ನಟ ಅನಿಲ್ ಕಪೂರ್ (Anil Kapoor) ಅವರಿಗೆ ಎಲ್ಲರೂ ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ. ಇಂದು (ಡಿಸೆಂಬರ್ 24) ಅವರು 67ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆರಂಭದಲ್ಲಿ ಕನ್ನಡ, ತೆಲುಗು ಸಿನಿಮಾಗಳಲ್ಲಿ ನಟಿಸಿದ ಅವರು ನಂತರ ಬಾಲಿವುಡ್ನಲ್ಲಿ ಬ್ಯುಸಿಯಾದರು. ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಇರುವ ಅವರು 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಪೋಷಕ ಪಾತ್ರಗಳ ಮೂಲಕ ಅನಿಲ್ ಕಪೂರ್ ಗಮನ ಸೆಳೆಯುತ್ತಿದ್ದಾರೆ. ಈ ವರ್ಷ ರಿಲೀಸ್ ಆಗಿ ಸೂಪರ್ ಹಿಟ್ ಆದ ‘ಅನಿಮಲ್’ (Animal) ಸಿನಿಮಾದಲ್ಲಿ ಕಥಾ ನಾಯಕನ ತಂದೆ ಪಾತ್ರದಲ್ಲಿ ನಟಿಸಿ ಅವರು ಭೇಷ್ ಎನಿಸಿಕೊಂಡರು.
ಅನಿಲ್ ಕಪೂರ್ ಅವರು ಬಾಲಿವುಡ್ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಇದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 2002ರಲ್ಲಿ ಅವರು ಸಿನಿಮಾ ನಿರ್ಮಾಣಕ್ಕೆ ಇಳಿದರು. ‘ಬದಾಯಿ ಹೋ ಬದಾಯಿ’ ಅವರ ನಿರ್ಮಾಣದ ಮೊದಲ ಸಿನಿಮಾ. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಅನಿಲ್ ಕಪೂರ್ ರಾಷ್ಟ್ರ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಅನಿಲ್ ಕಪೂರ್ ಅವರು ಈಗಲೂ ಹ್ಯಾಂಡ್ಸಮ್ ಆಗಿ ಇದ್ದಾರೆ. ಫಿಟ್ನೆಸ್ಗೆ ಅವರು ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.
ಅನಿಲ್ ಕಪೂರ್ ಅವರ ಆಸ್ತಿ ಮೊತ್ತ 134 ಕೋಟಿ ರೂಪಾಯಿ ಎನ್ನಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅವರು ಸಾಕಷ್ಟು ಹೂಡಿಕೆ ಮಾಡಿದ್ದು, ವರ್ಷದಿಂದ ವರ್ಷಕ್ಕೆ ಆಸ್ತಿಯಲ್ಲಿ ಏರಿಕೆ ಆಗುತ್ತಿದೆ. ಒಂದು ವರದಿಯ ಪ್ರಕಾರ ಪ್ರತಿ ವರ್ಷ ಅವರಿಗೆ 12 ಕೋಟಿ ರೂಪಾಯಿ ಸಂಭಾವನೆ ಸಿಗುತ್ತಿದೆ. ಅನಿಲ್ ಕಪೂರ್ ಅವರು ಪ್ರತಿ ಚಿತ್ರಕ್ಕೆ 1-2 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ಪೋಷಕ ಪಾತ್ರ ಆಗಿರುವುದರಿಂದ ಅವರು ಇಷ್ಟು ಹಣ ಪಡೆಯುತ್ತಿದ್ದಾರೆ. ಹಲವು ಬ್ರ್ಯಾಂಡ್ಗಳ ಪ್ರಚಾರ ಮಾಡುವ ಅವರು ಪ್ರತಿ ಜಾಹೀರಾತಿಗೆ 55 ಲಕ್ಷ ರೂಪಾಯಿ ಬೇಡಿಕೆ ಇಡುತ್ತಾರೆ. ಸ್ಪೋಟಿಫೈ, ಮಲ್ಬಾರ್ ಗೋಲ್ಡ್ ಆ್ಯಂಡ್ ಡೈಮಂಡ್, ಏರ್ಟೆಲ್ ಮೊದಲಾದ ಸಂಸ್ಥೆಗಳ ಪ್ರಚಾರ ಮಾಡುತ್ತಾರೆ.
ಇದನ್ನೂ ಓದಿ: ಅನಿಲ್ ಕಪೂರ್ ಕುಟುಂಬ ಎಷ್ಟು ದೊಡ್ಡದು ಗೊತ್ತಾ? ಇಲ್ಲಿದೆ ಫ್ಯಾಮಿಲಿ ಟ್ರೀ
ಅನಿಲ್ ಕಪೂರ್ ಅವರು ಜುಹುದಲ್ಲಿ ಮನೆ ಹೊಂದಿದ್ದಾರೆ. ಇದರ ಬೆಲೆ 30 ಕೋಟಿ ರೂಪಾಯಿ. ಇಲ್ಲಿ ಥಿಯಟೇರ್, ಜಿಮ್ ಎಲ್ಲವೂ ಇದೆ. ಕಾರು ನಿಲ್ಲಿಸಲು ದೊಡ್ಡ ಪಾರ್ಕಿಂಗ್ ಏರಿಯಾ ಇದೆ. ದುಬೈನಲ್ಲಿ ಅನಿಲ್ ಕಪೂರ್ ಮನೆ ಹೊಂದಿದ್ದಾರೆ. ದುಬೈಗೆ ಭೇಟಿ ನೀಡಿದಾಗ ಅವರು ಇಲ್ಲಿಯೇ ಉಳಿದುಕೊಳ್ಳುತ್ತಾರೆ. ಕ್ಯಾಲಿಫೋರ್ನಿಯಾದಲ್ಲಿ ಅವರು ಮನೆ ಹೊಂದಿದ್ದಾರೆ.
ಇದನ್ನೂ ಓದಿ: ‘ಮಿಸ್ಟರ್ ಇಂಡಿಯಾ’ಗೆ 64: ಇಲ್ಲಿದೆ ಅನಿಲ್ ಕಪೂರ್ ಬದುಕಿನ ಚಿತ್ರನೋಟ
ಅನಿಲ್ ಕಪೂರ್ ಮಗ ಹರ್ಷವರ್ಧನ್ ಕಪೂರ್ ಕ್ಯಾಲಿಫೋರ್ನಿಯಾದಲ್ಲಿ ಶಿಕ್ಷಣ ಪಡೆದಿದ್ದಾರೆ. ಮಗನಿಗೋಸ್ಕರ ಅವರು ಈ ಮನೆ ಖರೀದಿ ಮಾಡಿದ್ದರು. ಲಂಡನ್ನಲ್ಲೂ ಅನಿಲ್ ಕಪೂರ್ ನಿವಾಸ ಇದೆ. ಅನಿಲ್ ಕಪೂರ್ಗೆ ಕಾರ್ ಬಗ್ಗೆ ಕ್ರೇಜ್ ಇದೆ. ಹಲವು ಐಷಾರಾಮಿ ಕಾರುಗಳು ಅವರ ಬಳಿ ಇವೆ. ಲ್ಯಾಂಬೊರ್ಗಿನಿ, ಪೋರ್ಷಾ, ಬೆಂಟ್ಲಿ, ಜಾಗ್ವಾರ್ ಕಾರುಗಳನ್ನು ಅವರು ಹೊಂದಿದ್ದಾರೆ. ಮಕ್ಕಳಾದ ಹರ್ಷವರ್ಧನ್ ಕಪೂರ್ ಹಾಗೂ ಸೋನಂ ಕಪೂರ್ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.