ಬೈಕಾಟ್​ ಗ್ಯಾಂಗ್​ನ ತಮ್ಮ ಸಿನಿಮಾದಲ್ಲೇ ಟ್ರೋಲ್ ಮಾಡಿದ ಅಕ್ಷಯ್ ಕುಮಾರ್; ಇಲ್ಲಿದೆ ವಿಡಿಯೋ

Akshay Kumar: ಅಕ್ಷಯ್ ಕುಮಾರ್ ಸದಾ ವಿವಾದಗಳಿಂದ ದೂರ ಇರೋಕೆ ಪ್ರಯತ್ನಿಸುತ್ತಾರೆ. ದೇಶಭಕ್ತಿ ಸಿನಿಮಾಗಳನ್ನು ಮಾಡುವ ಮೂಲಕ ಅವರು ಹೆಚ್ಚು ಗಮನ ಸೆಳೆಯುತ್ತಿದ್ದಾರೆ.

ಬೈಕಾಟ್​ ಗ್ಯಾಂಗ್​ನ ತಮ್ಮ ಸಿನಿಮಾದಲ್ಲೇ ಟ್ರೋಲ್ ಮಾಡಿದ ಅಕ್ಷಯ್ ಕುಮಾರ್; ಇಲ್ಲಿದೆ ವಿಡಿಯೋ
ಅಕ್ಷಯ್ ಕುಮಾರ್

Updated on: Feb 16, 2023 | 10:11 AM

ಅಕ್ಷಯ್ ಕುಮಾರ್ (Akshay Kumar) ಅವರಿಂದ ಹಿಡಿದು ಅನೇಕ ಬಾಲಿವುಡ್ ಹೀರೋಗಳಿಗೆ, ಅವರು ನಟಿಸಿದ ಸಿನಿಮಾಗಳಿಗೆ ಬೈಕಾಟ್ ಬಿಸಿ ತಟ್ಟಿದೆ. ಬೈಕಾಟ್ ಟ್ರೆಂಡ್ ನಡುವೆಯೂ ಆಲಿಯಾ ಭಟ್ (Alia Bhatt) , ಶಾರುಖ್​ ಖಾನ್ ಸೇರಿ ಕೆಲವೇ ಕೆಲವರ ಸಿನಿಮಾಗಳು ಗೆದ್ದಿವೆ. ಈಗ ಅಕ್ಷಯ್ ಕುಮಾರ್ ಅವರ ಹೊಸ ಸಿನಿಮಾ ‘ಸೆಲ್ಫಿ’ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದಲ್ಲಿ ಬೈಕಾಟ್ ಗ್ಯಾಂಗ್​ನ ಟ್ರೋಲ್ ಮಾಡಲಾಗಿದೆ. ಈ ಕುರಿತು ಅಕ್ಷಯ್​ ಕುಮಾರ್ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ.

ಅಕ್ಷಯ್ ಕುಮಾರ್ ಸದಾ ವಿವಾದಗಳಿಂದ ದೂರ ಇರೋಕೆ ಪ್ರಯತ್ನಿಸುತ್ತಾರೆ. ದೇಶಭಕ್ತಿ ಸಿನಿಮಾಗಳನ್ನು ಮಾಡುವ ಮೂಲಕ ಅವರು ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಆದರೆ, ಅವರು ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸುವ ನಿರ್ಧಾರ ತೆಗೆದುಕೊಂಡಾಗಿನಿಂದ ಸಾಕಷ್ಟು ವಿರೋಧ ಕಟ್ಟಿಕೊಂಡಿದ್ದಾರೆ. ವಿರೋಧ ಮಿತಿಮೀರಿದ್ದರಿಂದ ಅವರು ಈ ಜಾಹೀರಾತಿನಿಂದ ಹೊರ ಬಂದಿದ್ದಾರೆ. ಆದಾಗ್ಯೂ ಅವರಿಗೆ ಎದುರಾಗುತ್ತಿರುವ ವಿರೋಧ ನಿಂತಿಲ್ಲ. ಅವರ ಅನೇಕ ಸಿನಿಮಾಗಳು ಸೋತಿವೆ. ಈಗ ಅಕ್ಷಯ್ ಕುಮಾರ್ ಅವರು ‘ಸೆಲ್ಫಿ’ ಸಿನಿಮಾ ಮೂಲಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಈ ಚಿತ್ರದ ಒಂದು ಕ್ಲಿಪ್ ವೈರಲ್ ಆಗಿದೆ.

ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಸೂಪರ್​ಸ್ಟಾರ್​​ನ ಪಾತ್ರ ಮಾಡುತ್ತಿದ್ದಾರೆ. ಇಮ್ರಾನ್ ಹಷ್ಮಿ ಆರ್​ಟಿಒ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಇಮ್ರಾನ್ ಹಷ್ಮಿ ಜತೆ ಅಕ್ಷಯ್ ಕುಮಾರ್ ನಡೆದುಕೊಳ್ಳುವ ರೀತಿಗೆ ಅನೇಕ ಕಡೆಗಳಿಂದ ವಿರೋಧ ವ್ಯಕ್ತವಾಗುತ್ತದೆ. ‘ಬೈಕಾಟ್ ಬಾಲಿವುಡ್​’ ಟ್ರೆಂಡ್ ಶುರುವಾಗುತ್ತದೆ. ಇದಕ್ಕೆ ಸಿನಿಮಾದ ನಿರ್ಮಾಪಕರು ಅಸಮಾಧಾನ ಹೊರಹಾಕುತ್ತಾರೆ. ಇದಿಷ್ಟು ವಿಡಿಯೋದಲ್ಲಿದೆ.

ಇದನ್ನೂ ಓದಿ
100 ಕೋಟಿ ರೂ. ಸಂಭಾವನೆ ಪಡೆಯುವ ಬಗ್ಗೆ ನಟ ಅಕ್ಷಯ್ ಕುಮಾರ್​​ ಅಭಿಪ್ರಾಯ ಏನು?
Akshay Kumar: ಖ್ಯಾತ ನಿರ್ಮಾಪಕನ ಚಿತ್ರದಿಂದ ಅಕ್ಷಯ್ ಕುಮಾರ್ ಔಟ್​; ಕೈತಪ್ಪಿತು ದೊಡ್ಡ ಬಜೆಟ್ ಸಿನಿಮಾ
Akshay Kumar: ಛತ್ರಪತಿ ಶಿವಾಜಿ ಪಾತ್ರದಲ್ಲಿ ಅಕ್ಷಯ್ ಕುಮಾರ್​; ಮರಾಠಿ ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆ

20 ಸೆಕೆಂಡ್​ನ ಕ್ಲಿಪ್ ಸಾಕಷ್ಟು ವೈರಲ್ ಆಗಿದೆ. ಅಕ್ಷಯ್ ಕುಮಾರ್ ಅಭಿಮಾನಿಗಳಿಗೆ ಈ ವಿಡಿಯೋ ಇಷ್ಟ ಆಗಿದೆ. ಅನೇಕರು ಇದಕ್ಕೆ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಈ ಕ್ಲಿಪ್ ನೋಡಿದಮೇಲೆ ಬೈಕಾಟ್ ಗ್ಯಾಂಗ್​ನವರು ಸುಮ್ಮನಿರಬಹುದೇ’ ಎಂದು ಅಕ್ಷಯ್ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ‘ಸಿನಿಮಾದಲ್ಲಿ ಸಾಕಷ್ಟು ಕಾಮಿಡಿ ಇದೆ ಅನ್ನೋದು ತಿಳಿಯುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 100 ಕೋಟಿ ರೂ. ಸಂಭಾವನೆ ಪಡೆಯುವ ಬಗ್ಗೆ ನಟ ಅಕ್ಷಯ್ ಕುಮಾರ್​​ ಅಭಿಪ್ರಾಯ ಏನು?

ಅಕ್ಷಯ್ ಕುಮಾರ್ ಹಾಗೂ ಇಮ್ರಾನ್ ಹಷ್ಮಿ ಒಟ್ಟಾಗಿ ನಟಿಸಿರುವ ‘ಸೆಲ್ಫಿ’ ಸಿನಿಮಾ ಫೆಬ್ರವರಿ 24ಕ್ಕೆ ರಿಲೀಸ್ ಆಗುತ್ತಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:03 am, Thu, 16 February 23