ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ದಂಪತಿಗೆ ರಹಾ ಹೆಸರಿನ ಮಗಳು ಇದ್ದಾಳೆ. ಈ ದಂಪತಿ 2022ರ ಏಪ್ರಿಲ್ನಲ್ಲಿ ಮದುವೆ ಆದರು. ಕೇವಲ 7 ತಿಂಗಳಲ್ಲಿ ಅಂದರೆ ಅದೇ ವರ್ಷ ನವೆಂಬರ್ನಲ್ಲಿ ಆಲಿಯಾ ಭಟ್ ಅವರು ರಹಾಗೆ ಜನ್ಮ ನೀಡಿದರು. ಅವರ ಫ್ಯೂಚರ್ ಪ್ಲ್ಯಾನ್ ಬಗ್ಗೆ ಕೇಳಲಾಯಿತು. ಅವರು ಮತ್ತಷ್ಟು ಮಗುವನ್ನು ಹೊಂದುವ ಆಲೋಚನೆಯಲ್ಲಿ ಇದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
‘ಜಿಗ್ರಾ’ ಸಿನಿಮಾ ರಿಲೀಸ್ ಆಗಿದೆ. ಇದು ಹಿಂದಿಯ ಜೊತೆಗೆ ತೆಲುಗಿನಲ್ಲೂ ಬಿಡುಗಡೆ ಕಂಡಿದೆ. ಈ ಚಿತ್ರದಲ್ಲಿ ಆಲಿಯಾ ಭಟ್ ನಟಿಸೋದರ ಜೊತೆಗೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾ ಮಾಡುವುದರ ಜೊತೆಗೆ ಅವರು ಕುಟುಂಬದ ಬಗ್ಗೆಯೂ ಗಮನ ಹರಿಸುತ್ತಾ ಇದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
‘ಹಲವು ಸಿನಿಮಾಗಳನ್ನು ಮಾಡಬೇಕು. ನಟನಾಗಿ ಮಾತ್ರವಲ್ಲ, ನಿರ್ಮಾಪಕಿ ಆಗಿಯೂ ಸಿನಿಮಾ ಮಾಡಬೇಕು. ಹಲವು ಮಕ್ಕಳನ್ನು ಹೊಂದಬೇಕು. ಸಾಕಷ್ಟು ಟ್ರಾವೆಲ್ ಮಾಡಬೇಕು. ಆರೋಗ್ಯವಾಗಿ, ಖುಷಿಯಾಗಿ, ಸರಳವಾಗಿ, ಶಾಂತವಾಗಿ ಜೀವನ ಸಾಗಿಸಬೇಕು’ ಎಂದಿದ್ದಾರೆ ಆಲಿಯಾ ಭಟ್ ಅವರು.
ಇದನ್ನೂ ಓದಿ:‘ರಾಮಾಯಣ’ ಸಿನಿಮಾ, ರಣ್ಬೀರ್ ಕಪೂರ್ ಅಲ್ಲ, ಯಶ್ ‘ನಾಯಕ’
ರಹಾಗೆ ಹೊರ ಜಗತ್ತಿನ ಬಗ್ಗೆ, ತಮ್ಮ ಕುಟುಂಬಕ್ಕೆ ಇರೋ ಫೇಮ್ ಬಗ್ಗೆ ಅಷ್ಟಾಗಿ ತಿಳಿಯುತ್ತಿಲ್ಲ. ‘ಮುಂದೊಂದು ದಿನ ನಾನು ನನ್ನ ಸ್ಟುಡೆಂಟ್ ಆಫ್ ದಿ ಇಯರ್ನ ಮಗಳಿಗೆ ತೋರಿಸಬೇಕು. ಮಕ್ಕಳು ಈ ಚಿತ್ರವನ್ನು ವೀಕ್ಷಿಸಬಹುದು. ಅದು ನನ್ನ ಮೊದಲ ಸಿನಿಮಾ. ಅದರಲ್ಲಿ ನನ್ನ ನಟನೆ ಉತ್ತಮವಾಗಿಲ್ಲ. ಸಿನಿಮಾನ ನಾನು ಎಂಜಾಯ್ ಮಾಡಿದ್ದೆ’ ಎಂದಿದ್ದಾರೆ ಅವರು.
ಆಲಿಯಾ ಭಟ್ ನಟನೆಯ ‘ಜಿಗ್ರಾ’ ಮೆಚ್ಚುಗೆ ಪಡೆದಿದೆ. ಕರಣ್ ಜೋಹರ್ ಜೊತೆ ಸೇರಿ ಇದನ್ನು ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಮೊದಲ ದಿನ 4 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಸನ್ ಬಾಲಾ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದೆ. ತಮ್ಮನಿಗಾಗಿ ಹೋರಾಡುವ ಅಕ್ಕನಾಗಿ ಅವರು ಕಾಣಿಸಿಕೊಂಡಿದ್ದಾರೆ. ‘ಲವ್ ಆ್ಯಂಡ್ ವಾರ್’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ರಣಬೀರ್ ಕಪೂರ್ ಈ ಚಿತ್ರದ ಹೀರೋ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ