Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣದ ನಿರ್ದೇಶಕರಿಗೆ ನನ್ನ ದೇಹದ ಆ ಭಾಗ ಎಂದರೆ ಬಲು ಇಷ್ಟ: ಮಲ್ಲಿಕಾ ಶೆರಾವತ್

Mallika Sherawat: ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತದ ಕೆಲ ಸಿನಿಮಾಗಳಲ್ಲಿ ನಟಿಸಿರುವ, ಐಟಂ ಹಾಡುಗಳಲ್ಲಿ ಕಾಣಿಸಿಕೊಂಡಿರುವ ಮಲ್ಲಿಕಾ ಶೆರಾವತ್, ದಕ್ಷಿಣದ ನಿರ್ದೇಶಕರಿಗೆ ನನ್ನ ದೇಹದ ಆ ಭಾಗದ ಮೇಲೆ ವಿಪರೀತ ವ್ಯಾಮೋಹ ಇತ್ತು ಎಂದಿದ್ದಾರೆ.

ದಕ್ಷಿಣದ ನಿರ್ದೇಶಕರಿಗೆ ನನ್ನ ದೇಹದ ಆ ಭಾಗ ಎಂದರೆ ಬಲು ಇಷ್ಟ: ಮಲ್ಲಿಕಾ ಶೆರಾವತ್
Follow us
ಮಂಜುನಾಥ ಸಿ.
|

Updated on: Oct 13, 2024 | 11:20 AM

ಮಲ್ಲಿಕಾ ಶೆರಾವತ್ ಬಾಲಿವುಡ್​ನ ಸಖತ್ ಹಾಟ್ ನಟಿ. ಮೊದಲೆಲ್ಲ ಸಿನಿಮಾದ ನಾಯಕಿಯರು ಹೆಚ್ಚು ಹಾಟ್ ಆಗಿ ಕಾಣಿಸಿಕೊಳ್ಳುತ್ತಿರಲಿಲ್ಲ ಅದಕ್ಕೆ ಬೇರೆ ನಟಿಯರೇ ಇರುತ್ತಿದ್ದರು. ಈ ಸೂತ್ರವನ್ನು ಬದಲು ಮಾಡಿದ್ದು ಮಲ್ಲಿಕಾ ಶೆರಾವತ್. ‘ಮರ್ಡರ್’ ಸಿನಿಮಾದಲ್ಲಿ ಮಲ್ಲಿಕಾರ ಹಾಟ್​ನೆಸ್​ಗೆ ಪ್ರೇಕ್ಷಕರು ಫಿದಾ ಆಗಿದ್ದರು. ಆ ನಂತರವೂ ಸಹ ಕೇವಲ ಗ್ಲಾಮರಸ್ ಪಾತ್ರಗಳಲ್ಲಿಯೇ ನಟಿಸಿದ ಮಲ್ಲಿಕಾ, ಬಾಲಿವುಡ್​ನ ‘ಹಾಟ್ ದಿವಾ’ ಆಗಿದ್ದರು. ಮಲ್ಲಿಕಾ ಕನ್ನಡ ಸೇರಿದಂತೆ ಕೆಲವು ದಕ್ಷಿಣದ ಸಿನಿಮಾ ಹಾಗೂ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ.

2012 ರ ಹಠಾತ್ತನೆ ಚಿತ್ರರಂಗದಿಂದ ಕಾಣೆಯಾದ ಮಲ್ಲಿಕಾ ಆ ನಂತರ ಆಗೊಮ್ಮೆ ಈಗೊಮ್ಮೆ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಇದೀಗ ‘ವಿಕ್ಕಿ ವಿದ್ಯಾ ಕಾ ವೋ ವಾಲ ವಿಡಿಯೋ’ ಸಿನಿಮಾ ಮೂಲಕ ಮತ್ತೆ ಬಂದಿದ್ದಾರೆ. ಸಿನಿಮಾದ ಪ್ರಚಾರಕ್ಕೆ ಸಂಬಂಧಿಸಿದಂತೆ ಕೆಲವು ಸಂದರ್ಶನಗಳಲ್ಲಿ ಪಾಲ್ಗೊಳ್ಳುತ್ತಿರುವ ನಟಿ ಮಲ್ಲಿಕಾ ಶೆರಾವತ್, ಇತ್ತೀಚೆಗಿನ ಸಂದರ್ಶನವೊಂದರಲ್ಲಿ ದಕ್ಷಿಣ ಭಾರತದ ಸಿನಿಮಾ ನಿರ್ದೇಶಕರ ಬಗ್ಗೆ ಮಾತನಾಡಿದ್ದಾರೆ. ದಕ್ಷಿಣದ ನಿರ್ದೇಶಕರಿಗೆ ನನ್ನ ದೇಹದ ಒಂದು ಭಾಗದ ಬಗ್ಗೆ ಬಹಳ ಪ್ರೀತಿ ಇತ್ತು ಎಂದು ತಮಾಷೆಯಾಗಿ ಹೇಳಿದ್ದಾರೆ.

ಒಂದು ದಕ್ಷಿಣ ಭಾರತದ ಸಿನಿಮಾದ ಹಾಡೊಂದರಲ್ಲಿ ಮಲ್ಲಿಕಾ ಕಾಣಿಸಿಕೊಂಡಿದ್ದರಂತೆ. ಆ ಹಾಡಿನ ಒಂದು ದೃಶ್ಯದಲ್ಲಿ ಮಲ್ಲಿಕಾ ಶೆರಾವತ್ ಸೊಂಟದ ಮೇಲೆ ರೊಟ್ಟಿ ಸುಡುವ ದೃಶ್ಯ ಇತ್ತಂತೆ! ನಿರ್ದೇಶಕ, ಮಲ್ಲಿಕಾ ಶೆರಾವತ್​ಗೆ, ‘ಮ್ಯಾಡಮ್ ನೀವು ಎಷ್ಟು ಹಾಟ್ ಎಂದು ತೋರಿಸಲು ನಿಮ್ಮ ಸೊಂಟದ ಮೇಲೆ ರೊಟ್ಟಿ ಸುಡುವ ದೃಶ್ಯ ಇಟ್ಟಿದ್ದೀನಿ. ಈ ದೃಶ್ಯ ಇಡೀ ಸಿನಿಮಾಕ್ಕೆ ಹೈಲೆಟ್ ದೃಶ್ಯ ಆಗಲಿದೆ’ ಎಂದನಂತೆ ನಿರ್ದೇಶಕ. ಆತನ ಮಾತು ಕೇಳಿ ಶಾಕ್ ಆದ ಮಲ್ಲಿಕಾ, ಆ ದೃಶ್ಯದಲ್ಲಿ ತಾನು ನಟಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರಂತೆ.

ಇದನ್ನೂ ಓದಿ:ಬೀಚ್​ನಲ್ಲಿ ಜಾಲಿ ಮೂಡ್​​ಗೆ ಜಾರಿದ ಮಲ್ಲಿಕಾ ಶೆರಾವತ್‌

ಮಲ್ಲಿಕಾ ಶೆರಾವತ್, ಕನ್ನಡದ ‘ಪ್ರೀತಿ ಏಕೆ ಭೂಮಿ ಮೇಲಿದೆ’ ಸಿನಿಮಾದ ಐಟಂ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾವನ್ನು ಪ್ರೇಮ್ ನಿರ್ದೇಶಿಸಿ ಅವರೇ ನಟಿಸಿದ್ದರು. ಸಿನಿಮಾದಲ್ಲಿ ಅವರೇ ನಾಯಕ. ಈ ಸೊಂಟದ ಮೇಲೆ ರೊಟ್ಟಿ ಸುಡುವ ಬ್ರಿಲಿಯಂಟ್ ಐಡಿಯಾ ಅವರದ್ದೇ ಇರಬಹುದೇನೋ ಎಂಬ ಅನುಮಾನವೂ ಇದೆ.

ದಕ್ಷಿಣದ ನಿರ್ದೇಶಕರಿಗೆ ನಟಿಯರ ಸೊಂಟದ ಮೇಲೆ ವಿಶೇಷ ಪ್ರೀತಿ ಇರುವ ಬಗ್ಗೆ ಬಾಲಿವುಡ್​ನ ಕೆಲ ನಟಿಯರು ಈ ಹಿಂದೆಯೂ ಹೇಳಿದ್ದಿದೆ. ದಕ್ಷಿಣ ಭಾರತ ಚಿತ್ರರಂಗದಿಂದ ನಟನೆ ಆರಂಭಿಸಿರುವ ತಾಪ್ಸಿ ಪನ್ನು ಸಹ ಇದೇ ವಿಷಯ ಹೇಳಿದ್ದರು. ನನ್ನ ಮೊದಲ ಸಿನಿಮಾದ ಮೊದಲ ಶಾಟ್​ನಲ್ಲಿಯೇ ನಿರ್ದೇಶಕರು ನನ್ನ ಸೊಂಟದ ಮೇಲೆ ತೆಂಗಿನ ಕಾಯಿಗಳನ್ನು ಒಗೆದಿದ್ದರು, ದಕ್ಷಿಣ ಭಾರತದ ನಿರ್ದೇಶಕರಿಗೆ ಸೊಂಟದ ಮೇಲೆ ವಿಪರೀತ ವ್ಯಾಮೋಹ ಎಂದಿದ್ದರು. ಈಗ ಮಲ್ಲಿಕಾ ಶೆರಾವತ್ ಸಹ ಅದೇ ಮಾತು ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ