ನಟಿ ಆಲಿಯಾ ಭಟ್ (Alia Bhatt) ಹಾಗೂ ರಣಬೀರ್ ಕಪೂರ್ ಮಧ್ಯೆ ಪ್ರೀತಿ ಹುಟ್ಟಿ ಹಲವು ವರ್ಷಗಳೇ ಕಳೆದಿದ್ದವು. ಏಪ್ರಿಲ್ ತಿಂಗಳಲ್ಲಿ ಇಬ್ಬರೂ ಮದುವೆ ಆಗುವ ಮೂಲಕ ಪ್ರೀತಿಗೆ ಹೊಸ ಅರ್ಥ ನೀಡಿದರು. ಈಗ ಈ ದಂಪತಿಯ ಮನೆಗೆ ಹೊಸ ಸದಸ್ಯನ ಆಗಮನ ಆಗಲಿದೆ. ಆಲಿಯಾ ಭಟ್ ಪ್ರೆಗ್ನೆಂಟ್ ಆಗಿದ್ದು, ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈ ಸಂದರ್ಭದಲ್ಲಿ ರಣಬೀರ್ ಕಪೂರ್ ಅವರು ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ಆಲಿಯಾ ಭಟ್ ಮೇಲೆ ರಣಬೀರ್ ಅವಲಂಬಿತರಾಗಿದ್ದಾರಂತೆ.
ರಣಬೀರ್ ಕಪೂರ್ ಹಾಗೂ ಆಲಿಯಾ ನಟನೆಯ ‘ಬಹ್ಮಾಸ್ತ್ರ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಕೇಳಿ ಬರುತ್ತಿದೆ. ಸಿನಿಮಾ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈ ಸಿನಿಮಾ ತೆರೆಕಂಡ ನಂತರವೂ ರಣಬೀರ್ ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ಆಲಿಯಾ ಬಗ್ಗೆ ಮಾತನಾಡಿದ್ದಾರೆ.
‘ನಾನು ಯಾರ ಮೇಲೂ ಅವಲಂಬಿತನಾಗಿಲ್ಲ ಎಂದು ಎಲ್ಲರಿಗೂ ಅನಿಸುತ್ತದೆ. ಆದರೆ, ನಿಜ ಹೇಳಬೇಕೆಂದರೆ ನಾನು ಆಲಿಯಾ ಭಟ್ಗೆ ತುಂಬಾನೇ ಅವಲಂಬಿತನಾಗಿದ್ದೇನೆ. ಆಲಿಯಾ ಭಟ್ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂದು ತಿಳಿಯದೆ ಇದ್ದರೆ ನಾನು ಬಾತ್ರೂಮ್ಗೂ ಹೋಗುವುದಿಲ್ಲ, ಊಟವನ್ನೂ ಮಾಡುವುದಿಲ್ಲ. ಅವಳು ನನ್ನ ಜತೆ ಇರಬೇಕು. ನಾವು ಮಾತನಾಡದೇ ಇದ್ದರೂ ಆಲಿಯಾ ಸದಾ ನನ್ನ ಹತ್ತಿರವೇ ಇರಬೇಕು’ ಎಂದಿದ್ದಾರೆ ರಣಬೀರ್ ಕಪೂರ್.
ಆಲಿಯಾ ಹಾಗೂ ರಣಬೀರ್ ಕಪೂರ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಕೋಟ್ಯಾಂತರ ಮಂದಿ ಈ ದಂಪತಿಯನ್ನು ಇಷ್ಟಪಡುತ್ತಾರೆ. ಮದುವೆ ಆದ ಕೇವಲ ಎರಡೂವರೆ ತಿಂಗಳಿಗೆ ಆಲಿಯಾ ಪ್ರೆಗ್ನೆಂಟ್ ಎಂದು ಘೋಷಿಸಿದರು. ಈ ವಿಚಾರ ಸಾಕಷ್ಟು ಅಚ್ಚರಿ ಮೂಡಿಸಿತ್ತು. ಇತ್ತೀಚೆಗೆ ಆಲಿಯಾ ಸಿನಿಮಾ ಶೂಟಿಂಗ್ಗಾಗಿ ಲಂಡನ್ಗೆ ತೆರಳಿದ್ದರು. ಮರಳಿ ಬಂದ ನಂತರ ಆಲಿಯಾರನ್ನು ಸ್ವಾಗತಿಸಲು ರಣಬೀರ್ ಮುಂಬೈ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ಇದನ್ನೂ ಓದಿ: ತಗ್ಗುತ್ತಿದೆ ‘ಬ್ರಹ್ಮಾಸ್ತ್ರ’ ಸಿನಿಮಾ ಕಲೆಕ್ಷನ್; ರಣಬೀರ್-ಆಲಿಯಾ ಚಿತ್ರ ಬಾಚಿದ ಹಣ ಎಷ್ಟು?
ರಣಬೀರ್-ಆಲಿಯಾ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಚಿತ್ರದಿಂದ ಬಾಲಿವುಡ್ಗೆ ಚೇತರಿಕೆ ಸಿಕ್ಕಿದೆ. ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ ಶೀಘ್ರವೇ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.
Published On - 7:41 am, Sun, 18 September 22