ಅಕ್ಷಯ್ ಹೇಗೆ ಅಷ್ಟು ಬೇಗ ಸಿನಿಮಾ ಮಾಡ್ತಾರೆ? ಅಜಯ್ ದೇವಗನ್ ಫನ್ನಿ ವಿವರಣೆ

ಅಕ್ಷಯ್ ಕುಮಾರ್ ವೇಗದ ಕೆಲಸದ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ವರ್ಷಕ್ಕೆ ಮೂರು ಅಥವಾ ಅದಕ್ಕಿಂತ ಹೆಚ್ಚು ಸಿನಿಮಾಗಳನ್ನು ಮಾಡುವ ಅವರ ಸಾಮರ್ಥ್ಯವನ್ನು ಹೊಂದಿದ್ದಾರೆ. ಅಜಯ್ ದೇವಗನ್ ಅವರು ಅಕ್ಷಯ್ ಕುಮಾರ್ ಬಗ್ಗೆ ಫನ್ ಆಗಿ ಮಾತನಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಅಕ್ಷಯ್ ಹೇಗೆ ಅಷ್ಟು ಬೇಗ ಸಿನಿಮಾ ಮಾಡ್ತಾರೆ? ಅಜಯ್ ದೇವಗನ್ ಫನ್ನಿ ವಿವರಣೆ
ಅಕ್ಷಯ್
Updated By: ರಾಜೇಶ್ ದುಗ್ಗುಮನೆ

Updated on: Sep 12, 2025 | 7:48 AM

ಅಕ್ಷಯ್ ಕುಮಾರ್ (Akshay Kumar) ಅವರು ಸಿನಿಮಾ ಮಾಡುವುದರಲ್ಲಿ ತುಂಬಾನೇ ಸ್ಪೀಡ್. ಅವರ ವೇಗಕ್ಕೆ ಸರಿಸಾಟಿಯಾಗಿ ಯಾರೂ ನಿಲ್ಲಲು ಸಾಧ್ಯವಿಲ್ಲ. ಅದರಲ್ಲೂ ಬಾಲಿವುಡ್​ ಹೀರೋಗಳ ಬಳಿ ಇದು ಸಾಧ್ಯವೇ ಇಲ್ಲ. ಅಕ್ಷಯ್ ಕುಮಾರ್ ಅವರ ಕನಿಷ್ಠ ಮೂರು ಸಿನಿಮಾಗಳು ವರ್ಷಕ್ಕೆ ತೆರೆಗೆ ಬರುತ್ತವೆ. ಹೀಗಿರುವಾಗಲೇ ಅಜಯ್ ದೇವಗನ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅಕ್ಷಯ್ ಅವರು ಅಷ್ಟು ವೇಗವಾಗಿ ಹೇಗೆ ಸಿನಿಮಾ ಮಾಡುತ್ತಾರೆ ಎಂಬುದನ್ನು ವಿವರಿಸಿದ್ದಾರೆ.

ಸಿನಿಮಾ ಮಾಡೋದ್ರಲ್ಲಿ ಅಕ್ಷಯ್ ಕುಮಾರ್ ಬಾಲಿವುಡ್​ನ ಉಳಿದ ನಟರಿಗಿಂತ ಭಿನ್ನ. ಅವರ ಕೈಯಲ್ಲಿ ಅರ್ಧ ಡಜನ್ ಸಿನಿಮಾಗಳಂತೂ ಇದ್ದೇ ಇರುತ್ತವೆ. ಉಳಿದ ಹೀರೋಗಳು ವರ್ಷಕ್ಕೆ 1 ಸಿನಿಮಾ ಟಾರ್ಗೆಟ್ ಇಟ್ಟುಕೊಂಡರೆ ಅಕ್ಷಯ್ ಕುಮಾರ್ ಮಾತ್ರ 3-4 ಟಾರ್ಗೆಟ್ ಇಟ್ಟುಕೊಂಡಿರುತ್ತಾರೆ. ಈಗ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ.

ಇದನ್ನೂ ಓದಿ
ಟಾಪ್​ನಲ್ಲಿ ಯಾರೂ ಊಹಿಸದ ಸೀರಿಯಲ್; ‘ಅಮೃತಧಾರೆ’ಗೆ ಎಷ್ಟನೇ ಸ್ಥಾನ?
ಮದುವೆ ಬಳಿಕ ಕೆಲಸಕ್ಕೆ ಮರಳಿದ ಅನುಶ್ರೀ ಈ ವಿಚಾರದಲ್ಲಿ ತಪ್ಪು ಮಾಡಲಿಲ್ಲ
ಹಠ ಮಾಡಿ ವಿಷ್ಣುವರ್ಧನ್ ಸಿನಿಮಾದಲ್ಲಿ ನಟಿಸಿದ್ದ ನಟ ಅಕ್ಷಯ್ ಕುಮಾರ್
ಲೂಸಿಯಾದಲ್ಲಿ ರಿಷಬ್ ಶೆಟ್ಟಿ ಮಾಡಿದ ಪಾತ್ರ ನೆನಪಿದೆಯೇ? ಅದೆಷ್ಟು ಬದಲಾವಣೆ

‘ಅನಿಮಲ್ ಬಳಿಕ ನನ್ನ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಆದರೆ, ನಿಮ್ಮ 11 ಸಿನಿಮಾಗಳು ಬಂದಿವೆ ಹೇಗೆ’ ಎಂದು ಅಕ್ಷಯ್​​ಗೆ ರಣಬೀರ್ ಕಪೂರ್ ಕೇಳಿದರು. ಆಗ ಅಲ್ಲಿಯೇ ಇದ್ದ ಅಜಯ್ ದೇವಗನ್ ಅವರು ಇದಕ್ಕೆ ಉತ್ತರ ನೀಡಿದರು.

‘ನೀವು ಎಷ್ಟು ಗಂಟೆಗೆ ಏಳುತ್ತೀರಿ’ ಎಂದು ಅಜಯ್ ಅವರು ರಣಬೀರ್​ಗೆ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ರಣಬೀರ್, 7 ಗಂಟೆ ಎಂದರು. ‘ಅಕ್ಷಯ್ 4 ಗಂಟೆಗೆ ಏಳುತ್ತಾರೆ ಮತ್ತು ನೀವು ಏಳುವ ಮೊದಲೇ ಅವರ ಒಂದು ಸಿನಿಮಾ ಶೂಟ್ ಪೂರ್ಣಗೊಂಡಿರುತ್ತದೆ’ ಎಂದು ನಗೆಚಟಾಕಿ ಹಾರಿಸಿದರು. ಇದನ್ನು ಕೇಳಿ ಅಲ್ಲಿದ್ದವರೆಲ್ಲರೂ ನಕ್ಕರು.

ಇದನ್ನೂ ಓದಿ: ಹಠ ಮಾಡಿ ವಿಷ್ಣುವರ್ಧನ್ ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್ ತುಂಬಾನೇ ಪಂಕ್ಚುವಲ್ ವ್ಯಕ್ತಿ. ಅವರು ಸರಿಯಾದ ಸಮಯಕ್ಕೆ ಸೆಟ್​ಗೆ ಬರುತ್ತಾರೆ ಮತ್ತು ಸರಿಯಾದ ಸಮಯಕ್ಕೆ ಸೆಟ್​ನಿಂದ ತೆರಳುತ್ತಾರೆ. ಅವರು ಸಿನಿಮಾಗಾಗಿ ಕೇವಲ 9 ಗಂಟೆ ಮಾತ್ರ ಮೀಸಲು ಇರುತ್ತಾರೆ. ಉಳಿದ ಸಮಯವನ್ನು ಅವರು ಕುಟುಂಬದ ಜೊತೆಗೆ ಕಳೆಯುತ್ತಾರೆ. ಈ ನಿಯಮವನ್ನು ಅವರೇ ಹಾಕಿಕೊಂಡಿದ್ದಾರೆ ಮತ್ತು ಅದನ್ನು ಎಂದಿಗೂ ಮುರಿಯಲು ಬಯಸೋದಿಲ್ಲ. ಆದರೆ, ಇತ್ತೀಚೆಗೆ ಅವರ ಸಿನಿಮಾಗಳು ಗೆಲ್ಲುತ್ತಿಲ್ಲ. ಹೆಚ್ಚು ಸಿನಿಮಾ ಒಪ್ಪಿಕೊಳ್ಳೋದೇ ಇದಕ್ಕೆ ಕಾರಣ ಎಂದು ಅನೇಕರು ಹೇಳಿದ್ದೂ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.