್​, ಸಲ್ಮಾನ್​​, ಅಕ್ಷಯ್​ ಕುಮಾರ್​ ಪೋಸ್; ಏನಿದು ಸಮಾಚಾರ?

‘ಇತಿಹಾಸದ ವಿದ್ಯಾರ್ಥಿ ಆದ ನಾನು ಈ ಸಿನಿಮಾ ನೋಡಿ ಕೇವಲ ಎಂಜಾಯ್​ ಮಾಡಲಿಲ್ಲ. ಭಾರತೀಯರಿಗೆ ಈ ಚಿತ್ರ ಎಷ್ಟು ಮುಖ್ಯ ಎಂಬುದನ್ನು ಕೂಡ ಅರ್ಥ ಮಾಡಿಕೊಂಡೆ’ ಎಂದು ಅಮಿತ್​ ಶಾ ಹೇಳಿದ್ದಾರೆ. ಈ ಎಲ್ಲ ಕಾರಣಗಳಿಂದ ‘ಸಾಮ್ರಾಟ್​ ಪೃಥ್ವಿರಾಜ್​’ ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:38 pm, Thu, 2 June 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ