ಸ್ಟಾರ್​ ಹೀರೋ, ದೊಡ್ಡ ನಿರ್ಮಾಪಕರು; ಆದರೂ ಸೆಟ್ಟೇರಲಿಲ್ಲ ಈ ಚಿತ್ರಗಳು

| Updated By: ರಾಜೇಶ್ ದುಗ್ಗುಮನೆ

Updated on: Sep 11, 2023 | 10:28 AM

ಕೆಲವೊಮ್ಮೆ ಅಂದುಕೊಂಡಂತೆ ಯಾವುದೂ ನಡೆಯುವುದಿಲ್ಲ. ಸ್ಟಾರ್ ಹೀರೋ, ದೊಡ್ಡ ನಿರ್ಮಾಪಕರು ಇದ್ದ ಹೊರತಾಗಿಯೂ ಸಿನಿಮಾ ಸೆಟ್ಟೇರುವುದಿಲ್ಲ. ಆ ಸಾಲಿನಲ್ಲಿ ಬಾಲಿವುಡ್​ನ ಹಲವು ಸಿನಿಮಾಗಳಿವೆ. ಸಲ್ಮಾನ್ ಖಾನ್ ಸೇರಿದಂತೆ ಅನೇಕರ ಸಿನಿಮಾಗಳು ಈ ಸಾಲಿನಲ್ಲಿವೆ. ಹಾಗಾದರೆ, ಅರ್ಧಕ್ಕೆ ನಿಂತ ದೊಡ್ಡ ಬಜೆಟ್​ ಚಿತ್ರಗಳು ಯಾವವು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಸ್ಟಾರ್​ ಹೀರೋ, ದೊಡ್ಡ ನಿರ್ಮಾಪಕರು; ಆದರೂ ಸೆಟ್ಟೇರಲಿಲ್ಲ ಈ ಚಿತ್ರಗಳು
ಸ್ಟಾರ್​ ಹೀರೋ, ದೊಡ್ಡ ನಿರ್ಮಾಪಕರು; ಆದರೂ ಸೆಟ್ಟೇರಲಿಲ್ಲ ಈ ಚಿತ್ರಗಳು
Follow us on

ಇತ್ತೀಚೆಗೆ ಬಿಗ್ ಬಜೆಟ್​ ಸಿನಿಮಾಗಳಿಗೆ ಬರಗಾಲವಿಲ್ಲ. ಸ್ಟಾರ್ ಹೀರೋ ನಟಿಸೋಕೆ ರೆಡಿ ಇದ್ದರೆ ನೂರಾರು ಕೋಟಿ ರೂಪಾಯಿ ಹೂಡಲು ನಿರ್ಮಾಪಕರು ರೆಡಿ ಇರುತ್ತಾರೆ. ಆದರೆ, ಕೆಲವೊಮ್ಮೆ ಅಂದುಕೊಂಡಂತೆ ಯಾವುದೂ ನಡೆಯುವುದಿಲ್ಲ. ಸ್ಟಾರ್ ಹೀರೋ, ದೊಡ್ಡ ನಿರ್ಮಾಪಕರು ಇದ್ದ ಹೊರತಾಗಿಯೂ ಸಿನಿಮಾ ಸೆಟ್ಟೇರುವುದಿಲ್ಲ. ಆ ಸಾಲಿನಲ್ಲಿ ಬಾಲಿವುಡ್​ನ ಹಲವು ಸಿನಿಮಾಗಳಿವೆ. ಸಲ್ಮಾನ್ ಖಾನ್ (Salman Khan) ಸೇರಿದಂತೆ ಅನೇಕರ ಸಿನಿಮಾಗಳು ಈ ಸಾಲಿನಲ್ಲಿವೆ. ಹಾಗಾದರೆ, ಅರ್ಧಕ್ಕೆ ನಿಂತ ದೊಡ್ಡ ಬಜೆಟ್​ ಚಿತ್ರಗಳು ಯಾವವು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಇನ್​ಶಾಅಲ್ಲಾ

ಸಲ್ಮಾನ್ ಖಾನ್ ಹಾಗೂ ಆಲಿಯಾ ಭಟ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆದರೆ, ಇವರು ಒಟ್ಟಿಗೆ ನಟಿಲ್ಲ. ‘ಇನ್​ಶಾಅಲ್ಲಾ’ ಸಿನಿಮಾದಲ್ಲಿ ಇವರು ಒಟ್ಟಾಗಿ ನಟಿಸಬೇಕಿತ್ತು. ಸಂಜಯ್ ಲೀಲಾ ಬನ್ಸಾಲಿ ಈ ಚಿತ್ರವನ್ನು ನಿರ್ಮಾಣ ಮಾಡಿ, ನಿರ್ದೇಶನ ಮಾಡಬೇಕಿತ್ತು. ಆದರೆ, ಸಿನಿಮಾದ ಕಥೆಯ ವಿಚಾರದಲ್ಲಿ ಸಲ್ಮಾನ್ ಖಾನ್ ಹಾಗೂ ಸಂಜಯ್ ಲೀಲಾ ಬನ್ಸಾಲಿಗೆ ಹೊಂದಾಣಿಕೆ ಆಗಿಲ್ಲ. ಈ ಕಾರಣದಿಂದ ಸಿನಿಮಾ ಸೆಟ್ಟೇರಲೇ ಇಲ್ಲ. ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣ ಸಂಸ್ಥೆ ಕಡೆಯಿಂದಲೇ ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ.

ತಖ್ತ್

ಕರಣ್ ಜೋಹರ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಅವರ ನಿರ್ಮಾಣದ ‘ತಖ್ತ್​’ ಸಿನಿಮಾ ಸೆಟ್ಟೇರಬೇಕಿತ್ತು. ಆದರೆ, ಕೊರೊನಾ ಕಾರಣದಿಂದ ಸಿನಿಮಾ ಮುಂದಕ್ಕೆ ಹೋಯಿತು. ಆದರೆ, ಆ ಬಳಿಕ ಅವರು ಈ ಸಿನಿಮಾ ಬಗ್ಗೆ ಮಾತನಾಡಲಿಲ್ಲ. ಮಲ್ಟಿ ಸ್ಟಾರರ್ ಸಿನಿಮಾ ಮಾಡೋಕೆ ಕರಣ್ ಜೋಹರ್ ಎತ್ತಿದ ಕೈ. ಈ ಚಿತ್ರದಲ್ಲಿ ಕರೀನಾ ಕಪೂರ್ ಖಾನ್. ರಣವೀರ್ ಸಿಂಗ್, ಆಲಿಯಾ ಭಟ್, ಜಾನ್ವಿ ಕಪೂರ್, ಭೂಮಿ ಪಡ್ನೇಕರ್, ವಿಕ್ಕಿ ಕೌಶಲ್, ಅನಿಲ್ ಕಪೂರ್ ಮೊದಲಾದವರು ನಟಿಸಬೇಕಿತ್ತು.

ಶೂಬೈಟ್

ಅಮಿತಾಭ್ ಬಚ್ಚನ್ ಅವರ ವಯಸ್ಸು 80 ದಾಟಿದೆ. ಈ ವಯಸ್ಸಿನಲ್ಲೂ ಅವರು ಹಲವು ಸಿನಿಮಾ ಒಪ್ಪಿಕೊಂಡು ಮಾಡುತ್ತಿದ್ದಾರೆ. ಅವರು ‘ಶೂಬೈಟ್’ ಹೆಸರಿನ ಸಿನಿಮಾ ಮಾಡಬೇಕಿತ್ತು. ಆದರೆ, ಸಿನಿಮಾ ಸೆಟ್ಟೇರಲಿಲ್ಲ.

‘ದೋಸ್ತಾನಾ 2’

‘ದೋಸ್ತಾನ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅಭಿಷೇಕ್ ಬಚ್ಚನ್, ಜಾನ್ ಅಬ್ರಾಹಂ ಹಾಗೂ ಪ್ರಿಯಾಂಕಾ ಚೋಪ್ರಾ ಈ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾಗೆ ಸೀಕ್ವೆಲ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕಾರ್ತಿಕ್ ಆರ್ಯನ್, ಜಾನ್ವಿ ಕಪೂರ್ ಹಾಗೂ ಲಕ್ಷ್ಯ ಅವರು ಮುಖ್ಯಭೂಮಿಕೆಯಲ್ಲಿ ನಟಿಸಬೇಕಿತ್ತು. ಆದರೆ, ಸಿನಿಮಾ ಸೆಟ್ಟೇರಲಿಲ್ಲ. ಕರಣ್ ಜೋಹರ್ ಅವರು ಸಿನಿಮಾ ನಿರ್ಮಾಣ ಮಾಡಬೇಕಿತ್ತು. ಆದರೆ, ಕರಣ್-ಕಾರ್ತಿಕ್ ಮಧ್ಯೆ ಹೊಂದಾಣಿಕೆ ಆಗಿಲ್ಲ.

ದಿ ಇಮ್ಮಾರ್ಟಲ್ ಅಶ್ವತ್ಥಾಮ

ವಿಕ್ಕಿ ಕೌಶಲ್ ಹಾಗೂ ನಿರ್ದೇಶಕ ಆದಿತ್ಯ ಧಾರ್ ಅವರು ‘ದಿ ಇಮ್ಮಾರ್ಟಲ್ ಅಶ್ವತ್ಥಾಮ’ ಸಿನಿಮಾ ಮಾಡಬೇಕಿತ್ತು. ಇವರು ‘ಉರಿ’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಆದರೆ, ಈ ಸಿನಿಮಾ ಸೆಟ್ಟೇರಲೇ ಇಲ್ಲ. ಬಳಿಕ ರಣವೀರ್ ಸಿಂಗ್ ಹಾಗೂ ಯಶ್​ಗೂ ಚಿತ್ರದ ಆಫರ್ ನೀಡಲಾಗಿತ್ತು. ಆದರೆ, ಅವರು ಕೂಡ ಸಿನಿಮಾ ಒಪ್ಪಿಕೊಳ್ಳಲಿಲ್ಲ. ಈ ಚಿತ್ರ ಸೆಟ್ಟೇರುವ ಮೊದಲೇ ನಿರ್ಮಾಪಕರು 30 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ ಎನ್ನಲಾಗಿದೆ.

ಬಿಜು ಬವ್ರಾ ರಿಮೇಕ್

ಸಂಜಯ್ ಲೀಲಾ ಬನ್ಸಾಲಿ ಅವರು 1952ರ ಹಿಂದಿಯ ‘ಬಿಜು ಬವ್ರಾ’ ಚಿತ್ರವನ್ನು ರಿಮೇಕ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದರು. ರಣವೀರ್ ಸಿಂಗ್ ಈ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ, ಬಜೆಟ್​ ವಿಚಾರದಲ್ಲಿ ಹೊಂದಾಣಿಕೆ ಆಗದ ಕಾರಣಕ್ಕೆ ಸಿನಿಮಾ ಸೆಟ್ಟೇರಿಲ್ಲ.

ಇದನ್ನೂ ಓದಿ: ನಟನೆಯಿಂದ ಮಾತ್ರವಲ್ಲ, ಈ ಸೆಲೆಬ್ರಿಟಿಗಳಿಗೆ ಸೈಡ್ ಬಿಸ್ನೆಸ್​ನಿಂದ ಬರುತ್ತಿದೆ ಕೋಟಿ ಕೋಟಿ ಹಣ

ಸಂಜಯ್ ಲೀಲಾ ಜೊತೆ ಸಂಜಯ್ ದತ್ ಸಿನಿಮಾ

ರಾಜ್​ಕುಮಾರ್ ಹಿರಾನಿ ಅವರು ತಮ್ಮ ಕೈಚಳಕ ತೋರಿಸಿದ್ದಾರೆ. ಸಂಜಯ್ ದತ್ ಜೊತೆ ಅವರು ಮೂರನೇ ಬಾರಿ ಒಂದಾಗಬೇಕಿತ್ತು. ಈ ಚಿತ್ರದ ಟೀಸರ್ ಕೂಡ ರಿಲೀಸ್ ಆಗಿತ್ತು. ಆದರೆ, ಆ ಬಳಿಕ ಸಿನಿಮಾ ಬಗ್ಗೆ ಅಪ್​ಡೇಟ್ ಸಿಕ್ಕಿಲ್ಲ. ಈ ಚಿತ್ರವೂ ಸೆಟ್ಟೇರುವುದಿಲ್ಲ ಎನ್ನಲಾಗುತ್ತಿದೆ. ಸದ್ಯ ರಾಜ್​ಕುಮಾರ್ ಹಿರಾನಿ ‘ಡಂಕಿ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.  ಶಾರುಖ್ ಖಾನ್ ಚಿತ್ರದ ಹೀರೋ.

ದಸ್

ಸಲ್ಮಾನ್ ಖಾನ್ ಹಾಗೂ ಸಂಜಯ್ ದತ್ ಅವರು ‘ದಸ್​’ ಸಿನಿಮಾದಲ್ಲಿ ಒಟ್ಟಾಗಿ ನಟಿಸಬೇಕಿತ್ತು. ಮುಕುಲ್ ಆನಂದ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದರು. ಶೇ.8ರಷ್ಟು ಶೂಟಿಂಗ್ ಕೂಡ ಆಗಿತ್ತು ಆದರೆ, ಮುಕುಲ್ ಆನಂದ್ ಮೃತಪಟ್ಟಿದ್ದರಿಂದ ಸಿನಿಮಾ ಅರ್ಧಕ್ಕೆ ನಿಂತಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 8:02 am, Mon, 11 September 23