ಖುಷಿಯಿಂದ ನಡೆಯಿತು ಸೋನಾಕ್ಷಿ ಸಿನ್ಹಾ-ಝಹೀರ್ ಇಖ್ಬಾಲ್ ಅಂತರ್​ಧರ್ಮೀಯ ವಿವಾಹ

ಸೋನಾಕ್ಷಿ ಸಿನ್ಹಾ ಮತ್ತು ಝಹೀರ್ ಇಖ್ಬಾಲ್ ಅವರದ್ದು ಅಂತರ್​ಧರ್ಮೀಯ ವಿವಾಹ. ಹಾಗಾಗಿ ಆರಂಭದಲ್ಲಿ ಸೋನಾಕ್ಷಿ ಅವರ ತಂದೆ ಶತ್ರುಘ್ನ ಸಿನ್ಹಾಗೆ ಇದು ಇಷ್ಟವಿರಲಿಲ್ಲ ಎಂದು ಸುದ್ದಿ ಹಬ್ಬಿತ್ತು. ಬಳಿಕ ಅವರು ಅದನ್ನು ತಳ್ಳಿ ಹಾಕಿದ್ದರು. ಇಂದು (ಜೂನ್​ 23) ಶತ್ರುಘ್ನ ಸಿನ್ಹಾ ಅವರು ಖುಷಿಯಿಂದಲೇ ಮಗಳ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ.

ಖುಷಿಯಿಂದ ನಡೆಯಿತು ಸೋನಾಕ್ಷಿ ಸಿನ್ಹಾ-ಝಹೀರ್ ಇಖ್ಬಾಲ್ ಅಂತರ್​ಧರ್ಮೀಯ ವಿವಾಹ
ಸೋನಾಕ್ಷಿ ಸಿನ್ಹಾ, ಝಹೀರ್​ ಇಖ್ಬಾಲ್​
Follow us
ಮದನ್​ ಕುಮಾರ್​
|

Updated on: Jun 23, 2024 | 9:21 PM

ಖ್ಯಾತ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ಝಹೀರ್​ ಇಖ್ಬಾಲ್​ ಜೊತೆ ಅವರ ಮದುವೆ ನೆರವೇರಿದೆ. ಇಂದು (ಜೂನ್​ 23) ಮುಂಬೈನಲ್ಲಿ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಸೋನಾಕ್ಷಿ ಸಿನ್ಹಾ ಹಾಗೂ ಝಹೀರ್​ ಇಖ್ಬಾಲ್​ (Zaheer Iqbal) ಅವರು ದಾಂಪತ್ಯ ಜೀವನ ಆರಂಭಿಸಿದ್ದಾರೆ. ಇವರದ್ದು ಅಂತರ್​ಧರ್ಮೀಯ ವಿವಾಹ. ಸಂಭ್ರಮದಿಂದ ನಡೆದ ಮದುವೆಯ ಬಳಿಕ ಝಹೀರ್​ ಇಖ್ಬಾಲ್​ ಮತ್ತು ಸೋನಾಕ್ಷಿ ಸಿನ್ಹಾ ಅವರು ಮೊದಲ ಫೋಟೋವನ್ನು (Sonakshi Sinha Marriage Photo) ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು, ಆಪ್ತರು ಮತ್ತು ಸೆಲೆಬ್ರಿಟಿಗಳು ಈ ಜೋಡಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.

ವಿಶೇಷ ಏನೆಂದರೆ, ಸೋನಾಕ್ಷಿ ಸಿನ್ಹಾ ಮತ್ತು ಝಹೀರ್​ ಇಖ್ಬಾಲ್​ ಅವರದ್ದು 7 ವರ್ಷಗಳ ಹಿಂದಿನ ಪ್ರೀತಿ. ತಮ್ಮಿಬ್ಬರ ಪ್ರೇಮ್​ ಕಹಾನಿ ಬಗ್ಗೆ ಅವರು ಸಾಧ್ಯವಾದಷ್ಟು ಗೌಪ್ಯತೆ ಕಾಪಾಡಿಕೊಂಡಿದ್ದರು. ಈಗ ಅವರು ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಅಂದಹಾಗೆ, 7 ವರ್ಷಗಳ ಹಿಂದೆ ಪ್ರೀತಿ ಚಿಗುರಿದ ಈ ದಿನಾಂಕದಲ್ಲೇ (ಜೂನ್​ 23) ಅವರು ಮದುವೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ದ್ವಿಪಾತ್ರ ಮಾಡಿ ಸೈ ಎನಿಸಿಕೊಂಡ ನಟಿ ಸೋನಾಕ್ಷಿ ಸಿನ್ಹಾ

ಇನ್​ಸ್ಟಾಗ್ರಾಮ್​ನಲ್ಲಿ ಝಹೀರ್​ ಇಖ್ಬಾಲ್​ ಮತ್ತು ಸೋನಾಕ್ಷಿ ಸಿನ್ಹಾ ಅವರು ತಮ್ಮ ಲವ್​ ಸ್ಟೋರಿಯ ಫ್ಲ್ಯಾಶ್​ಬ್ಯಾಕ್​ ಬಗ್ಗೆ ತಿಳಿಸಿದಾರೆ.‘7 ವರ್ಷಗಳ ಹಿಂದೆ ಇದೇ ದಿನಾಂಕದಂದು (23.06.2017) ಪರಸ್ಪರ ನಾವು ನಮ್ಮ ಕಣ್ಣಿನಲ್ಲಿ ನಿರ್ಮಲವಾದ ಪ್ರೀತಿಯನ್ನು ಕಂಡೆವು ಮತ್ತು ಅದನ್ನು ಹಿಡಿದಿಟ್ಟುಕೊಳ್ಳಲು ನಿರ್ಧರಿಸಿದೆವು. ಅದೇ ಪ್ರೀತಿ ನಮಗೆ ಎಲ್ಲ ಸವಾಲುಗಳನ್ನು ಎದುರಿಸಲು ದಾರಿ ತೋರಿಸಿದೆ. ನಮ್ಮನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ’ ಎಂದು ನವ ದಂಪತಿ ಪೋಸ್ಟ್​ ಮಾಡಿದ್ದಾರೆ.

View this post on Instagram

A post shared by Sonakshi Sinha (@aslisona)

‘ಎರಡು ಕುಟುಂಬದವರ ಮತ್ತು ದೇವರ ಆಶೀರ್ವಾದದಿಂದ ನಾವು ಇಂದು ಸತಿ-ಪತಿ ಆಗಿದ್ದೇವೆ’ ಎಂದು ಬರೆದುಕೊಳ್ಳುವ ಮೂಲಕ ಸೋನಾಕ್ಷಿ ಸಿನ್ಹಾ ಮತ್ತು ಝಹೀರ್ ಇಖ್ಬಾಲ್​ ಅವರು ತಮ್ಮ ಮದುವೆಯ ಸಿಹಿ ಸುದ್ದಿಯನ್ನು ಫೋಟೋ ಸಮೇತ ನೀಡಿದ್ದಾರೆ. ಇದು ಅಂತರ್​ಧರ್ಮೀಯ ವಿವಾಹ ಆದ್ದರಿಂದ ಆರಂಭದಲ್ಲಿ ಸೋನಾಕ್ಷಿ ಸಿನ್ಹಾ ಅವರ ತಂದೆ ಶತ್ರುಘ್ನ ಸಿನ್ಹಾಗೆ ಇಷ್ಟ ಇರಲಿಲ್ಲ ಎಂದು ಗಾಸಿಪ್​ ಹಬ್ಬಿತ್ತು. ನಂತರದ ದಿನಗಳಲ್ಲಿ ಅವರು ಆ ಮಾತನ್ನು ತಳ್ಳಿ ಹಾಕಿದ್ದರು. ಇಂದು ಶತ್ರುಘ್ನ ಸಿನ್ಹಾ ಅವರು ಖುಷಿಯಿಂದಲೇ ಪಾಲ್ಗೊಂಡಿದ್ದಾರೆ. ರಾತ್ರಿ ಬಾಲಿವುಡ್​ನ ಆಪ್ತರಿಗಾಗಿ ರಿಸೆಪ್ಷನ್​ ಆಯೋಜಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ