‘ಅನಿಮಲ್​’ ಸಿನಿಮಾಗೆ ತೃಪ್ತಿ ದಿಮ್ರಿ ಪಡೆದ ಸಂಭಾವನೆ ಎಷ್ಟು ಗೊತ್ತಾ?

|

Updated on: Mar 13, 2024 | 9:10 PM

ರಣಬೀರ್​ ಕಪೂರ್​ ನಟನೆಯ ‘ಅನಿಮಲ್​’ ಸಿನಿಮಾದಲ್ಲಿ ತೃಪ್ತಿ ದಿಮ್ರಿ ಅವರು ಅತಿಥಿ ಪಾತ್ರ ಮಾಡಿದರು. ಹೀರೋಯಿನ್​ಗಿಂತಲೂ ಹೆಚ್ಚು ಶೈನ್​ ಆದ ಆ ಪಾತ್ರದಿಂದ ತೃಪ್ತಿ ಅವರ ಚಾರ್ಮ್​ ಬದಲಾಗಿದೆ. ಈಗ ಅವರನ್ನು ಹುಡುಕಿಕೊಂಡು ದೊಡ್ಡ ದೊಡ್ಡ ಆಫರ್​ಗಳು ಬರುತ್ತಿವೆ. ‘ಅನಿಮಲ್​’ ಸಿನಿಮಾ ಗೆಲುವಿನ ಬಳಿಕ ತೃಪ್ತಿ ಅವರು ಸ್ಟಾರ್​ ನಟಿಯಾಗಿದ್ದಾರೆ.

‘ಅನಿಮಲ್​’ ಸಿನಿಮಾಗೆ ತೃಪ್ತಿ ದಿಮ್ರಿ ಪಡೆದ ಸಂಭಾವನೆ ಎಷ್ಟು ಗೊತ್ತಾ?
ತೃಪ್ತಿ ದಿಮ್ರಿ
Follow us on

2023ರಲ್ಲಿ ಸೂಪರ್​ ಹಿಟ್​ ಆದ ‘ಅನಿಮಲ್​’ (Animal) ಸಿನಿಮಾದಿಂದ ನಟಿ ತೃಪ್ತಿ ದಿಮ್ರಿ (Tripti Dimri) ಅವರು ಪಡೆದ ಜನಪ್ರಿಯತೆ ಅಷ್ಟಿಷ್ಟಲ್ಲ. ಆ ಸಿನಿಮಾದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರೂ ಕೂಡ ಅವರಿಗಿಂತಲೂ ಹೆಚ್ಚು ಸುದ್ದಿ ಆಗಿದ್ದು ತೃಪ್ತಿ ದಿಮ್ರಿ. ಯಾಕೆಂದರೆ ಅವರು ಮಾಡಿದ ಪಾತ್ರ ಆ ರೀತಿ ಇತ್ತು. ಅದು ಅತಿಥಿ ಪಾತ್ರ ಆಗಿದ್ದರೂ ಕೂಡ ಸಿಕ್ಕಾಪಟ್ಟೆ ಟಾಕ್​ ಸೃಷ್ಟಿ ಮಾಡಿತು. ಹಾಗಾದರೆ ತೃಪ್ತಿ ದಿಮ್ರಿ ಅವರು ಅನಿಮಲ್​’ ಸಿನಿಮಾದಲ್ಲಿ ನಟಿಸಲು ಪಡೆದ ಸಂಭಾವನೆ (Tripti Dimri Remuneration) ಎಷ್ಟು ಎಂಬ ಪ್ರಶ್ನೆ ಅಭಿಮಾನಿಗಳಿಗೆ ಇದೆ. ಅದಕ್ಕೆ ಈಗ ಉತ್ತರ ಸಿಕ್ಕಿದೆ. ವರದಿಗಳ ಪ್ರಕಾರ, ತೃಪ್ತಿ ದಿಮ್ರಿ ಅವರು 40 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದರು.

ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್​’ ಸಿನಿಮಾದಲ್ಲಿ ರಣಬೀರ್​ ಕಪೂರ್​, ಅನಿಲ್​ ಕಪೂರ್​, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್​, ತೃಪ್ತಿ ದಿಮ್ರಿ ಮುಂತಾದವರು ನಟಿಸಿದರು. ತೃಪ್ತಿ ದಿಮ್ರಿ ಅವರ ಪಾತ್ರ ತುಂಬ ಹಾಟ್ ಆಗಿತ್ತು. ಅವರು ತೆರೆಮೇಲೆ ಕಾಣಿಸಿಕೊಳ್ಳುವುದು ಕೆಲವೇ ದೃಶ್ಯಗಳಲ್ಲಿ ಆದರೂ ಕೂಡ ಅವರ ಜನಪ್ರಿಯತೆ ಸಖತ್​ ಹೆಚ್ಚಾಯಿತು. ಅವರ ಅಭಿಮಾನಿ ಬಳಗ ಕೂಡ ಹಿರಿದಾಗಿದೆ.

ಇದನ್ನೂ ಓದಿ: ‘ಅನಿಮಲ್​’ ಸಿನಿಮಾದ ನಟಿ ತೃಪ್ತಿ ದಿಮ್ರಿ ಬಾಯ್​ಫ್ರೆಂಡ್​ ಫೋಟೋ ವೈರಲ್​

ತೃಪ್ತಿ ದಿಮ್ರಿ ಅವರು ‘ಅನಿಮಲ್​’ ಸಿನಿಮಾದಲ್ಲಿ ನಟಿಸಿದ ಬಳಿಕ ಅವರ ಚಾರ್ಮ್​ ಬದಲಾಗಿದೆ. ಬಾಲಿವುಡ್​ನಲ್ಲಿ ಅನೇಕ ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಬಹುನಿರೀಕ್ಷಿತ ಸಿನಿಮಾಗಳಲ್ಲಿ ಅವರಿಗೆ ಪಾತ್ರ ಸಿಗುತ್ತಿದೆ. ‘ಭೂಲ್​ ಭುಲಯ್ಯ 3’, ‘ಆಶಿಕಿ 3’ ಮುಂತಾದ ಸಿನಿಮಾಗಳಿಗೆ ಅವರು ಆಯ್ಕೆ ಆಗಿದ್ದಾರೆ. ಅವರನ್ನು ಮತ್ತೆ ಮತ್ತೆ ದೊಡ್ಡ ಪರದೆ ಮೇಲೆ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.

ಇದನ್ನೂ ಓದಿ: ‘ಅನಿಮಲ್​’ ಸಿನಿಮಾದ ಸುಂದರಿ ತೃಪ್ತಿ ದಿಮ್ರಿಗೆ ಈಗ 30ರ ಪ್ರಾಯ

ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಇರುವ ತೃಪ್ತಿ ದಿಮ್ರಿ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಬುಲ್​ ಬುಲ್​’, ‘ಕಲಾ’ ಮುಂತಾದ ಸಿನಿಮಾಗಳಲ್ಲಿ ಅವರು ಅಭಿನಯಿಸಿದರೂ ಕೂಡ ಭಾರಿ ಫೇಮಸ್​ ಆಗಿದ್ದು ‘ಅನಿಮಲ್​’ ಸಿನಿಮಾದಿಂದ. ಈಗ ಇನ್​ಸ್ಟಾಗ್ರಾಮ್​ನಲ್ಲಿ ಅವರ ಫಾಲೋವರ್ಸ್​ ಸಂಖ್ಯೆ 50 ಲಕ್ಷಕ್ಕೆ ಏರಿದೆ. ‘ಅನಿಮಲ್​’ ಸಿನಿಮಾ ಮಾರ್ಚ್​ 17ರಂದು ಮೊದಲ ಬಾರಿಗೆ ಟಿವಿಯಲ್ಲಿ ಪ್ರಸಾರ ಆಗಲಿದೆ. ‘ಸೋನಿ ಮ್ಯಾಕ್ಸ್​’ ವಾಹಿನಿಯಲ್ಲಿ ಅಂದು ಸಂಜೆ 7 ಗಂಟೆಗೆ ಪ್ರಸಾರ ಆಗಲಿದೆ. ಆ ಬಳಿಕ ತೃಪ್ತಿ ದಿಮ್ರಿ ಅವರ ಫಾಲೋವರ್ಸ್​ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.