‘ಸೆಲ್ಫೀ’ ಸೋತ ಬೆನ್ನಲ್ಲೇ ಅಕ್ಷಯ್ ಕುಮಾರ್​ಗೆ ಮತ್ತೊಂದು ಶಾಕ್; ಹೀಗೆ ಮುಂದುವರಿದ್ರೆ ಕಷ್ಟ ಇದೆ

|

Updated on: Feb 27, 2023 | 2:29 PM

ಅಕ್ಷಯ್ ಕುಮಾರ್ ಅವರಿಗೆ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಫ್ಯಾನ್ಸ್ ಇದ್ದಾರೆ. ಈ ಕಾರಣಕ್ಕೆ ವಿದೇಶದಲ್ಲಿ ಒಂದು ಕಾರ್ಯಕ್ರಮ ಆಯೋಜನೆ ಮಾಡಲು ಪ್ಲ್ಯಾನ್ ರೂಪಿಸಲಾಗಿತ್ತು.

‘ಸೆಲ್ಫೀ’ ಸೋತ ಬೆನ್ನಲ್ಲೇ ಅಕ್ಷಯ್ ಕುಮಾರ್​ಗೆ ಮತ್ತೊಂದು ಶಾಕ್; ಹೀಗೆ ಮುಂದುವರಿದ್ರೆ ಕಷ್ಟ ಇದೆ
ಅಕ್ಷಯ್ ಕುಮಾರ್
Follow us on

ಅಕ್ಷಯ್ ಕುಮಾರ್ (Akshay Kumar) ಅವರಿಗೆ ಸೋಲು ಹೊಸತಲ್ಲ. ಈ ಮೊದಲು ಸಾಲು ಸಾಲು ಸೋಲುಗಳನ್ನು ಕಂಡ ಅವರು ನಂತರ ಚೇತರಿಕೆ ಕಂಡರು. ಸಾಲುಸಾಲು 14 ಫ್ಲಾಪ್​​ಗಳನ್ನು ನೀಡಿದ ಕುಖ್ಯಾತಿ ಅವರಿಗೆ ಸಲ್ಲಿಕೆ ಆಗುತ್ತದೆ. ಈಗ ಮತ್ತೆ ಅದೇ ಘಟನೆ ಮರುಕಳಿಸುವ ಸೂಚನೆ ಸಿಕ್ಕಿದೆ. ನಿರಂತರವಾಗಿ ರಿಮೇಕ್ ಮೊರೆ ಹೋಗುತ್ತಿರುವ ಅವರಿಗೆ ಸೋಲುಗಳು ಎದುರಾಗುತ್ತಿವೆ. ‘ಸೆಲ್ಫೀ’ ಸಿನಿಮಾ (Selfiee Movie) ಮೂರು ದಿನಕ್ಕೆ ಗಳಿಕೆ ಮಾಡಿದ್ದು ಕೇವಲ 10 ಕೋಟಿ ರೂಪಾಯಿ. ಅಕ್ಷಯ್ ಕುಮಾರ್ ಅವರಂತಹ ಸ್ಟಾರ್ ನಟನ ಚಿತ್ರಕ್ಕೆ ಈ ಕಲೆಕ್ಷನ್ ಯಾವ ಮೂಲೆಗೂ ಸಾಲುವುದಿಲ್ಲ.

ಅಕ್ಷಯ್ ಕುಮಾರ್​ಗೆ ಶಾಕ್

ಅಕ್ಷಯ್ ಕುಮಾರ್ ಅವರಿಗೆ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಫ್ಯಾನ್ಸ್ ಇದ್ದಾರೆ. ಈ ಕಾರಣಕ್ಕೆ ವಿದೇಶದಲ್ಲಿ ಒಂದು ಕಾರ್ಯಕ್ರಮ ಆಯೋಜನೆ ಮಾಡಲು ಪ್ಲ್ಯಾನ್ ರೂಪಿಸಲಾಗಿದೆ. ಇದಕ್ಕೆ ‘ದಿ ಎಂಟರ್​ಟೇನರ್ಸ್​’ ಎಂದು ಹೆಸರು ಇಡಲಾಗಿದೆ. ಐದು ಕಡೆಗಳಲ್ಲಿ ಶೋ ಆಯೋಜನೆ ಮಾಡಲಾಗಿದೆ. ಅಕ್ಷಯ್ ಕುಮಾರ್ ಜೊತೆ ನೋರಾ ಫತೇಹಿ, ದಿಶಾ ಪಟಾಣಿ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ. ಆದರೆ, ಈಗ ಮೊದಲ ಶೋ ಕ್ಯಾನ್ಸಲ್ ಆಗಿದೆ.

ಈ ಕಾರ್ಯಕ್ರಮದ ಪ್ರಮೋಟರ್ ಅಮಿತ್ ಜೇಟ್ಲಿ ಪ್ರಕಾರ, ನ್ಯೂ ಜೆರ್ಸಿಯಲ್ಲಿ ಮಾರ್ಚ್​ 4ರಂದು ‘ದಿ ಎಂಟರ್​ಟೇನರ್’ ಕಾರ್ಯಕ್ರಮ ಆಯೋಜನೆಗೊಳ್ಳಬೇಕಿತ್ತು. ಆದರೆ, ಟಿಕೆಟ್​ ಸೇಲ್ ಆಗದ ಕಾರಣ ಶೋ ಕ್ಯಾನ್ಸಲ್ ಆಗಿದೆ. ಇದಲ್ಲದೆ, ಇನ್ನೂ ಕೆಲವು ಕಡೆಗಳಲ್ಲಿ ಈ ಕಾರ್ಯಕ್ರಮ ಇದೆ. ಅಲ್ಲಿ ಟಿಕೆಟ್ ಮಾರಾಟ ಆಗದೆ ಇದ್ದರೆ ಅಲ್ಲಿಯ ಶೋಗಳು ಕ್ಯಾನ್ಸಲ್ ಆಗಲಿದೆ. ಇದರಿಂದ ಅಕ್ಷಯ್ ಜನಪ್ರಿಯತೆ ಕಡಿಮೆ ಆಗುತ್ತಿದೆಯೇ ಎನ್ನುವ ಅನುಮಾನ ಮೂಡಿದೆ.

ಇದನ್ನೂ ಓದಿ
Salman Khan: ಶ್ರೀಮಂತರ ಮದುವೆಯಲ್ಲಿ ಡ್ಯಾನ್ಸ್​ ಮಾಡಿದ ಅಕ್ಷಯ್​, ಸಲ್ಲು: ಇದಕ್ಕಾಗಿ ಪಡೆದ ಹಣ ಎಷ್ಟು?
Lionel Messi Biopic: ‘ಲಿಯೋನೆಲ್‌ ಮೆಸ್ಸಿ ಬಯೋಪಿಕ್​ನಲ್ಲಿ ಅಕ್ಷಯ್​ ಕುಮಾರ್​ ನಟಿಸಬೇಕು’; ಮೀಮ್ಸ್​ ವೈರಲ್​
Akshay Kumar: ಛತ್ರಪತಿ ಶಿವಾಜಿ ಪಾತ್ರ ಮಾಡಲು ಹೋಗಿ ಟ್ರೋಲ್​ ಆದ ಅಕ್ಷಯ್​ ಕುಮಾರ್​; ಇಲ್ಲಿದೆ ಕಾರಣ
Akshay Kumar: ಸತತ ಸೋಲಿನ ಬಳಿಕ ಲೈಂಗಿಕ ಶಿಕ್ಷಣದ ಬಗ್ಗೆ ಸಿನಿಮಾ ಮಾಡಲು ಮುಂದಾದ ನಟ ಅಕ್ಷಯ್​ ಕುಮಾರ್​

ಮಕಾಡೆ ಮಲಗಿದ ‘ಸೆಲ್ಫೀ’

‘ಸೆಲ್ಫೀ’ ಸಿನಿಮಾ ಮಕಾಡೆ ಮಲಗಿದೆ. ಈ ಸಿನಿಮಾ ಶುಕ್ರವಾರ (ಫೆಬ್ರವರಿ 24) 2.55 ಕೋಟಿ ರೂಪಾಯಿ, ಶನಿವಾರ (ಫೆಬ್ರವರಿ 25) 3.80 ಕೋಟಿ ರೂಪಾಯಿ ಹಾಗೂ ಭಾನುವಾರ (ಫೆಬ್ರವರಿ 26) 3.90 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 10 ಕೋಟಿ ರೂಪಾಯಿ ಆಗಿದೆ. ಅಕ್ಷಯ್ ವೃತ್ತಿಜೀವನದ ಅತೀ ಕೆಟ್ಟ ಸಿನಿಮಾ ಎನ್ನುವ ಕುಖ್ಯಾತಿ ‘ಸೆಲ್ಫೀ’ಗೆ ಸಿಕ್ಕಿದೆ.

ಹೀಗೆ ಆದರೆ ಕಷ್ಟವಿದೆ

ಅಕ್ಷಯ್ ಕುಮಾರ್ ಅವರು ಸಿನಿಮಾ ಆಯ್ಕೆಯಲ್ಲಿ ಹೆಚ್ಚು ಕಾಳಜಿವಹಿಸಬೇಕಿದೆ. ಸಿನಿಮಾ ಆಯ್ಕೆಯಲ್ಲಿ ಅವರು ಹೆಚ್ಚು ಎಚ್ಚರವಹಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಅವರ ವೃತ್ತಿಜೀವನ ಮತ್ತಷ್ಟು ಕಷ್ಟಕರವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ