
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ದೇಶದ ಅತಿ ಹೆಚ್ಚು ತೆರಿಗೆ ಪಾವತಿಸುವ ಹೀರೋಗಳಲ್ಲಿ ಒಬ್ಬರು. ಅವರಿಗೆ ಬಾಲಿವುಡ್ನಲ್ಲಿ ಬೇಡಿಕೆ ಇದೆ. ಸದಾ ಅವರ ಬಳಿ ಡಜನ್ ಸಿನಿಮಾಗಳು ಇರುತ್ತವೆ. ಈಗ ಅವರು ಮುಂಬೈನಲ್ಲಿರುವ ತಮ್ಮ ಮನೆ ಮಾರಿ ಸುದ್ದಿ ಆಗಿದ್ದಾರೆ. ಈ ಮನೆಯ ಮಾರಾಟದಿಂದ ಅವರು ಸಾಕಷ್ಟು ಲಾಭ ಮಾಡಿದ್ದಾರೆ. ಈ ಬಗ್ಗೆ ಇಂಗ್ಲಿಷ್ ವೆಬ್ಸೈಟ್ಗಳಲ್ಲಿ ವರದಿ ಆಗಿದೆ. ಸಿನಿಮಾ ಯಶಸ್ಸು ಕಾಣದೆ ಇರುವ ಮಧ್ಯೆ ಅವರು ಈ ರೀತಿ ನಿರ್ಧಾರ ತೆಗೆದುಕೊಂಡರೇ ಎನ್ನುವ ಪ್ರಶ್ನೆ ಮೂಡಿದೆ.
ಇನ್ಸ್ಪೆಕ್ಟರ್ ಜನರಲ್ ರಿಜಿಸ್ಟ್ರೇಷನ್ ಮಾಡಿರುವ ವರದಿ ಪ್ರಕಾರ ಈ ತಿಂಗಳಲ್ಲೇ ಅಕ್ಷಯ್ ಕುಮಾರ್ ಅವರು ಫ್ಲ್ಯಾಟ್ನ ಮಾರಿದ್ದಾರೆ. ಇದಕ್ಕಾಗಿ ಅವರು 26.1 ಲಕ್ಷ ರೂಪಾಯಿ ಸ್ಟ್ಯಾಂಪ್ ಡ್ಯೂಟಿ ಪಾವತಿ ಮಾಡಿದ್ದಾರೆ. ಒಬೆರಾಯ್ ರಿಯಾಲಿಟಿ ಅವರು ನಿರ್ಮಾಣ ಮಾಡಿರುವ ಸ್ಕೈ ಸಿಟಿ ಅಪಾರ್ಟ್ಮೆಂಟ್ನಲ್ಲಿ ಈ ಫ್ಲ್ಯಾಟ್ ಇತ್ತು.
ಅಕ್ಷಯ್ ಕುಮಾರ್ ಅವರು ಚಿತ್ರರಂಗದಲ್ಲಿ ಯಶಸ್ಸು ಕಾಣುತ್ತಿದ್ದಂತೆ ರಿಯಲ್ ಎಸ್ಟೇಟ್ಗಳ ಮೇಲೆ ಹೂಡಿಕೆ ಮಾಡಲು ಆರಂಭಿಸಿದರು. 2017ರಲ್ಲಿ ಅವರು ಈ ಫ್ಲ್ಯಾಟ್ನ ಬರೋಬ್ಬರಿ 2.37 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದರು. 1,073 ಚದರ ಅಡಿಯನ್ನು ಇದು ಹೊಂದಿದ್ದು, ಕಾರ್ ಪಾರ್ಕಿಂಗ್ಗೂ ಜಾಗ ಇದೆ. ಇದನ್ನು ಈಗ 4.25 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಈ ಮೂಲಕ ಹಾಕಿದ ಹಣಕಕ್ಕೆ ದುಪ್ಪಟ್ಟು ಲಾಭ ಮಾಡಿಕೊಂಡಿದ್ದಾರೆ.
ಸ್ಕೈ ಸಿಟಿಯಲ್ಲಿ ಅಕ್ಷಯ್ ಕುಮಾರ್ ಮಾತ್ರವಲ್ಲದೆ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್ ಸೇರಿ ಅನೇಕರು ಅಪಾರ್ಟ್ಮೆಂಟ್ ಹೊಂದಿದ್ದಾರೆ. ಅಮಿತಾಭ್ ಹಾಗೂ ಅಭಿಷೇಕ್ ಕಳೆದ ಮೇ ತಿಂಗಳಲ್ಲಿ ಇಲ್ಲಿ ಫ್ಲ್ಯಾಟ್ಗಳ ಖರೀದಿ ಮಾಡಿದ್ದರು.
ಇದನ್ನೂ ಓದಿ: 80 ಕೋಟಿ ರೂಪಾಯಿಗೆ ಅಪಾರ್ಟ್ಮೆಂಟ್ ಮಾರಿಕೊಂಡ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ಅವರ ನಟನೆಯ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗುತ್ತಿವೆ. ಇತ್ತೀಚೆಗೆ ಅವರ ನಟನೆಯ ‘ಸ್ಕೈ ಫೋರ್ಸ್’ ರಿಲೀಸ್ ಆಗಿ ಸಾಧಾರಣ ಹಿಟ್ ಎನಿಸಿಕೊಂಡಿತು. ಕಳೆದ ವರ್ಷ ಅವರು ಹಲವು ಫ್ಲಾಪ್ಗಳನ್ನು ಕಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್