ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಇವರಲ್ಲಿ ಯಾರು ಹೆಚ್ಚು ಶ್ರೀಮಂತರು?
ರ‍್ಯಾಪಿಡ್ ಫೈರ್ ರೌಂಡ್ ಇತ್ತು. ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಇವರಲ್ಲಿ ಯಾರನ್ನು ಹೆಚ್ಚು ನಂಬುತ್ತೀರಿ ಎಂದು ಅಜಯ್ ದೇವಗನ್ಗೆ ಕೇಳಿದರು ಕರಣ್. ಇದಕ್ಕೆ ಆಸ್ತಿ ಲೆಕ್ಕಾಚಾರ ತಂದಿದ್ದಾರೆ ಅಜಯ್ ದೇವಗನ್.
ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ (Salman Khan) ಬಾಲಿವುಡ್ನಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಇಬ್ಬರೂ ಹೀರೋಗಳು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇಬ್ಬರ ಬಳಿ ಸಾವಿರಾರು ಕೋಟಿ ರೂಪಾಯಿ ಆಸ್ತಿ ಇದೆ. ಹಾಗಾದರೆ, ಇವರ ಬಳಿ ನಿಜಕ್ಕೂ ಶ್ರೀಮಂತರು ಯಾರು? ಹೀಗೆ ಕೇಳಿದರೆ ಶಾರುಖ್ ಹಾಗೂ ಸಲ್ಮಾನ್ ಅಂತೂ ಉತ್ತರಿಸೋದು ಅನುಮಾನ. ಈ ಪ್ರಶ್ನೆಗೆ ಅಜಯ್ ದೇವಗನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇವರಲ್ಲಿ ಯಾರು ಶ್ರೀಮಂತರು ಎನ್ನುವ ಕುರಿತು ಮಾಹಿತಿ ನೀಡಿದ್ದಾರೆ.
ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದ ಎಂಟನೇ ಸೀಸನ್ ಪ್ರಸಾರ ಕಾಣುತ್ತಿದೆ. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಕರೀನಾ ಕಪೂರ್, ಆದಿತ್ಯ ರಾಯ್ ಕಪೂರ್, ಕಾಜೋಲ್, ರಾಣಿ ಮುಖರ್ಜಿ ಮುಂತಾದ ಸೆಲೆಬ್ರಿಟಿಗಳು ಈ ಸೀಸನ್ನಲ್ಲಿ ಅತಿಥಿಯಾಗಿ ಆಗಮಿಸಿದ್ದರು. ಇತ್ತೀಚೆಗೆ ನಟ ಅಜಯ್ ದೇವಗನ್ ಮತ್ತು ನಿರ್ಮಾಪಕ-ನಿರ್ದೇಶಕ ರೋಹಿತ್ ಶೆಟ್ಟಿ ಈ ಶೋಗೆ ಆಗಮಿಸಿದ್ದಾರೆ. ‘ಸಿಂಗಂ ಅಗೇನ್’ ಮಾಡುತ್ತಿರುವ ಇವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ. ಈ ವೇಳೆ ಕರಣ್ ಕೇಳಿದ ಒಂದು ಪ್ರಶ್ನೆಗೆ ಅಜಯ್ ನೇರವಾಗಿ ಉತ್ತರಿಸಿದರು.
ರ‍್ಯಾಪಿಡ್ ಫೈರ್ ರೌಂಡ್ ಇತ್ತು. ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಇವರಲ್ಲಿ ಯಾರನ್ನು ಹೆಚ್ಚು ನಂಬುತ್ತೀರಿ ಎಂದು ಅಜಯ್ ದೇವಗನ್ಗೆ ಕೇಳಿದರು ಕರಣ್. ಈ ಪ್ರಶ್ನೆಗೆ ಅಜಯ್ ಬಹಳ ಜಾಣ್ಮೆಯಿಂದ ಉತ್ತರಿಸಿದರು. ‘ಬ್ಯಾಂಕ್ ಬ್ಯಾಲೆನ್ಸ್ ಅನ್ನು ಲೆಕ್ಕಹಾಕಿದರೆ ಶಾರುಖ್ ಖಾನ್ ಅವರ ಬಳಿ ಹೆಚ್ಚು ಹಣ ಇದೆ. ಹೀಗಾಗಿ ಅವರನ್ನು ಹೆಚ್ಚು ನಂಬುತ್ತೇನೆ’ ಎಂದಿದ್ದಾರೆ ಅಜಯ್. ಅವರ ಉತ್ತರವನ್ನು ಕೇಳಿದ ಕರಣ್ ಕೂಡ ತಲೆಯಾಡಿಸುತ್ತಾ, ‘ಹೌದು, ವಿಶೇಷವಾಗಿ ಈ ವರ್ಷ’ ಎಂದರು. 2023ರಲ್ಲಿ ಶಾರುಖ್ ಅವರ ಮೂರು ಚಿತ್ರಗಳು ರಿಲೀಸ್ ಆಗಿವೆ. ಎಲ್ಲಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಕಂಡಿವೆ.
ಇದನ್ನೂ ಓದಿ: ಅಪ್ಪನಂತೆ ನಟಿಸಿದ ಶಾರುಖ್ ಪುತ್ರ ಅಬ್ರಾಮ್, ವಿಡಿಯೋ ಸಖತ್ ವೈರಲ್
ನಾಲ್ಕು ವರ್ಷಗಳ ಬ್ರೇಕ್ನ ನಂತರ ನಂತರ ಶಾರುಖ್ ‘ಪಠಾಣ್’ ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದರು. ಈ ಚಿತ್ರ ಸಾವಿರ ಕೋಟಿ ರೂಪಾಯಿ ಗಳಿಸಿತು. ಆ ಬಳಿಕ ರಿಲೀಸ್ ಆದ ‘ಜವಾನ್’ ಸಿನಿಮಾ ಕೂಡ ಒಳ್ಳೆಯ ಗಳಿಕೆ ಮಾಡಿದೆ. ‘ಡಂಕಿ’ ಚಿತ್ರ ಗುರುವಾರ (ಡಿಸೆಂಬರ್ 21) ಬಿಡುಗಡೆಯಾಗಿದೆ. ಈ ಚಿತ್ರ ವಿಮರ್ಶೆಯಲ್ಲಿ ಗೆದ್ದರೂ ಸಾಧಾರಣ ಗಳಿಕೆ ಮಾಡುತ್ತಿದೆ. ಸಲ್ಮಾನ್ ಖಾನ್ ಅವರ ನಟನೆಯ ‘ಟೈಗರ್ 3′ ಸಿನಿಮಾ ಸಾಧಾರಣ ಗಳಿಕೆ ಕಂಡಿದೆ. ಶಾರುಖ್ ಖಾನ್ ಒಟ್ಟೂ ಆಸ್ತಿ 6300 ಕೋಟಿ ರೂಪಾಯಿ ಇದೆ. ಸಲ್ಮಾನ್ ಖಾನ್ ಆಸ್ತಿ 2000 ಕೋಟಿ ರೂಪಾಯಿ ಇದೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ