AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

60 ಕೋಟಿ ರೂಪಾಯಿ ಕೊಟ್ಟು ಭರ್ಜರಿ ಆಫೀಸ್ ಜಾಗ ಖರೀದಿಸಿದ ಅಮಿತಾಭ್ ಬಚ್ಚನ್

ನಟ ಅಮಿತಾಭ್ ಬಚ್ಚನ್ ಅವರು ಹೂಡಿಕೆ ಬಗ್ಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಅವರು ನಾನಾ ಕಡೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಅವರು ಈಗ 60 ಕೋಟಿ ರೂಪಾಯಿ ಕೊಟ್ಟು ಮುಂಬೈನಲ್ಲಿ ದುಬಾರಿ ಜಾಗ ಖರೀದಿ ಮಾಡಿದ್ದಾರೆ. ಕಚೇರಿ ಬಳಕೆಗೆ ಈ ಜಾಗವನ್ನು ಬಳಕೆ ಮಾಡಬಹುದಾಗಿದೆ.

60 ಕೋಟಿ ರೂಪಾಯಿ ಕೊಟ್ಟು ಭರ್ಜರಿ ಆಫೀಸ್ ಜಾಗ ಖರೀದಿಸಿದ ಅಮಿತಾಭ್ ಬಚ್ಚನ್
ಅಮಿತಾಭ್
ರಾಜೇಶ್ ದುಗ್ಗುಮನೆ
|

Updated on: Jun 26, 2024 | 2:08 PM

Share

ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರಿಗೆ ಈಗ 81 ವರ್ಷ ವಯಸ್ಸು. ಅವರು ಈಗಲೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇದರ ಜೊತೆಗೆ ಅವರು ಹೂಡಿಕೆ ಮಾಡುವುದನ್ನು ನಿಲ್ಲಿಸಿಲ್ಲ. ಈ ಮೊದಲು ಅವರು ಅಯೋಧ್ಯೆಯಲ್ಲಿ ಜಾಗ ಖರೀದಿ ಮಾಡಿದ್ದರು. ಈಗ ಅವರು ಮುಂಬೈನಲ್ಲಿ 59.58 ಕೋಟಿ ರೂಪಾಯಿ ಕೊಟ್ಟು ಜಾಗ ಖರೀದಿ ಮಾಡಿದ್ದಾರೆ. ಇದು ಕಚೇರಿ ಜಾಗ ಎನ್ನಲಾಗಿದೆ.

ಮುಂಬೈನ ಅಂಧೇರಿಯಲ್ಲಿರುವ ವೀರ ದೇಸಾಯಿ ರಸ್ತೆಯಲ್ಲಿರುವ ಕಟ್ಟಡವನ್ನು ಅಮಿತಾಭ್ ಖರೀದಿ ಮಾಡಿದ್ದಾರೆ. ಈ ಜಾಗದ ಒಟ್ಟಾರೆ ಅಳತೆ 8,429 ಚದರ ಅಡಿ ಇದೆ. ಕಾರ್ ಪಾರ್ಕಿಂಗ್​ಗೂ ವಿಶಾಲವಾದ ಜಾಗ ಇದೆ. ಅಮಿತಾಭ್ ಅವರು ಬರೋಬ್ಬರಿ 3.57 ಕೋಟಿ ರೂಪಾಯಿ ಸ್ಟ್ಯಾಂಪ್​ಡ್ಯೂಟಿ ಪಾವತಿ ಮಾಡಿದ್ದಾರೆ. ಜೂನ್ 20ರಂದು ಈ ಆಸ್ತಿ ನೋಂದಣಿ ಆಗಿದೆ.

ಅಮಿತಾಭ್ ಬಚ್ಚನ್ ಅವರು ನಿರಂತರವಾಗಿ ಹೂಡಿಕೆ ಮಾಡುತ್ತಿದ್ದಾರೆ. ಅಲಿಭಾಗ್​ನಲ್ಲಿ 10 ಕೋಟಿ ರೂಪಾಯಿ ಜಾಗವನ್ನು ಖರೀದಿ ಮಾಡಿದ್ದರು. ಅಯೋಧ್ಯೆಯಲ್ಲಿ 14.5 ಕೋಟಿ ರೂಪಾಯಿ ಕೊಟ್ಟು ಜಾಗ ಖರೀದಿ ಮಾಡಿದ್ದರು. ಸದ್ಯ ಅಯೋಧ್ಯೆಯಲ್ಲಿ ಹೂಡಿಕೆಗೆ ಜನರು ಹೆಚ್ಚೆಚ್ಚು ಬರುತ್ತಿದ್ದಾರೆ. ಈ ಕಾರಣಕ್ಕೆ ಅಮಿತಾಭ್ ಅವರು ಇಲ್ಲಿ ಜಾಗ ಕೊಂಡುಕೊಂಡಿದ್ದಾರೆ.

ಅಮಿತಾಭ್ ಬಚ್ಚನ್ ಮಗ ಅಭಿಷೇಕ್ ಬಚ್ಚನ್ ಕೂಡ ರಿಯಲ್ ಎಸ್ಟೇಟ್​​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಇತ್ತೀಚೆಗೆ ಸ್ಕೈ ಸಿಟಿ ಪ್ರಾಜೆಕ್ಟ್​​ನಲ್ಲಿ 15.42 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ಆರು ಅಪಾರ್ಟ್​ಮೆಂಟ್​ಗಳನ್ನು ಅವರು ಖರೀದಿ ಮಾಡಿದ್ದರು. ಈ ಅಪಾರ್ಟ್​ಮೆಂಟ್ 57ನೇ ಫ್ಲೋರ್​ನಲ್ಲಿದೆ. ಮೇ ತಿಂಗಳಲ್ಲಿ ಅಭಿಷೇಕ್ ಅವರು ಇದನ್ನು ಖರೀದಿ ಮಾಡಿದ್ದರು.

ಇದನ್ನೂ ಓದಿ:  ಪ್ರಭಾಸ್​ರ ‘ಕಲ್ಕಿ 2898 ಎಡಿ’ಯಲ್ಲಿ ‘ದಿವಂಗತ ಸ್ಟಾರ್’ ಇದು ಹೇಗೆ ಸಾಧ್ಯ?

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಜೂನ್ 27ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಕೂಡ ನಟಿಸುತ್ತಿದ್ದಾರೆ. ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಟಾಣಿ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.