AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yogi Adityanath: ಅಕ್ಷಯ್​ ಕುಮಾರ್ ನಟನೆಯ ‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರಕ್ಕೆ ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯಿತಿ

Samrat Prithviraj | Tax Free: ಅಕ್ಷಯ್​ ಕುಮಾರ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಸಾಮ್ರಾಟ್​ ಪೃಥ್ವಿರಾಜ್’​ ಚಿತ್ರಕ್ಕೆ ಚಂದ್ರಪ್ರಕಾಶ್​ ದ್ವಿವೇದಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಯೋಗಿ ಆದಿತ್ಯನಾಥ್​ ಮೆಚ್ಚಿಕೊಂಡಿದ್ದಾರೆ.

Yogi Adityanath: ಅಕ್ಷಯ್​ ಕುಮಾರ್ ನಟನೆಯ ‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರಕ್ಕೆ ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯಿತಿ
ಯೋಗಿ ಆದಿತ್ಯನಾಥ್, ಅಕ್ಷಯ್ ಕುಮಾರ್
TV9 Web
| Edited By: |

Updated on:Jun 02, 2022 | 4:48 PM

Share

ಬಿಡುಗಡೆಗೂ ಮನ್ನವೇ ‘ಸಾಮ್ರಾಟ್​ ಪೃಥ್ವಿರಾಜ್​’ (Samrat Prithviraj) ಸಿನಿಮಾ ಸಖತ್​ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಈಗೊಂದು ಬಂಪರ್​ ಕೊಡುಗೆ ನೀಡಲಾಗಿದೆ. ಉತ್ತರ ಪ್ರದೇಶದಲ್ಲಿ ‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಈ ಚಿತ್ರವನ್ನು ವೀಕ್ಷಿಸಿದ್ದಾರೆ. ಬಳಿಕ ಅವರು ಟ್ಯಾಕ್ಸ್​ ಫ್ರೀ ಆದೇಶ ಹೊರಡಿಸಿದ್ದಾರೆ. ಲಖನೌನಲ್ಲಿ ಅವರಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ (Akshay Kumar) ಅವರು ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಅವರಿಗೆ ಜೋಡಿಯಾಗಿ ಮಾನುಷಿ ಚಿಲ್ಲರ್​ ನಟಿಸಿದ್ದಾರೆ. ಬುಧವಾರ (ಜೂನ್​ 1) ‘ಸಾಮ್ರಾಟ್​ ಪೃಥ್ವಿರಾಜ್’​ ಸಿನಿಮಾವನ್ನು ಕೇಂದ್ರ ಗೃಹ ಸಚಿವ ಅಮಿತ್​ ಶಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಅದರ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಅವರು ಕೂಡ ಈ ಸಿನಿಮಾವನ್ನು ನೋಡಿದ್ದಾರೆ.

‘ಸಾಮ್ರಾಟ್​ ಪೃಥ್ವಿರಾಜ್’​ ಚಿತ್ರಕ್ಕೆ ಚಂದ್ರಪ್ರಕಾಶ್​ ದ್ವಿವೇದಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಯೋಗಿ ಆದಿತ್ಯನಾಥ್​ ಮೆಚ್ಚಿಕೊಂಡಿದ್ದಾರೆ. ಇಡೀ ತಂಡದ ಪ್ರಯತ್ನವನ್ನು ಅವರು ಹೊಗಳಿದ್ದಾರೆ. ‘ಅಕ್ಷಯ್​ ಕುಮಾರ್​ ಅವರು ಭಾರತದ ಇತಿಹಾಸವನ್ನು ಈ ಚಿತ್ರದಲ್ಲಿ ಚೆನ್ನಾಗಿ ತೋರಿಸಿದ್ದಾರೆ. ಹಾಗಾಗಿ ಈ ಚಿತ್ರತಂಡಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಯೋಗಿ ಆದಿತ್ಯನಾಥ್​ ಹೇಳಿದ್ದಾರೆ.

ಈ ಹಿಂದೆ ಕೂಡ ದೇಶಭಕ್ತಿ ಕಥಾಹಂದರ ಇರುವಂತಹ ಸಿನಿಮಾಗಳನ್ನು ಮಾಡಿ ಅಕ್ಷಯ್​ ಕುಮಾರ್ ಸೈ ಎನಿಸಿಕೊಂಡಿದ್ದರು. ಈ ಬಾರಿ ಅವರು ‘ಸಾಮ್ರಾಟ್​ ಪೃಥ್ವಿರಾಜ್​’ ಮೂಲಕ ಐತಿಹಾಸಿಕ ಕಥೆಯನ್ನು ಜನರ ಮುಂದಿರಿಸುತ್ತಿದ್ದಾರೆ. ಜೂನ್​ 3ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಸೋನು ಸೂದ್​, ಸಂಜಯ್​ ದತ್​ ಮುಂತಾದವರು ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣ ಆಗಿದೆ.

ಇದನ್ನೂ ಓದಿ
Image
‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರ ನೋಡಿ ಪತ್ನಿ ಎದುರು ಅಕ್ಷಯ್​ ಕುಮಾರ್​ ರೀತಿ ಡೈಲಾಗ್​ ಹೊಡೆದ ಅಮಿತ್​ ಶಾ
Image
Samrat Prithviraj: ‘ಆರ್​​ಆರ್​ಆರ್​​’, ‘ಧಾಕಡ್​’ ಹಾದಿಯಲ್ಲಿ ‘ಸಾಮ್ರಾಟ್ ಪೃಥ್ವಿರಾಜ್’; ವಾರಾಣಸಿಯಲ್ಲಿ ಚಿತ್ರದ ಪ್ರಚಾರ
Image
Samrat Prithviraj: ಅಕ್ಷಯ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’ಗೆ ಹಿನ್ನಡೆ; ಈ ದೇಶಗಳಲ್ಲಿ ಚಿತ್ರ ಬ್ಯಾನ್​
Image
‘ಪೃಥ್ವಿರಾಜ್​’ ಸಿನಿಮಾ ಪ್ರಚಾರ ಕೆಲಸಗಳಲ್ಲಿ ಬ್ಯುಸಿ ಆದ ನಟಿ ಮಾನುಷಿ ಚಿಲ್ಲರ್​; ಇಲ್ಲಿವೆ ಫೋಟೋಗಳು  

ಇದನ್ನೂ ಓದಿ: ‘ಪೃಥ್ವಿರಾಜ್’ ಟ್ರೇಲರ್​ನಲ್ಲಿ ಮಿಂಚಿದ ಅಕ್ಷಯ್​ ಕುಮಾರ್; ಈ ಸಿನಿಮಾದಿಂದ ಚೇತರಿಸಿಕೊಳ್ಳಲಿದೆಯೇ ಬಾಲಿವುಡ್​?

‘ಸಾಮ್ರಾಟ್​ ಪೃಥ್ವಿರಾಜ್​’ ಬಗ್ಗೆ ಅಮಿತ್​ ಶಾ ಮೆಚ್ಚುಗೆ:

‘ಇತಿಹಾಸದ ವಿದ್ಯಾರ್ಥಿ ಆದ ನಾನು ಈ ಸಿನಿಮಾ ನೋಡಿ ಕೇವಲ ಎಂಜಾಯ್​ ಮಾಡಲಿಲ್ಲ. ಭಾರತೀಯರಿಗೆ ಈ ಚಿತ್ರ ಎಷ್ಟು ಮುಖ್ಯ ಎಂಬುದನ್ನು ಕೂಡ ಅರ್ಥ ಮಾಡಿಕೊಂಡೆ. ಸುಮಾರು 13 ವರ್ಷಗಳ ಬಳಿಕ ನಾನು ನನ್ನ ಕುಟುಂಬದವರ ಜೊತೆ ಕುಳಿತು ಸಿನಿಮಾ ನೋಡಿದೆ. ಸಿನಿಮಾದ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಥಿಯೇಟರ್​ನ ಕೊನೇ ಸಾಲಿನಲ್ಲಿ ನಾವು ಕುಳಿತಿದ್ದೆವು. ನಮ್ಮ ಕುಟುಂಬಕ್ಕೆ ಇದು ಸ್ಪೆಷಲ್​ ದಿನ’ ಎಂದು ಅಮಿತ್​ ಶಾ ಹೇಳಿದ್ದಾರೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:48 pm, Thu, 2 June 22

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್