ಪೌರಾಣಿಕ ಕಥೆಗಳು ಎಂದಿಗೂ ಹಳೆಯದಾಗುವುದಿಲ್ಲ. ಎಲ್ಲ ಕಾಲಕ್ಕೂ ಅನ್ವಯ ಆಗುವಂತಹ ಸಂದೇಶ ಈ ಕಥೆಗಳಲ್ಲಿ ಇವೆ. ಹಾಗಾಗಿ ರಾಮಾಯಣ (Ramayana) ಹಾಗೂ ಮಹಾಭಾರತ ಆಧರಿಸಿ ಅನೇಕ ಸಿನಿಮಾಗಳು ತಯಾರಾಗುತ್ತಲೇ ಇವೆ. ಒಂದೆಡೆ ರಾಮಾಯಣ ಆಧಾರಿತ ‘ಆದಿಪುರುಷ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇನ್ನೊಂದೆಡೆ ನಿರ್ದೇಶಕ ನಿತೇಶ್ ತಿವಾರಿ (Nitesh Tiwari) ಕೂಡ ರಾಮಾಯಣದ ಕಥೆ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈ ಸಿನಿಮಾಗೆ ಪಾತ್ರವರ್ಗದ ಆಯ್ಕೆ ನಡೆಯುತ್ತಿದೆ. ಸೀತೆ ಪಾತ್ರದಲ್ಲಿ ಆಲಿಯಾ ಭಟ್ (Alia Bhatt) ಹಾಗೂ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ನಟಿಸುತ್ತಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಎಲ್ಲವೂ ಅಂತೆ-ಕಂತೆಯ ಹಂತದಲ್ಲೇ ಇದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ.
ಆಲಿಯಾ ಭಟ್ ಉತ್ತಮ ನಟಿ ಎಂಬುದರಲ್ಲಿ ಅನುಮಾನವೇ ಇಲ್ಲ. ಅನೇಕ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಅಭಿಮಾನಿಗಳು ಅವರ ನಟನೆ ಕಂಡು ಫಿದಾ ಆಗಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಆಲಿಯಾ ಭಟ್ ಅವರಿಗೆ ಸಲ್ಲುತ್ತದೆ. ಸೀತೆ ಪಾತ್ರಕ್ಕೆ ಅವರೇ ಯಾಕೆ ಸೂಕ್ತ ಎಂಬುದಕ್ಕೆ ಅಭಿಮಾನಿಗಳು ಕೆಲವು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಮೊದಲನೆಯದಾಗಿ ಆಲಿಯಾ ಅವರ ನಟನೆ. ಎರಡನೆಯದಾಗಿ ಅವರ ಹೈಟ್. ಮೂರನೇ ಕಾರಣ ಏನೆಂದರೆ ‘ಆರ್ಆರ್ಆರ್’ ಚಿತ್ರದಲ್ಲಿ ಅವರು ಸೀತಾ ಎಂಬ ಪಾತ್ರ ಮಾಡಿ ಜನರಿಗೆ ಹತ್ತಿರ ಆಗಿದ್ದಾರೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರು ನಿಜಜೀವನದಲ್ಲಿ ಪತಿ-ಪತ್ನಿ ಆಗಿರುವುದು ನಾಲ್ಕನೇ ಕಾರಣ. ಹಾಗಾಗಿ ಅವರು ರಾಮ-ಸೀತೆ ಪಾತ್ರದಲ್ಲಿ ನಟಿಸಿದರೆ ಅಭಿನಯ ಸಹಜವಾಗಿ ಮೂಡಿಬರುತ್ತದೆ ಎಂಬುದು ಅನೇಕರ ವಾದ. ಆದ್ದರಿಂದ ಈ ಜೋಡಿಯ ಆಯ್ಕೆ ಸರಿಯಾಗಿದೆ ಎಂದು ಅಭಿಮಾನಿಗಳು ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಅವರಿಬ್ಬರು ಜೊತೆಯಾಗಿ ನಟಿಸಿದ ‘ಬ್ರಹ್ಮಾಸ್ತ್ರ’ ಸಿನಿಮಾವನ್ನು ಪ್ರೇಕ್ಷಕರು ಈಗಾಗಲೇ ಇಷ್ಟಪಟ್ಟಿದ್ದಾರೆ. ಅದೇ ರೀತಿ ರಾಮಾಯಣ ಕಥೆಯಾಧಾರಿತ ಚಿತ್ರದಲ್ಲೂ ಅವರ ನಟನೆಗೆ ಮೆಚ್ಚುಗೆ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.
Ranbir Kapoor: ಮಗಳ ಮೇಲಿನ ಪ್ರೀತಿಗೆ ಸಿನಿಮಾ ಕೆಲಸಗಳಿಂದ ದೂರ ಇರಲು ನಿರ್ಧರಿಸಿದ ರಣಬೀರ್ ಕಪೂರ್
ರಾಮನ ಪಾತ್ರಕ್ಕಾಗಿ ರಣಬೀರ್ ಕಪೂರ್ ಅವರು ಲುಕ್ ಟೆಸ್ಟ್ ಮಾಡಿಸುತ್ತಿದ್ದಾರೆ ಎಂಬ ಸುದ್ದಿ ಹರಡಿದೆ. ಇದೇ ಸಿನಿಮಾದಲ್ಲಿನ ಇನ್ನೊಂದು ಪಾತ್ರದಲ್ಲಿ ನಟಿಸುವಂತೆ ‘ರಾಕಿಂಗ್ ಸ್ಟಾರ್’ ಯಶ್ಗೆ ಆಫರ್ ನೀಡಲಾಗಿದೆ ಎಂದು ಕೂಡ ಹೇಳಲಾಗುತ್ತಿದೆ. ಈ ಎಲ್ಲ ಗಾಸಿಪ್ಗಳ ಬಗ್ಗೆ ಆದಷ್ಟು ಬೇಗ ಸ್ಪಷ್ಟನೆ ಸಿಗಲಿ ಎಂದು ಫ್ಯಾನ್ಸ್ ಕಾದಿದ್ದಾರೆ. ಯಶ್ ಅವರ 19ನೇ ಸಿನಿಮಾ ಯಾವಾಗ ಅನೌನ್ಸ್ ಆಗಲಿದೆ ಎಂಬ ಬಗ್ಗೆಯೂ ಕೌತುಕ ಮನೆ ಮಾಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.