ವಿಶೇಷ ವ್ಯಕ್ತಿ ಜತೆ ಜಿಮ್​ನಲ್ಲಿ ವರ್ಕೌಟ್​ ಮಾಡಿದ ನಟಿ ಆಲಿಯಾ ಭಟ್

| Updated By: ರಾಜೇಶ್ ದುಗ್ಗುಮನೆ

Updated on: Jul 25, 2021 | 8:07 PM

ಆಲಿಯಾ ಹೈದರಾಬಾದ್​ನಲ್ಲಿ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಶೇಷ ವ್ಯಕ್ತಿ ಜತೆ ಜಿಮ್​ನಲ್ಲಿ ವರ್ಕೌಟ್​ ಮಾಡಿದ ನಟಿ ಆಲಿಯಾ ಭಟ್
ಆಲಿಯಾ ಹೈದರಾಬಾದ್​ನಲ್ಲಿ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
Follow us on

‘ಆರ್​ಆರ್​ಆರ್​’ ಚಿತ್ರದ ಶೂಟಿಂಗ್​ಗಾಗಿ ನಟಿ ವೈಷ್ಣವಿ ಗೌಡ ಹೈದರಾಬಾದ್​ಗೆ ಆಗಮಿಸಿದ್ದರು. ಈಗ ಇದರ ಶೂಟಿಂಗ್​ ಪೂರ್ಣಗೊಂಡಿದ್ದು, ಆಲಿಯಾ ಮುಂಬೈಗೆ ತೆರಳಿದ್ದಾರೆ. ಅದಕ್ಕೂ ಮೊದಲು ಆಲಿಯಾ ಹೈದರಾಬಾದ್​ನಲ್ಲಿ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಆಲಿಯಾ ಫಿಟ್​ನೆಸ್​ಗೆ ಸಾಕಷ್ಟು ಪ್ರಾಮುಖ್ಯತೆ ಕೊಡುತ್ತಾರೆ. ಹೀಗಾಗಿ ಶೂಟಿಂಗ್​ ಮಧ್ಯೆಯೂ ಆಲಿಯಾ ಜಿಮ್​ನಲ್ಲಿ ಸಮಯ ಕಳೆದಿದ್ದಾರೆ. ಈಗ ಅವರು ಸಡಕ್​ 2 ಸಿನಿಮಾದ ಹೀರೋ ಜೀಶು ಸೇನ್​ಗುಪ್ತಾ ಜತೆ ಜಿಮ್​ನಲ್ಲಿ ವರ್ಕೌಟ್​ ಮಾಡಿದ್ದಾರೆ. ಜೀಶು ಅವರು ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ರಾಮ್​ ಚರಣ್​ ಮತ್ತು ಜ್ಯೂ. ಎನ್​ಟಿಆರ್​ ನಟನೆಯ ‘ಆರ್​ಆರ್​ಆರ್​’ ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಲಾಕ್​ಡೌನ್​ ಮುಗಿದ ಬಳಿಕ ಚಿತ್ರದ ಶೂಟಿಂಗ್​ಗೆ ಚುರುಕು ಮುಟ್ಟಿಸಲಾಗಿದೆ. ರಾಜಮೌಳಿ ಸಾರಥ್ಯದಲ್ಲಿ ಆರ್​ಆರ್​ಆರ್​ ಮೂಡಿಬರುತ್ತಿದ್ದು, ಇತ್ತೀಚೆಗ ಅದರ ಮೇಕಿಂಗ್​ ವಿಡಿಯೋ ಬಿಡುಗಡೆ ಮಾಡಲಾಗಿತ್ತು.

ಕೊಮರಾಮ್​ ಭೀಮ್​ ಪಾತ್ರಕ್ಕೆ ಜ್ಯೂ. ಎನ್​ಟಿಆರ್​ ಬಣ್ಣ ಹಚ್ಚಿದ್ದಾರೆ. ಅಲ್ಲುರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್​ ಚರಣ್​ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಆಲಿಯಾ ಭಟ್​ ಅಭಿನಯಿಸುತ್ತಿದ್ದು, ಇದು ದಕ್ಷಿಣ ಭಾರತದಲ್ಲಿ ಅವರಿಗೆ ಮೊದಲ ಸಿನಿಮಾ. ಅಜಯ್​ ದೇವಗನ್​ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅ.13ರಂದು ಆರ್​ಆರ್​ಆರ್​ ರಿಲೀಸ್​ ಮಾಡಲು ಉದ್ದೇಶಿಸಲಾಗಿದೆ. ಅಂದುಕೊಂಡ ದಿನಾಂಕದಲ್ಲೇ ಸಿನಿಮಾವನ್ನು ತೆರೆಕಾಣಿಸಬೇಕು ಎಂದು ಇಡೀ ತಂಡ ಶ್ರಮವಹಿಸುತ್ತಿದೆ.

ಇದನ್ನೂ ಓದಿ: ಮತ್ತೆ ಮತ್ತೆ ಆಲಿಯಾ ಭಟ್​ ಬೇಕು ಎಂದು ಬಯಸಿದ ರಾಮ್​ ಚರಣ್​; ಏನಿದು ವಿಷ್ಯ?

ರಾಮ್​ ಚರಣ್​ Vs ಜ್ಯೂ. ಎನ್​ಟಿಆರ್​; ಫ್ಯಾನ್ಸ್ ತಕರಾರು ಬಗೆಹರಿಸಲು ರಾಜಮೌಳಿ ಮಾಡಿದ ಪ್ಲ್ಯಾನ್​ ಏನು?