ಬೇರೆ ಧರ್ಮದವರನ್ನು ಮದುವೆ ಆದಿರಿ ಎಂದು ಟೀಕಿಸಿದವರಿಗೆ ಸೋನಾಕ್ಷಿ ಕೊಟ್ಟರು ಖಡಕ್ ಉತ್ತರ
ಸೋನಾಕ್ಷಿ ಸಿನ್ಹಾ ಅವರು ಬಾಲಿವುಡ್ನಲ್ಲಿ ಗುರುತಿಸಿಕೊಂಡವರು. ಝಹೀರ್ ಇಖ್ಬಾಲ್ನ ಮದುವೆ ಆಗಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಮದುವೆಯನ್ನು ಒಪ್ಪಲ್ಲ ಎಂದು ಅನೇಕ ಹಿಂದೂಗಳು ಹೇಳಿದ್ದಾರೆ. ಅವರ ಮದುವೆಯನ್ನು ಟೀಕಿಸಿದವರಿಗೆ ಸೋನಾಕ್ಷಿ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ಅವರು ಹೇಳಿದ್ದೇನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಝಹೀರ್ ಇಖ್ಬಾಲ್ನ ಮದುವೆ ಆಗಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಮದುವೆಯನ್ನು ಒಪ್ಪಲ್ಲ ಎಂದು ಅನೇಕ ಹಿಂದೂಗಳು ಹೇಳಿದ್ದಾರೆ. ಮದುವೆ ಫೋಟೋಗಳನ್ನು ಶೇರ್ ಮಾಡುವಾಗ ಇವರಿಗೆ ಭಯ ಶುರುವಾಗಿದೆ. ಈ ಕಾರಣದಿಂದಲೇ ಕಮೆಂಟ್ಗಳನ್ನು ಆಫ್ ಮಾಡಿ ಫೋಟೋ ಹಂಚಿಕೊಳ್ಳಲಾಗಿದೆ. ಈಗ ತಮಗೆ ಬರುತ್ತಿರುವ ಕಮೆಂಟ್ಗಳ ಬಗ್ಗೆ, ಈ ಮದುವೆ ಬಗ್ಗೆ ಪರೋಕ್ಷವಾಗಿ ಒಂದೇ ಲೈನ್ನಲ್ಲಿ ಮಾತನಾಡಿದ್ದಾರೆ ಸೋನಾಕ್ಷಿ ಸಿನ್ಹಾ.
ಸೋನಾಕ್ಷಿ ಸಿನ್ಹಾ ಅವರು ಬಾಲಿವುಡ್ನಲ್ಲಿ ಗುರುತಿಸಿಕೊಂಡವರು. ಮೊದಲಿನಷ್ಟು ಬೇಡಿಕೆ ಈಗ ಅವರಿಗೆ ಉಳಿದಿಲ್ಲ. ಆದಾಗ್ಯೂ ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಾರೆ. ವೆಬ್ ಸೀರಿಸ್ ಲೋಕದಲ್ಲಿ ಅವರು ಗಮನ ಸೆಳೆಯುತ್ತಿದ್ದಾರೆ. ಅವರ ತಂದೆ ಶತ್ರುಘ್ನ ಸಿನ್ಹಾ ನಟ ಹಾಗೂ ರಾಜಕಾರಣಿ. ಈ ಕಾರಣದಿಂದ ಅವರು ಬೇರೆ ಧರ್ಮದವರನ್ನು ಮದುವೆ ಆಗಿದ್ದು ಅನೇಕರ ಕೋಪಕ್ಕೆ ಕಾರಣವಾಗಿದೆ. ಸಾಕಷ್ಟು ನೆಗೆಟಿವಿಟಿ ಅವರಿಗೆ ಸಿಗುತ್ತಿದೆ.
ಸೋನಾಕ್ಷಿ ಪರ ಪೋಸ್ಟ್ ಮಾಡಿದವರೇ ಕಡಿಮೆ ಹೀಗಿರುವಾಗ ವ್ಯಕ್ತಿಯೋರ್ವ ಸೋನಾಕ್ಷಿ ಹಾಗೂ ಝಾಹೀರ್ ಅವರ ಫೋಟೋವನ್ನು ಗ್ರಾಫಿಕ್ಸ್ ರೀತಿ ಪೋಸ್ಟ್ ಮಾಡಿದ್ದರು. ಜೊತೆಗೆ, ‘ಪ್ರೀತಿ ಜಗತ್ತಿನ ಸಾರ್ವತ್ರಿಕ ಧರ್ಮ’ ಎಂದು ಬರೆಯಲಾಗಿದೆ. ಇದನ್ನು ಸೋನಾಕ್ಷಿ ರೀ ಪೋಸ್ಟ್ ಮಾಡಿಕೊಂಡಿದ್ದಾರೆ. ಅಲ್ಲದೆ, ಈ ಪೋಸ್ಟ್ಗೆ ‘ನಿಜವಾದ ಶಬ್ದಗಳು, ಥ್ಯಾಂಕ್ ಯೂ’ ಎಂದು ಅವರು ಬರೆದುಕೊಂಡಿದ್ದಾರೆ.
ಸೋನಾಕ್ಷಿ ಮನೆಯ ಎದುರು ಕೆಲವರು ಪ್ರತಿ ಭಟನೆ ನಡೆಸುತ್ತಾ, ಈ ಮದುವೆಯನ್ನು ‘ಲವ್ ಜಿಹಾದ್’ ಎಂದು ಕರೆದಿದ್ದಾರೆ. ಇದನ್ನು ಶತ್ರುಘ್ನ ಸಿನ್ಹಾ ಅವರು ಖಂಡಿಸಿದ್ದಾರೆ. ಈ ರೀತಿಯ ಪ್ರತಿಭಟನೆ ಸರಿ ಅಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಖುಷಿಯಿಂದ ನಡೆಯಿತು ಸೋನಾಕ್ಷಿ ಸಿನ್ಹಾ-ಝಹೀರ್ ಇಖ್ಬಾಲ್ ಅಂತರ್ಧರ್ಮೀಯ ವಿವಾಹ
ಸೋನಾಕ್ಷಿ ಸಿನ್ಹಾ ಮದುವೆ ವಿಚಾರದಲ್ಲಿ ಆರಂಭದಲ್ಲಿ ಶತ್ರುಘ್ನ ಅವರು ವಿರೋಧ ವ್ಯಕ್ತಪಡಿಸಿದ್ದರು. ಆ ಬಳಿಕ ಅವರು ಮದುವೆಯನ್ನು ಬೆಂಬಲಿಸಿದರು. ಸಾಕಷ್ಟು ಖಾಸಗಿಯಾಗಿ ಈ ಮದುವೆ ನಡೆಯಿತು. ಈ ಜೋಡಿ ಬರೋಬ್ಬರಿ ಏಳು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿತ್ತು. ಕುಟುಂಬ ಹಾಗೂ ಗೆಳೆಯರಿಗಾಗಿ ಈ ದಂಪತಿ ದೊಡ್ಡ ಮಟ್ಟದಲ್ಲಿ ಪಾರ್ಟಿ ಆಯೋಜನೆ ಮಾಡಿತ್ತು. ಸಲ್ಮಾನ್ ಖಾನ್, ಕಾಜೋಲ್, ವಿದ್ಯಾ ಬಾಲನ್, ರೇಖಾ, ಹುಮಾ ಖುರೇಶಿ, ಅದಿತಿ ರಾವ್ ಹೈದರಿ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.