ಸೋನಂ ಕಪೂರ್ ಬಗ್ಗೆ ಟ್ರೋಲ್ ಮಾಡಿದ ಯೂಟ್ಯೂಬರ್ಗೆ ನೋಟಿಸ್ ನೀಡಿದ ಆನಂದ್ ಅಹುಜಾ
2007ರಲ್ಲಿ ರಿಲೀಸ್ ಆದ ‘ಸಾವರಿಯಾ’ ಅವರ ನಟನೆಯ ಮೊದಲ ಸಿನಿಮಾ. ಈ ಸಿನಿಮಾ ರಿಲೀಸ್ ಆದ ಬಳಿಕ ಅವರು ಹಲವು ಚಿತ್ರಗಳಲ್ಲಿ ನಟಿಸಿದರು. ಆದರೆ, ಅವರ ನಟನೆಯಲ್ಲಿ ಹೆಚ್ಚು ಬದಲಾವಣೆ ಏನೂ ಕಂಡಿಲ್ಲ. ಈ ಬಗ್ಗೆ ಟ್ರೋಲ್ ಮಾಡಲಾಗಿದೆ.

ಬಾಲಿವುಡ್ ನಟಿ ಸೋನಂ ಕಪೂರ್ (Sonam Kapoor) ಅವರಿಗೆ ಟ್ರೋಲ್ ಹೊಸದಲ್ಲ. ಅವರ ದೇಹದ ಬಗ್ಗೆ, ಅವರ ನಟನೆಯ ಬಗ್ಗೆ ಟೀಕೆಗಳು ಆಗಾಗ ವ್ಯಕ್ತವಾಗುತ್ತಲೇ ಇರುತ್ತವೆ. ಇದಕ್ಕೆ ಸೋನಂ ಕಪೂರ್ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅವರ ಬಗ್ಗೆ ಹುಟ್ಟಿರುವ ಟ್ರೋಲ್ಗಳಿಗೆ ಅವರು ಉತ್ತರಿಸುವ ಗೋಜಿಗೂ ಹೋಗಿಲ್ಲ. ಆದರೆ, ಸೋನಂ ಕಪೂರ್ ಪತಿ ಆನಂದ್ ಅಹುಜಾ ಅವರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಂತಿದೆ. ಈ ಕಾರಣದಿಂದಲೇ ಪತ್ನಿಯನ್ನು ಟೀಕಿಸಿದ ಯೂಟ್ಯೂಬರ್ಗೆ ನೋಟಿಸ್ ಕಳುಹಿಸಿದ್ದಾರೆ. ಆ ಯೂಟ್ಯೂಬರ್ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ.
ಸೋನಂ ಕಪೂರ್ ಅವರು ಅನಿಲ್ ಕಪೂರ್ ಮಗಳು. ಈ ಒಂದೇ ಕಾರಣಕ್ಕೆ ಅವರಿಗೆ ಚಿತ್ರರಂಗದಲ್ಲಿ ನಟಿಸೋಕೆ ಸುಲಭದಲ್ಲಿ ಅವಕಾಶ ಸಿಕ್ಕಿತು. 2007ರಲ್ಲಿ ರಿಲೀಸ್ ಆದ ‘ಸಾವರಿಯಾ’ ಅವರ ನಟನೆಯ ಮೊದಲ ಸಿನಿಮಾ. ಈ ಸಿನಿಮಾ ರಿಲೀಸ್ ಆದ ಬಳಿಕ ಅವರು ಹಲವು ಚಿತ್ರಗಳಲ್ಲಿ ನಟಿಸಿದರು. ಆದರೆ, ಅವರ ನಟನೆಯಲ್ಲಿ ಹೆಚ್ಚು ಬದಲಾವಣೆ ಏನೂ ಕಂಡಿಲ್ಲ. ಈ ಬಗ್ಗೆ ಟ್ರೋಲ್ ಮಾಡಲಾಗಿದೆ.
ಯೂಟ್ಯೂಬ್ ಕಾಂಟೆಂಟ್ ಕ್ರಿಯೇಟರ್ ರಾಗಿಣಿ ಅವರು ಸೋನಂ ಬಗ್ಗೆ ಟೀಕೆ ಮಾಡಿದ್ದರು. ಕೆಲವು ಒಳ್ಳೆಯ ವಿಚಾರಗಳನ್ನು ಹೇಳಿದರೆ, ಇನ್ನೂ ಕೆಲವು ವಿಚಾರಗಳಲ್ಲಿ ಅವರನ್ನು ಟೀಕೆ ಮಾಡಿದ್ದರು. ಈ ವಿಡಿಯೋ ಆನಂದ್ ಅಹೂಜ ಅವರನ್ನು ಕೆಣಕಿದೆ. ಹೀಗಾಗಿ, ಆನಂದ್ ಅವರು ಪ್ರಕರಣ ದಾಖಲು ಮಾಡಿದ್ದಾರೆ. ರಾಗಿಣಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ‘ಒಂದೇ ವಿಡಿಯೋದಿಂದ ಅವರಿಗೆ ತಲೆಕೆಟ್ಟು ಹೋಗಿದೆ’ ಎಂದು ರಾಗಿಣಿ ಬರೆದುಕೊಂಡಿದ್ದಾರೆ.
ರಾಗಿಣಿ ಅವರು ಹೊಸ ವಿಡಿಯೋ ಮಾಡಿ ಫೋಟೋ ಪೋಸ್ಟ್ ಮಾಡಿದ್ದಾರೆ. ನೋಟಿಸ್ ಬಗ್ಗೆ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಈ ರೀತಿ ಮಾಡಿದ್ದು ಸರಿ ಅಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಸೋನಂ ಕಪೂರ್ ಬಗ್ಗೆ ರಾಣಾ ದಗ್ಗುಬಾಟಿ ಹೇಳಿಕೆ: ಪ್ರತಿಕ್ರಿಯೆ ನೀಡಿದ ದುಲ್ಕರ್ ಸಲ್ಮಾನ್
ಸಿನಿಮಾ ವಿಚಾರಕ್ಕೆ ಬರೋದಾದರೆ ಸುಜಯ್ ಘೋಷ್ ನಿರ್ದೇಶನದ ‘ಬ್ಲೈಂಡ್’ ಸಿನಿಮಾದಲ್ಲಿ ಸೋನಂ ಕಪೂರ್ ನಟಿಸಿದ್ದರು. ಈ ಚಿತ್ರ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಯಿತು. ಪೊಲೀಸ್ ಕೆಲಸದಲ್ಲಿರುವ ನಾಯಕಿ ಅಪಘಾತದಲ್ಲಿ ಕಣ್ಣು ಕಳೆದುಕೊಳ್ಳುತ್ತಾಳೆ. ಆದಾಗ್ಯೂ ಅವಳು ಸರಣಿ ಹಂತಕನ ಕಂಡು ಹಿಡಿಯುತ್ತಾಳೆ. ಈ ರೀತಿಯ ಕತೆಯನ್ನು ಸಿನಿಮಾ ಹೊಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ